Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಸ್ಸೆಲ್ ಸಮೂಹದ 90 ವರ್ಷದ ಆಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು, ಎಸ್ಸೆಲ್ ಸಮೂಹದ 90ನೇ ವರ್ಷದ ಸಂಭ್ರಮದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಶ್ರೀ. ಪ್ರಣಬ್ ಮುಖರ್ಜಿ ಅವರೂ ಭಾಗಿಯಾಗಿದ್ದರು.

ಪ್ರಧಾನಿಯವರನ್ನು ಸ್ವಾಗತಿಸಿದ ಎಸ್ಸೆಲ್ ಸಮೂಹದ ಅಧ್ಯಕ್ಷ ಶ್ರೀ. ಸುಭಾಶ್ ಚಂದ್ರ, ಕಾರ್ಯಕ್ರಮದ ಆಹ್ವಾನವನ್ನು ಮನ್ನಿಸಿದ್ದಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು. ನೀರಿನ ಪೂರೈಕೆ, ವಿದ್ಯುತ್ ಸರಬರಾಜು, ಸ್ವಚ್ಛ ಭಾರತ ಮತ್ತು ಕೈಗೆಟಕುವ ದರದ ವಸತಿ ಸೇರಿದಂತೆ ಎಸ್ಸೆಲ್ ಸಮೂಹದ ಇತ್ತೀಚಿನ ಸಾಮಾಜಿಕ ಉಪಕ್ರಮಗಳ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ಪ್ರಧಾನಿಯರು ಎರಡು ಸಾಮಾಜಿಕ ಉಪಕ್ರಮಗಳನ್ನು ಉದ್ಘಾಟಿಸಿದರು.

ಇವುಗಳಲ್ಲಿ ಸಾರಥಿ – ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಂಥ ವಿಷಯಗಳಲ್ಲಿ ಜನರ ಸಬಲೀಕರಣ ಕಾರ್ಯಕ್ರಮ; ಮತ್ತು ಡಿ.ಎಸ್.ಸಿ.

ಪ್ರತಿಷ್ಠಾನದ 5000 ಕೋಟಿ ರೂ. ನಿಧಿಯ ನೆರವಿನ ಅಗತ್ಯ ಇರುವ ಜನರ ಸಬಲೀಕರಣ ಕಾರ್ಯಕ್ರವೂ ಸೇರಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಕಾರ್ಯಕ್ರಮ ಭಾರತೀಯ ಸಂಪ್ರದಾಯದ ದೃಷ್ಟಾಂತ ಎಂದು ಬಣ್ಣಿಸಿದರು.

ಭಾರತದಲ್ಲಿ ಎಂಥ ಒಂದು ಸಂಪ್ರದಾಯ ಇದೆ ಎಂದರೆ, ಮುಂದಿನ ಪೀಳಿಗೆ ಕೌಟುಂಬಿಕ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತದೆ, ಮತ್ತು ತಮ್ಮ ಸಾಮರ್ಥ್ಯವನ್ನೂ ಸೇರ್ಪಡೆ ಮಾಡಿ ಕುಟುಂಬಕ್ಕೆ ಕೊಡುಗೆ ನೀಡುತ್ತದೆ ಎಂದರು.

ಶ್ರೀ.ನಂದಕಿಶೋರ ಗೊಯಂಕಾ ಅವರೊಂದಿಗೆ ತಮ್ಮ ಹಿಂದಿನ ಭೇಟಿಯನ್ನು ಸ್ಮರಿಸಿದ ಅವರು, ಅವರ ಕುಟುಂಬ ಸದಾ ಹೊಸ ಕಲ್ಪನೆಗಳಿಗೆ ಮುಕ್ತವಾಗಿದೆ ಮತ್ತು ಎಲ್ಲ ಸವಾಲುಗಳನ್ನೂ ಒಂದು ಅವಕಾಶವೆಂದು ಪರಿಗಣಿಸುತ್ತದೆ, ಮಣ್ಣಿನಿಂದ ಉಪಗ್ರಹದವರೆಗೆ ಎಲ್ಲ ಶ್ರೇಣಿಯ ಉಪಕ್ರಮಗಳಲ್ಲೂ ತನ್ನ ಅಸ್ತಿತ್ವ ಪ್ರದರ್ಶಿಸುತ್ತದೆ ಎಂದರು.

ಎಸ್ಸೆಲ್ ಸಮೂಹದ ಸಾಮಾಜಿಕ ಉಪಕ್ರಮಗಳನ್ನು ಪ್ರಶಂಸಿಸಿದ ಪ್ರಧಾನಮಂತ್ರಿಯವರು, ಸ್ವಚ್ಛ ಭಾರತ ಅಭಿಯಾನ ದೊಡ್ಡ ಸಂಖ್ಯೆಯ ಉದ್ದಿಮಿಗಳು ಹೊರಹೊಮ್ಮಲು ಅವಕಾಶ ಕಲ್ಪಿಸಿದೆ ಎಂದರು. “ಸಾರಥಿ’’ ಉತ್ತಮವಾದ ಹಕ್ಕು ಮತ್ತು ಕರ್ತವ್ಯದ ಮಿಶ್ರಣವನ್ನು ತೋರಿದೆ, ಡಿ.ಎಸ್.ಸಿ. ಪ್ರತಿಷ್ಠಾನ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವವರನ್ನು ಸೃಷ್ಟಿಸಲು ನೆರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರಿಗೂ 2022 –ರಲ್ಲಿ ದೇಶ ಸ್ವಾತಂತ್ರ್ಯದ 75ನೇ ವರ್ಷ ಆಚರಿಸುವ ಹೊತ್ತಿಗೆ ಏನು ಮಾಡಲು ಸಾಧ್ಯವೋ ಆ ಬಗ್ಗೆ ನಿರ್ದಿಷ್ಟ ಗುರಿಯನ್ನು ಹೊಂದುವಂತೆ ಮನವಿ ಮಾಡಿದರು.

****

AKT/AK