ಕಾಂಗ್ರೆಸ್ ನಾಯಕಿ ನ್ಯಾನ್ಸಿ ಪೆಲೋಸಿ ನೇತೃತ್ವದ ಎಂಟು ಸದಸ್ಯರ ಉಭಯ ಪಕ್ಷೀಯ ಅಮೆರಿಕ ಕಾಂಗ್ರೆಸ್ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.
ಪ್ರಧಾನಿಯವರು ನಿಯೋಗವನ್ನು ಭಾರತಕ್ಕೆ ಸ್ವಾಗತಿಸಿದರು. ಭಾರತ ಮತ್ತು ಅಮೆರಿಕ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸುವಲ್ಲಿ ಅಮೆರಿಕ ಕಾಂಗ್ರೆಸ್ ನ ಉಭಯ ಪಕ್ಷಗಳ ಬಲವಾದ ಬೆಂಬಲವನ್ನು ಅವರು ಶ್ಲಾಘಿಸಿದರು.
ಪ್ರಧಾನಮಂತ್ರಿಯವರು ದ್ವಿಪಕ್ಷೀಯ ಪಾಲುದಾರಿಕೆಯ ಮತ್ತು ಪರಸ್ಪರ ಹಿತದ ವಿಷಯಗಳ ಬಗ್ಗೆ ನಿಯೋಗದ ಸದಸ್ಯರೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಅಮೆರಿಕಾ ಕಾಂಗ್ರೆಸ್ ನೊಂದಿಗೆ ಹೆಚ್ಚಿನ ವಿನಿಮಯಕ್ಕೆ ಅವರು ಕರೆ ನೀಡಿದರು.
***
AKT/SH