Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರ ಮುಂಬರುವ ಶ್ರೀಲಂಕಾ ಪ್ರವಾಸ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು 2017ರ ಮೇ 11 ಮತ್ತು 12ರಂದು ಶ್ರೀಲಂಕಾಗೆ ಭೇಟಿ ನೀಡುತ್ತಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಕೆಳಕಂಡಂತೆ ತಿಳಿಸಿದ್ದಾರೆ:

“ನಾನು ಇಂದು, ಮೇ 11ರಿಂದ ಎರಡು ದಿನಗಳ ಕಾಲ ಶ್ರೀಲಂಕಾ ಭೇಟಿಯಲ್ಲಿರುತ್ತೇನೆ. ಎರಡು ವರ್ಷದಲ್ಲಿ ಇದು ನನ್ನ ಎರಡನೇ ದ್ವಿಪಕ್ಷೀಯ ಭೇಟಿಯಾಗಿದ್ದು, ಇದು ನಮ್ಮ ಬಲವಾದ ಬಾಂಧವ್ಯದ ಸಂಕೇತವಾಗಿದೆ.

ಈ ಭೇಟಿಯ ಕಾಲದಲ್ಲಿ, ನಾನು ಮೇ 12ರಂದು ಕೊಲಂಬೋದಲ್ಲಿ ಅಂತಾರಾಷ್ಟ್ರೀಯ ವೇಸಕ್ ದಿನದ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ, ಅಲ್ಲಿ ನಾನು ಪ್ರಮುಖ ಬೌದ್ಧ ಧಾರ್ಮಿಕ ನಾಯಕರು, ವಿದ್ವಾಂಸರು ಮತ್ತು ದೈವತಾಶಾಸ್ತ್ರಜ್ಞರೊಂದಿಗೆ ಸಂವಾದ ನಡೆಸಲಿದ್ದೇನೆ. ಈ ಸಮಾರಂಭದಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆ ಅವರೊಂದಿಗೆ ಭಾಗಿಯಾಗುತ್ತಿರುವುದು ನನಗೆ ಸಂದ ಗೌರವವಾಗಿದೆ.

ಭಾರತ ಮತ್ತು ಶ್ರೀಲಂಕಾ ನಡುವೆ ಹೆಚ್ಚಾಗಿ ಪಾಲಿಸಲಾಗುವ – ಬೌದ್ಧ ಧರ್ಮದ ವಿನಿಮಯ ಪರಂಪರೆಯ ನಂಟಿನಲ್ಲಿ ನನ್ನ ಈ ಭೇಟಿ ಮುಂಚೂಣಿಯಲ್ಲಿದೆ.
2015ರಲ್ಲಿನ ನನ್ನ ಭೇಟಿಯ ವೇಳೆ, ನನಗೆ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ ಮತ್ತು ಶತಮಾನಗಳಿಂದ ಪ್ರಮುಖ ಬೌದ್ಧ ಕೇಂದ್ರವಾಗಿರುವ ಅನುರಾಧಪುರಕ್ಕೆ ಭೇಟಿ ನೀಡುವ ಅವಕಾಶ ಲಭಿಸಿತ್ತು. ಈ ಬಾರಿ, ನನಗೆ, ಬುದ್ಧನ ಹಲ್ಲಿನ ಸ್ಮಾರಕ ಎಂದೇ ಖ್ಯಾತವಾಗಿರುವ ಕ್ಯಾಂಡಿಯ ಪವಿತ್ರ ಶ್ರೀ. ದಲಾದ ಮಲಿಗವಾಗೆ ಭೇಟಿ ನೀಡುವ ಗೌರವ ದೊರೆತಿದೆ.

ಕೊಲಂಬೋದಲ್ಲಿನ ಗಂಗಾರಾಮಯ್ಯ ದೇವಾಲಯದಲ್ಲಿ ಸೀಮಾ ಮಾಲಕಕ್ಕೆ ಭೇಟಿ ನೀಡುವುದರೊಂದಿಗೆ ನನ್ನ ಭೇಟಿ ಆರಂಭವಾಗಲಿದ್ದು, ಅಲ್ಲಿ ನಾನು ಸಾಂಪ್ರದಾಯಿಕ ಜ್ಯೋತಿ ಬೆಳಗಿಸುವ ಸಮಾರಂಭದಲ್ಲಿ ಭಾಗಿಯಾಗಲಿದ್ದೇನೆ.

ನಾನು ಅಧ್ಯಕ್ಷ ಸಿರಿಸೇನಾ, ಪ್ರಧಾನಿ ವಿಕ್ರಮಸಿಂಘೆ ಮತ್ತು ಇತರ ಪ್ರಮುಖ ಗಣ್ಯರನ್ನು ಭೇಟಿ ಮಾಡಲಿದ್ದೇನೆ.

ನಾನು ಶ್ರೀಲಂಕಾದ ಉತ್ತರ ಭಾಗದ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಅಲ್ಲಿ ನಾನು ಭಾರತದ ನೆರವಲ್ಲಿ ನಿರ್ಮಿಸಲಾಗಿರುವ ದಿಕೋಯಾ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದೇನೆ ಮತ್ತು ಭಾರತೀಯ ಮೂಲಕ ತಮಿಳು ಸಮುದಾಯದೊಂದಿಗೆ ಮಾತುಕತೆ ನಡೆಸಲಿದ್ದೇನೆ.

ನಾನು ಶ್ರೀಲಂಕಾದಿಂದ ಸಾಮಾಜಿಕ ತಾಣದಲ್ಲಿ ಹೆಚ್ಚಿನ ವಿಷಯ ಹಂಚಿಕೊಳ್ಳುತ್ತೇನೆ. ನೀವು ನನ್ನ ನರೇಂದ್ರ ಮೋದಿ ಮೊಬೈಲ್ ಆಪ್ ಮೂಲಕ ನನ್ನ ಎಲ್ಲ ಶ್ರೀಲಂಕಾ ಕಾರ್ಯಕ್ರಮಗಳನ್ನು ನೇರವಾಗಿ ವೀಕ್ಷಿಸಬಹುದು”

***

AKT/AK