Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದಕ್ಷಿಣ ಏಷ್ಯಾ ಉಪಗ್ರಹ – ಕೆಲವು ಮುಖ್ಯಾಂಶಗಳು

ದಕ್ಷಿಣ ಏಷ್ಯಾ ಉಪಗ್ರಹ – ಕೆಲವು ಮುಖ್ಯಾಂಶಗಳು


• ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ದಕ್ಷಿಣ ಏಷ್ಯಾ ನೆರೆಯ ರಾಷ್ಟ್ರಗಳಿಗೆ ಆಕಾಶದಲ್ಲಿ ವಿಶಿಷ್ಠ ಕೊಡುಗೆಯನ್ನು ನೀಡುವ ಮೂಲಕಬಾಹ್ಯಾಕಾಶ ರಾಜತಾಂತ್ರಿಕತೆ ಹೊಸ ಎತ್ತರವನ್ನು ಮುಟ್ಟಿದೆ.

• ಯಾವುದೇ ವೆಚ್ಚವಿಲ್ಲದೆ ನೆರೆಹೊರೆಯವರಿಗೆ ಸಂವಹನ ಉಪಗ್ರಹ ಬಳಸಲು ಉಡುಗೊರೆ ನೀಡಿರುವುದು ವಿಶ್ವದಲ್ಲೇ ಅಭೂತಪೂರ್ವವಾದ್ದಾಗಿದೆ.
• 2 ಸಾವಿರ ಟನ್ ತೂಕದ ಈ ಉಪಗ್ರಹವನ್ನು 230 ಕೋಟಿ ರೂಪಾಯಿ ವೆಚ್ಚದಲ್ಲಿ 3 ವರ್ಷಗಳಲ್ಲಿ ನಿರ್ಮಿಸಲಾಗಿದೆ.

• ಇದರ ಹೆಜ್ಜೆಗುರುತು ದಕ್ಷಿಣ ಏಷ್ಯಾದ್ಯಂತ ವಿಸ್ತರಿಸಲಿದೆ.

• ದಕ್ಷಿಣ ಏಷ್ಯಾ ಉಪಗ್ರಹವು 12 ಕೆ.ಯು. ಬ್ಯಾಂಡ್ ಟ್ಯಾನ್ಸ್ ಪಾಂಡರ್ ಗಳನ್ನು ಒಳಗೊಂಡಿದ್ದು, ಇದನ್ನು ಭಾರತದ ನೆರೆಯ ರಾಷ್ಟ್ರಗಳು ತಮ್ಮ ಸಂವಹನ ಹೆಚ್ಚಿಸಲು ಬಳಸಬಹುದಾಗಿದೆ.

• ಪ್ರತಿಯೊಂದು ರಾಷ್ಟ್ರವೂ ಕನಿಷ್ಠ ಒಂದು ಟ್ರಾನ್ಸ್ ಪಾಂಡರ್ ಜೊತೆ ಸಂಪರ್ಕ ಹೊಂದಲಿದ್ದು, ಅವರು ಆ ಮೂಲಕ ತಮ್ಮದೇ ಸ್ವಂತ ಪ್ರೋಗ್ರಾಂ ಮಾಡಿಕೊಳ್ಳಬಹುದಾಗಿದೆ.

• ಈ ಉಪಗ್ರಹವು ಡಿಟಿಎಚ್ ಟೆಲಿವಿಷನ್, ವಿ.ಎಸ್.ಎ.ಟಿ. ಸಂಪರ್ಕ, ಟೆಲಿ- ಶಿಕ್ಷಣ, ಟೆಲಿ- ಮೆಡಿಸಿನ್ ಮತ್ತು ವಿಕೋಪ ನಿರ್ವಹಣೆ ಬೆಂಬಲದ ಸೌಲಭ್ಯ ಒದಗಿಸುತ್ತದೆ. ಇದು ಭೂಕಂಪ, ಚಂಡಮಾರುತ, ಪ್ರವಾಹ ಮತ್ತು ಸುನಾಮಿಯಂತಹ ವಿಕೋಪದ ಸಂದರ್ಭದಲ್ಲಿ ಮಹತ್ವದ ಸಂವಹನ ಸಂಪರ್ಕವನ್ನು ಒದಗಿಸುತ್ತದೆ.

• ಈ ಉಪಗ್ರಹದ ಯಶಸ್ವೀ ಉಡಾವಣೆಯ ವಿಶಿಷ್ಠ ಸಂದರ್ಭದಲ್ಲಿ ಈ ಉಪಗ್ರಹದಿಂದ ಲಾಭ ಪಡೆಯುತ್ತಿರುವ ಎಲ್ಲ ಏಳು ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರೂ ವಿಡಿಯೋ ಸಂವಾದದ ಮೂಲಕ ಸಂಪರ್ಕ ಬೆಸೆದಿದ್ದರು.

****

AKT/SH