Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇ.ಯು. ವಿದೇಶಾಂಗ ವ್ಯವಹಾರ ಮತ್ತು ಸುರಕ್ಷತಾ ನೀತಿಯ ಉನ್ನತ ಪ್ರತಿನಿಧಿಯವರಿಂದ ಪ್ರಧಾನಿ ಭೇಟಿ

ಇ.ಯು. ವಿದೇಶಾಂಗ ವ್ಯವಹಾರ ಮತ್ತು ಸುರಕ್ಷತಾ ನೀತಿಯ ಉನ್ನತ ಪ್ರತಿನಿಧಿಯವರಿಂದ ಪ್ರಧಾನಿ ಭೇಟಿ


ಐರೋಪ್ಯ ಒಕ್ಕೂಟದ ವಿದೇಶಾಂಗ ವ್ಯವಹಾರ ಮತ್ತು ಸುರಕ್ಷತಾ ನೀತಿಯ ಉನ್ನತ ಪ್ರತಿನಿಧಿ ಶ್ರೀಮತಿ ಫೆಡರಿಕಾ ಮೊಘೇರಿನಿ ಅವರಿಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು

ಪ್ರಧಾನಮಂತ್ರಿ ಮೋದಿ ಹಾಗೂ ಶ್ರೀಮತಿ. ಮೊಘೇರಿನಿ ಅವರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ಪ್ರಧಾನಮಂತ್ರಿಯವರು ಮತ್ತು ಶ್ರೀಮತಿ. ಮೊಘೇರಿನಿ ಅವರು, ಭಾರತ ಮತ್ತು ಇ.ಯು. ನಡುವೆ ಭದ್ರತೆಯ ಸಹಕಾರ ಬಲಪಡಿಸುವ ಅದರಲ್ಲೂ ಭಯೋತ್ಪಾದನೆಯ ವಿರುದ್ಧದ ವಿಚಾರಗಳಲ್ಲಿ ಬಲಪಡಿಸುವ ಅಗತ್ಯವನ್ನು ಒಪ್ಪಿಕೊಂಡರು.

ಭಾರತ –ಇಯು ಶೃಂಗಕ್ಕಾಗಿ 2016ರ ಮಾರ್ಚ್ ನಲ್ಲಿ ತಾವು ಕೈಗೊಂಡ ಯಶಸ್ವೀ ಬ್ರುಸೆಲ್ಸ್ ಭೇಟಿಯನ್ನು ಪ್ರಧಾನಮಂತ್ರಿ ಸ್ಮರಿಸಿದರು, ಮತ್ತು 2017ರ ಅಕ್ಟೋಬರ್ ನಲ್ಲಿ ನಡೆಯಲಿರುವ ಭಾರತ-ಇಯು ಶೃಂಗಸಭೆಗೆ ತಾವು ಎದಿರು ನೋಡುತ್ತಿರುವುದಾಗಿ ಅವರು ತಿಳಿಸಿದರು.

***

AKT/HS