ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದ್ವಿತೆರಿಗೆ ತಪ್ಪಿಸಲು ಪೋರ್ಚುಗಲ್ ಮತ್ತು ಭಾರತ ನಡುವಿನ ಒಪ್ಪಂದದ ತಿದ್ದುಪಡಿಯ ಶಿಷ್ಟಾಚಾರಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ. ಈ ಶಿಷ್ಟಾಚಾರವು ಆದಾಯದ ಮೇಲಿನ ತೆರಿಗೆ ಸಂಬಂಧಿತ ಆರ್ಥಿಕ ವಂಚನೆಯ ತಡೆಯ ಖಾತ್ರಿಯನ್ನೂ ಒದಗಿಸುತ್ತದೆ.
ಒಮ್ಮೆ ಈ ಶಿಷ್ಟಾಚಾರವು ಜಾರಿಗೆ ಬಂದರೆ, ಭಾರತ ಮತ್ತು ಪೋರ್ಚುಗಲ್ ಎರಡೂ ತೆರಿಗೆ ಸಂಬಂಧಿತ ಮಾಹಿತಿಯನ್ನು ವಿನಿಮಯ ಮಾಡಕೊಳ್ಳಬಹುದಾಗಿದ್ದು, ಇದು ಎರಡೂ ದೇಶದ ತೆರಿಗೆ ಪ್ರಾಧಿಕಾರಗಳಿಗೆ ತೆರಿಗೆ ವಂಚನೆ ತಡೆಯಲು ನೆರವಾಗುತ್ತದೆ.
AKT/VBA/SH