Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದಲ್ಲಿ ಅರ್ಪಿಸಲು ಛಾದರ್ ಹಸ್ತಾಂತರಿಸಿದ ಪ್ರಧಾನ ಮಂತ್ರಿ

ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದಲ್ಲಿ  ಅರ್ಪಿಸಲು ಛಾದರ್ ಹಸ್ತಾಂತರಿಸಿದ ಪ್ರಧಾನ ಮಂತ್ರಿ


ಅಜ್ಮೇರ್ ಶರೀಫ್ ನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದಲ್ಲಿ ಸಮರ್ಪಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿಂದು ಕೇಂದ್ರ ಅಲ್ಪ ಸಂಖ್ಯಾತರ ವ್ಯವಹಾರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವ ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯದ ಸಹಾಯಕ ಸಚಿವರಾಗಿರುವ ಡಾ. ಜಿತೇಂದ್ರ ಸಿಂಗ್ ಅವರಿಗೆ ‘ಛಾದರ್’’ ಅನ್ನು ಹಸ್ತಾಂತರಿಸಿದರು.

ವಿಶ್ವಾದ್ಯಂತ ಇರುವ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ವಾರ್ಷಿಕ ಉರುಸ್ ಸಂದರ್ಭದಲ್ಲಿ ಅದರ ಅನುಯಾಯಿಗಳಿಗೆ ಪ್ರಧಾನಮಂತ್ರಿಯವರು ಶುಭಾಶಯ ಮತ್ತು ಶುಭ ಹಾರೈಕೆಗಳನ್ನು ತಿಳಿಸಿದರು.

ಖ್ವಾಜಾ ಮೊಯಿನುದ್ದೀನ್ ಚಿಸ್ತಿಯು ಭಾರತದ ಶ್ರೇಷ್ಠ ಧಾರ್ಮಿಕ ಸಂಪ್ರದಾಯದ ಸಂಕೇತವಾಗಿದೆ ಎಂದು ಪ್ರಧಾನಮಂತ್ರಿಯವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಗರೀಬ್ ನವಾಜ್ ರ ಮಾನವೀಯ ಸೇವೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕಿ ಉಳಿದಿವೆ ಎಂದು ಅವರು ತಿಳಿಸಿದ್ದಾರೆ. ಮುಂಬರುವ ಉರುಸ್ ಯಶಸ್ವಿಯಾಗಿ ನೆರವೇರಲಿ ಎಂದು ಅವರು ಶುಭ ಹಾರೈಸಿದ್ದಾರೆ.

***

AKT/NT