Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಲ್ಕು ಜಿಎಸ್.ಟಿ. ಮಸೂದೆಗಳಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಈ ಕೆಳಕಂಡ ನಾಲ್ಕು ಜಿ.ಎಸ್.ಟಿ. ಮಸೂದೆಗಳಿಗೆ ತನ್ನ ಅನುಮೋದನೆ ನೀಡಿದೆ:

  1. ಕೇಂದ್ರೀಯ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ 2017 ( ಸಿಜಿಎಸ್.ಟಿ. ಮಸೂದೆ)
  2. ಸಮಗ್ರ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ 2017 (ಐಜಿಎಸ್.ಟಿ. ಮಸೂದೆ)
  3. ಕೇಂದ್ರಾಡಳಿತ ಪ್ರದೇಶಗಳ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ 2017 (ಯು.ಟಿ.ಜಿ.ಎಸ್.ಟಿ. ಮಸೂದೆ)
  4. ಸರಕು ಮತ್ತು ಸೇವೆಗಳ ತೆರಿಗೆ (ರಾಜ್ಯಗಳಿಗೆ ಪರಿಹಾರ) ವಿಧೇಯಕ 2017 (ಪರಿಹಾರ ಮಸೂದೆ)

ಈ ಮೇಲಿನ ನಾಲ್ಕು ವಿಧೇಯಕಗಳಿಗೆ ಈ ಮುನ್ನ ಜಿ.ಎಸ್.ಟಿ. ಮಂಡಳಿ ಕಳೆದ ಆರು ತಿಂಗಳುಗಳಲ್ಲಿ ನಡೆಸಿದ ಮಂಡಳಿಯ 12 ಸಭೆಗಳಲ್ಲಿ ಸಂಪೂರ್ಣ, ಖಂಡ ಖಂಡವಾಗಿ ಚರ್ಚಿಸಿ ತನ್ನ ಅನುಮೋದನೆ ನೀಡಿತ್ತು.

ಈ ಸಿ.ಜಿ.ಎಸ್.ಟಿ.  ವಿಧೇಯಕವು ಅಂತರರಾಜ್ಯಗಳ ಸರಕು ಅಥವಾ ಸೇವೆಗಳ ಪೂರೈಕೆ ಮೇಲೆ ತೆರಿಗೆ ಹಾಕಲು ಮತ್ತು ಸಂಗ್ರಹಿಸಲು ಎರಡಕ್ಕೂ ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುತ್ತದೆ. ಅದೇ ರೀತಿ, ಐಜಿಎಸ್.ಟಿ. ಮಸೂದೆಯು ಸಹ ಅಂತರ ರಾಜ್ಯ ಸರಕು ಮತ್ತು ಸೇವೆಗಳ ಪೂರೈಕೆ ಅಥವಾ ಎರಡಕ್ಕೂ ಕೇಂದ್ರ ಸರ್ಕಾರದಿಂದ ತೆರಿಗೆ ವಿಧಿಸಲು ಮತ್ತು ಸಂಗ್ರಹಿಸಲು ಅವಕಾಶ ನೀಡುತ್ತದೆ.

ಯುಟಿಜಿಎಸ್.ಟಿ. ಮಸೂದೆಯು ಶಾಸನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರಾಡಳಿತ ಪ್ರದೇಶಗಳ ನಡುವಿನ ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ತೆರಿಗೆ ಹಾಕುವ ಮತ್ತು ಸಂಗ್ರಹಿಸುವ ಅವಕಾಶ ನೀಡುತ್ತದೆ. ಕೇಂದ್ರಾಡಳಿತ ಪ್ರದೇಶ ಜಿಎಸ್.ಟಿ.ಯು ಅಂತರ ರಾಜ್ಯಗಳ ಸರಕು ಮತ್ತು ಸೇವೆಗಳ ಪೂರೈಕೆ ಅಥವಾ ಎರಡಕ್ಕೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ವಿಧಿಸುವ ಮತ್ತು ಸಂಗ್ರಹಿಸುವ ರಾಜ್ಯಗಳ ಸರಕು ಮತ್ತು ಸೇವೆಗಳ ತೆರಿಗೆ (ಎಸ್.ಜಿ.ಎಸ್.ಟಿ.)ಯನ್ನು ಕೇಳುತ್ತದೆ.

 

ಪರಿಹಾರ ವಿಧೇಯಕವು, ಸರಕು ಮತ್ತು ಸೇವೆಗಳ ತೆರಿಗೆ ಜಾರಿಯ ಕಾರಣದಿಂದಾಗಿ ರಾಜ್ಯಗಳಿಗೆ ಉಂಟಾಗುವ ಆದಾಯ ನಷ್ಟಕ್ಕೆ ಸಂವಿಧಾನದ 101ನೇ ತಿದ್ದುಪಡಿ) ಕಾಯಿದೆ 2016ರ 18ನೇ ಸೆಕ್ಷನ್ ಅನ್ವಯ ಐದು ವರ್ಷಗಳ ಅವಧಿಗೆ ಪರಿಹಾರವನ್ನು ಒದಗಿಸುತ್ತದೆ.

 

ಹಿನ್ನೆಲೆ:

ಸರ್ಕಾರವು ದೇಶದ ಅತಿ ದೊಡ್ಡ ಸುಧಾರಣೆಯಾಗಿರುವ ಜಿ.ಎಸ್.ಟಿ.ಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಜಾರಿಗೆ ತರಲು ಬದ್ಧವಾಗಿದೆ. ಜಿ.ಎಸ್.ಟಿ. ಮಂಡಳಿಯು ಜಿ.ಎಸ್.ಟಿ.ಯ ಜಾರಿಗೆ 1ನೇ ಜುಲೈ ಅನ್ನು ನಿಗದಿ ಮಾಡಿ ಘೋಷಣೆ ಮಾಡಿದೆ. ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಜಿ.ಎಸ್.ಟಿ. ನಿಯಮಗಳನ್ನು ವಿವರಿಸಲು ದೇಶದಾದ್ಯಂತ ಪ್ರಯತ್ನಗಳು ನಡೆದಿವೆ ಎಂದು ಪ್ರಸ್ತಾಪಿಸಿದ್ದರು.  

*****

AKT/VBA/SH