Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕೇಂದ್ರೀಯ ಎಂಜಿನಿಯರಿಂಗ್ ಸೇವೆ (ರಸ್ತೆಗಳು)ಯ ಗುಂಪು ಎ ಕೇಡರ್ ಪರಾಮರ್ಶೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕೇಂದ್ರೀಯ ಎಂಜಿನಿಯರಿಂಗ್ ಸೇವೆ (ಸಿ.ಇ.ಎಸ್.)(ರಸ್ತೆಗಳು) ಕೆಡರ್ ಪರಾಮರ್ಶೆಗೆ ತನ್ನ ಅನುಮೋದನೆ ನೀಡಿದೆ. ಈ ಪ್ರಸ್ತಾಪವನ್ನು ಕೂಡಲೇ ಜಾರಿಗೆ ತರಲಾಗುತ್ತದೆ.

ಸಿ.ಇ.ಎಸ್. (ರಸ್ತೆಗಳು) ಕೇಡರ್ ಬಲ ಈ ಕೆಳಕಂಡಂತೆ ಪರಿಷ್ಕೃತವಾಗಲಿದೆ:-

 

(i) ಸಿಇಎಸ್ (ರಸ್ತೆಗಳು) ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚಳ:

 

  1. ಎಚ್.ಎ.ಜಿ. ಹಂತ 02
  2. ಎಸ್.ಎ.ಜಿ. ಹಂತ 05
  3. ಜೆಟಿಎಸ್ ಹಂತ 36

 

(ii)      ಎಸ್.ಟಿ.ಎಸ್. ಹಂತದಲ್ಲಿ ಹುದ್ದೆಗಳ ಸಂಖ್ಯೆಯಲ್ಲಿ ಇಳಿಕೆ – 28

 

(iii)    ಜೆಟಿಎಸ್ ಹಂತದಲ್ಲಿ ಉದ್ಭವಿಸುವ ಸಾಮಾನ್ಯ ಹುದ್ದೆಗಳಿಗೆ ಹೆಚ್ಚುವರಿಯಾಗಿ ಕೇಡರ್ ಬಲದ ಹೊರಗೆ ಡೆಪ್ಯೂಟೇಷನ್ ಉದ್ದೇಶಕ್ಕಾಗಿ ಕೇಡರ್ ನ ಪ್ರವೇಶ ಹಂತದಲ್ಲಿ ವಿಶೇಷ ಮೀಸಲಿಗೆ ಪ್ರತಿಯಾಗಿ 86 ಹುದ್ದೆಗಳಿಗೆ ನೇಮಕಾತಿ (ಜೆಟಿಎಸ್).

ಸಿಇಎಸ್ (ರಸ್ತೆಗಳು) ಕೇಡರ್ ಅನ್ನು 1959ರಲ್ಲಿ ರಚಿಸಲಾಯಿತು. ಮೊದಲ ಗ್ರೂಪ್ ಎ ತಾಂತ್ರಿಕ ಹುದ್ದೆಯ ಹಂಚಿಕೆಯನ್ನು 1976ರಲ್ಲಿ  189ಕ್ಕೆ ನಿಗದಿ ಮಾಡಲಾಯಿತು. 1987ರಲ್ಲಿ ಕೊನೆಯದಾಗಿ ಈ ಸೇವೆಗಳ ಕೇಡರ್ ಪರಾಮರ್ಶೆ ಮಾಡಲಾಗಿತ್ತು.

ಮೆಕಾನಿಕಲ್ ಕೇಡರ್ ನ ಖಾಲಿ ಹುದ್ದೆಗಳನ್ನು ಸಿವಿಲ್ ಎಂಜಿನಿಯರ್ ಗಳ ಭರ್ತಿಗಳಾಗಿ ಬಳಸಿಕೊಳ್ಳಲಾಗುವುದು, ಹೀಗಾಗಿ ಮೆಕಾನಿಕಲ್ ಕೇಡರ್ ಅನ್ನು ಸಿವಿಲ್ ಕೇಡರ್ ನಲ್ಲಿ ಹಂತ ಹಂತವಾಗಿ ವಿಲೀನಗೊಳಿಸಲಾಗುವುದು, ಹೀಗಾಗಿ ಇದರಿಂದ ಪ್ರಸಕ್ತ ಹುದ್ದೆಗಳ ಮೇಲೆ ಯಾವುದೇ ರೀತಿಯ ಪ್ರತೀಕೂಲ ಪರಿಣಾಮ ಆಗುವುದಿಲ್ಲ.

ಮೇಲೆ ತಿಳಿಸಲಾದ ಕೇಡರ್ ಪರಾಮರ್ಶೆ ಪ್ರಸ್ತಾಪದಿಂದಾಗಿ ವಾರ್ಷಿಕ 1.8 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚ ಆಗಲಿದೆ. ಆದರೆ, ಡೆಪ್ಯೂಟೇಷನ್ ನ ವಿಶೇಷ ಮೀಸಲಿಗೆ ಸಂಬಂಧಿಸಿದಂತೆ ಯಾವುದೇ ಹಣಕಾಸಿನ ಹೊಣೆಗಾರಿಕೆ ಇರುವುದಿಲ್ಲ.

 

*****

AKT/VBA/SH