Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ನವದೆಹಲಿಯಲ್ಲಿಆಡಳಿತ ಪರವಾದ ಮತ್ತು ಸಕಾಲದಲ್ಲಿ ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯ ಮೂಲಕ ನಡೆದಹದಿನೇಳನೇಸಂವಾದದ ಅಧ್ಯಕ್ಷತೆ ವಹಿಸಿದ್ದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ನವದೆಹಲಿಯಲ್ಲಿಆಡಳಿತ ಪರವಾದ ಮತ್ತು ಸಕಾಲದಲ್ಲಿ  ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯ ಮೂಲಕ ನಡೆದಹದಿನೇಳನೇಸಂವಾದದ ಅಧ್ಯಕ್ಷತೆ ವಹಿಸಿದ್ದರು


ಪ್ರಧಾನಮಂತ್ರಿಯವರು, ಟೆಲಿಕಾಂ ವಲಯಕ್ಕೆ ಸಂಬಂಧಿಸಿದ ಕುಂದುಕೊರತೆಯ ಪರಿಹಾರ ಮತ್ತು ನಿರ್ವಹಣೆ ಕುರಿತ ಪ್ರಗತಿಯ ಪರಿಶೀಲನೆ ನಡೆಸಿದರು. ಹೆಚ್ಚಿನ ಕುಂದುಕೊರತೆಗಳು ಕಳಪೆ ಸೇವಾ ಗುಣಮಟ್ಟ, ಸಂಪರ್ಕ ಮತ್ತು ಸ್ಥಿರ ದೂರವಾಣಿಗಳು ಕಾರ್ಯ ನಿರ್ವಹಿಸದೆ ಇರುವುದಕ್ಕೆ ಸಂಬಂಧಿಸಿದ್ದಾಗಿದ್ದವು. ಕಾರ್ಯದರ್ಶಿ (ಟೆಲಿಕಾಂ ಇಲಾಖೆ) ಯವರು ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಒತ್ತಿ ಹೇಳಿದರು. ಆದಷ್ಟು ಬೇಗ ಪರಿಸ್ಥಿತಿಯಲ್ಲಿ ಕಣ್ಣಿಗೆ ಕಾಣುವಂಥ ಬದಲಾವಣೆಯನ್ನು ತರಲು ಎಲ್ಲ ಹಂತಗಳಲ್ಲಿಯೂ ಹೊಣೆಗಾರಿಕೆ ನಿಗದಿ ಪಡಿಸಲು ಮತ್ತು ಸಾಮರ್ಥ್ಯವನ್ನು ಸುಧಾರಣೆ ಮಾಡುವ ಅಗತ್ಯವನ್ನು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. 2015ರ ಏಪ್ರಿಲ್ ನಲ್ಲಿ ನಡೆಸಿದ ಪರಾಮರ್ಶೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಹಾಲಿ ಇರುವ ತಂತ್ರಜ್ಞಾನಾತ್ಮಕ ಪರಿಹಾರಗಳನ್ನು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)ಯ ಪ್ರಗತಿಯ ಪರಾಮರ್ಶೆಯ ವೇಳೆ, ಪ್ರಧಾನಮಂತ್ರಿಯವರು, 2022ರಹೊತ್ತಿಗೆ ಎಲ್ಲರಿಗೂ ವಸತಿ ಒದಗಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು. ಕಾರ್ಯತಂತ್ರಗಳು, ಕಾಲಬದ್ಧ ಕ್ರಿಯಾ ಯೋಜನೆ ಮತ್ತು ದಿಕ್ಸೂಚಿಯೊಂದಿಗೆ ಹೊರ ಬರುವಂತೆ ಮತ್ತು ಈ ಗುರಿ ಸಾಧನೆಯ ಬಗ್ಗೆ ಅರಿಯಲು ನಿಗಾ ವ್ಯವಸ್ಥೆ ರೂಪಿಸುವಂತೆ ರಾಜ್ಯಗಳಿಗೆ ಅವರು ಮನವಿ ಮಾಡಿದರು. ಕಾಮಗಾರಿಯ ಗುಣಮಟ್ಟ ಮತ್ತು ವೇಗವನ್ನು ಸುಧಾರಿಸಲು ಇತ್ತೀಚಿನ ತಂತ್ರಜ್ಞಾನದ ಆದಾನಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.”ಸುಲಭವಾಗಿ ವ್ಯವಹಾರ ಮಾಡುವ” ವಿಚಾರಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಪರಾಮರ್ಶಿಸುವಂತೆ ಭಾರತ ಸರ್ಕಾರದ ಎಲ್ಲ ಕಾರ್ಯದರ್ಶಿಗಳಿಗೆ ಮತ್ತು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಅವರು ತಿಳಿಸಿದರು. “ಸುಲಭವಾಗಿ ವ್ಯವಹಾರ ಮಾಡುವ” ಕುರಿತ ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿದ ಅವರು, ವರದಿಯಲ್ಲಿ ಬಳಸಿರುವ ಮಾನದಂಡಗಳ ಆಧಾರದ ಮೇಲೆ ಪ್ರಗತಿಯನ್ನು ಅಳೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಾರದ ಆಧಾರದ ಮೇಲೆ ಪರಿಶೀಲನೆ ನಡೆಸುವಂತೆ ಅವರು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಅವರು ಸೂಚಿಸಿದರು.

ತೆಲಂಗಾಣ, ಒಡಿಶಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ, ರಾಜಾಸ್ಥಾನ, ಗುಜರಾತ್, ಕೇರಳ, ತಮಿಳುನಾಡು, ಕರ್ನಾಟಕ, ಹರಿಯಾಣ, ಬಿಹಾರ್, ಪಶ್ಚಿಮ ಬಂಗಾಳ ಮತ್ತು ಮೇಘಾಲಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವ್ಯಾಪಿಸಿರುವ ರೈಲ್ವೆ, ರಸ್ತೆ, ಬಂದರು, ಇಂಧನ ಮತ್ತು ನೈಸರ್ಗಿಕ ಅನಿಲ ವಲಯದ ಪ್ರಮುಖ ಮೂಲಸೌಕರ್ಯ ಯೋಜನೆಗಳ ಪರಿಶೀಲನೆಯನ್ನೂ ಪ್ರಧಾನಮಂತ್ರಿಗಳು ನಡೆಸಿದರು. ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವುದರ ಮಹತ್ವವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಗಳು ಇದರಿಂದ ವೆಚ್ಚ ಹೆಚ್ಚಳವನ್ನು ತಡೆಯಬಹುದು ಮತ್ತು ಮೂಲತಃ ರೂಪಾಸಿದ ಯೋಜನೆಯ ಫಲ ಜನತೆಗೆ ತಲುಪುತ್ತದೆ ಎಂದರು. ಇಂದು ಪರಿಶೀಲನೆ ನಡೆಸಲಾದ ಯೋಜನೆಗಳಲ್ಲಿ ಬಿರ್ನಿಹಟ್ – ಶಿಲ್ಲಾಂಗ್ ರೈಲ್ವೆ ಮಾರ್ಗ; ಜೋಗ್ಬನಿ – ಬಿರಾತ್ ನಗರ (ನೇಪಾಳ) ರೈಲ್ವೆ ಮಾರ್ಗ; ಸೂರತ್ – ದಹಿಸರ್ ಹೆದ್ದಾರಿ; ಗುರ್ ಗಾಂವ್ – ಜೈಪುರ ಹೆದ್ದಾರಿ; ಚೆನ್ನೈ ಮತ್ತು ಎನ್ನೋರೆ ಬಂದರು ಸಂಪರ್ಕ ಯೋಜನೆ; ಕೊಚ್ಚಿನ್ ಹಡಗುಕಟ್ಟೆ ಡ್ರೈ-ಡಾಕ್ ನಿರ್ಮಾಣ, ಮತ್ತು ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿವರೆಗಿನ ಮಲ್ಲಾವರಂ – ಭೋಪಾಲ್- ಬಿಲಾವರ್- ವಿಜಯಪುರ ನೈಸರ್ಗಿಕ ಅನಿಲ ಕೊಳವೆ ಮಾರ್ಗವೂ ಸೇರಿತ್ತು.


***