ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ 2017ನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಅನುಮೋದನೆ ನೀಡಿದೆ.
ಈ ತಿದ್ದುಪಡಿ ವಿಧೇಯಕವು, ಭಾರತೀಯ ಮಾಹಿತಿ ತಂತ್ರಜ್ಞಾನ ವಿನ್ಯಾಸ ಮತ್ತು ಉತ್ಪಾದನೆ (ಐಐಐಟಿಡಿಎಂ), ಕರ್ನೂಲ್ ಅನ್ನು ಇತರ ಐಐಟಿಗಳೊಂದಿಗೆ ಪ್ರಧಾನ ಕಾಯಿದೆಯಲ್ಲಿ ಸೇರ್ಪಡೆ ಮಾಡಲು ಅವಕಾಶ ನೀಡುತ್ತದೆ. ಅದೇ ಪ್ರಕಾರವಾಗಿ ಐಐಟಿಡಿಎಂ ಕರ್ನೂಲ್ ಅನ್ನು ತನ್ನ ವಿದ್ಯಾರ್ಥಿಗಳಿಗೆ ಪದವಿ ನೀಡುವ ಅಧಿಕಾರದೊಂದಿಗೆ ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂದೂ ಘೋಷಿಸಲಾಗುತ್ತದೆ.
ಐಐಟಿಡಿಎಂ, ಕರ್ನೂಲ್ ನ ಕಾರ್ಯನಿರ್ವಹಣೆಯ ವೆಚ್ಚವನ್ನು ಮಾನವ ಸಂಪನ್ಮೂಲ ಇಲಾಖೆಯ ಯೋಜನಾ ನಿಧಿಯಿಂದ ಭರಿಸಲಾಗುವುದು.
ಕೈಗಾರಿಕೆ ಮತ್ತು ಆರ್ಥಿಕತೆಯಲ್ಲಿ ಹೆಚ್ಚುತ್ತಿರುವ ನುರಿತ ತಾಂತ್ರಿಕ ಮಾನವ ಶಕ್ತಿಯ ಅಗತ್ಯವನ್ನು ಈ ಸಂಸ್ಥೆಗಳಲ್ಲಿ ತರಬೇತಿ ಪಡೆದ ಪ್ರತಿಭಾವಂತರಿಂದ ಪೂರೈಸಲಾಗುವುದು ಎಂಬ ನಿರೀಕ್ಷೆ ಇದೆ. ಈ ಸಂಸ್ಥೆಯು ಲಿಂಗ, ಜಾತಿ, ಮತ, ಅಂಗವೈಕಲ್ಯ, ಪ್ರದೇಶ, ಜನಾಂಗೀಯ,ಸಾಮಾಜಿಕ ಅಥವಾ ಆರ್ಥಿಕ ಹಿಂದುಳಿದವರು ಎಂಬ ಭೇದವಿಲ್ಲದೆ ಎಲ್ಲರಿಗೂ ಮುಕ್ತವಾಗಿದೆ.
ಹಿನ್ನೆಲೆ
ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಕಾಯಿದೆ 2014 ಐಐಟಿಗಳಿಗೆ ಮತ್ತು ಈ ಐಐಟಿಗಳ ಆಡಳಿತ ವಿಚಾರಗಳನ್ನು ನೋಡಿಕೊಳ್ಳುವ ಸಂಸ್ಥೆಗಳಿಗೆ ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂಬ ಸ್ಥಾನವನ್ನು ಪ್ರದಾನ ಮಾಡುತ್ತದೆ. ಅದೇ ರೀತಿ, ಆಂಧ್ರಪ್ರದೇಶ ಪುನಾರಚನೆ ಕಾಯಿದೆ 2014ರಲ್ಲಿ ಉಲ್ಲೇಖಿಸಿರುವಂತೆ ಹೊಸ ಎನ್.ಐ.ಟಿಯನ್ನು ಆಂಧ್ರಪ್ರದೇಶದ ಕರ್ನೂಲ್ ನಲ್ಲಿ, ಸ್ಥಾಪಿಸಲು ಸರ್ಕಾರ, ಅನುಮೋದನೆ ನೀಡಿದೆ. ಹೊಸ ಐಐಐಟಿ ಸೇರ್ಪಡೆಯಿಂದ, ಐಐಐಟಿ ಕಾಯಿದೆ 2014ಕ್ಕೆ ತಿದ್ದುಪಡಿ ಮಾಡಬೇಕಾಗಿದೆ. ಇದರೊಂದಿಗೆ ಐಐಐಟಿಡಿಎಂ, ಕರ್ನೂಲ್ ಕೇಂದ್ರ ಹಣ ಪೂರೈಸುವ ಐಐಐಟಿಗಳ ಸಾಲಿನಲ್ಲಿ ಐದನೇ ಸದಸ್ಯ ಸಂಸ್ಥೆಯಾಗಿದೆ.
ಐಐಟಿಡಿಎಂ ಕರ್ನೂಲ್ ನಲ್ಲಿ 2015-16ರಲ್ಲಿ ಎರಡು ತಂಡಗಳಲ್ಲಿ ಶೈಕ್ಷಣಿಕ ಪ್ರಕ್ರಿಯೆ ಆರಂಭಗೊಂಡಿದೆ.