ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅರುಣಾಚಲ ಪ್ರದೇಶ, ದೆಹಲಿ, ಕೇರಳ ಮತ್ತು ಮಧ್ಯಪ್ರದೇಶ ಹೊರತುಪಡಿಸಿ ಎಲ್ಲ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶ(ಶಾಸನ ಸಭೆ ಇರುವ)ಗಳನ್ನು 01.04.2016ರಿಂದ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿ (ಎನ್.ಎಸ್.ಎಸ್.ಎಫ್) ಹೂಡಿಕೆಯಿಂದ ಹೊರಗಿಡುವುದಕ್ಕೆ ತನ್ನ ಅನುಮೋದನೆ ನೀಡಿದೆ. ಅಲ್ಲದೆ ಸಂಪುಟವು ತನ್ನ ಆಹಾರ ಸಬ್ಸಿಡಿ ಅಗತ್ಯಗಳನ್ನು ಪೂರೈಸಲು ಒಂದು ಬಾರಿಯ ಸಾಲವಾಗಿ 45,000 ಕೋಟಿ ರೂಪಾಯಿಗಳನ್ನು ಎನ್.ಎಸ್.ಎಸ್.ಎಫ್. ನಿಂದ ಭಾರತೀಯ ಆಹಾರ ನಿಗಮ (ಎಫ್.ಸಿ.ಐ.)ಗೆ ಒದಗಿಸಲೂ ತನ್ನ ಸಮ್ಮತಿ ಸೂಚಿಸಿದೆ.
ವಿವರಗಳು ಈ ಕೆಳಕಂಡಂತಿವೆ :-
a) ಅರುಣಾಚಲ ಪ್ರದೇಶ, ಕೇರಳ, ಮಧ್ಯಪ್ರದೇಶ ಮತ್ತು ದೆಹಲಿ ಹೊರತು ಪಡಿಸಿರಾಜ್ಯಗಳು/ಕೇಂದ್ರಾಡಳಿತ ಪ್ರದೇಶ(ಶಾಸನ ಸಭೆ ಇರುವ)ಗಳನ್ನು ಎನ್.ಸ್.ಎಸ್.ಎಫ್. ಹೂಡಿಕೆಯಿಂದ ಕೈಬಿಡಲು. ಅರುಣಾಚಲ ಪ್ರದೇಶಕ್ಕೆ ತನ್ನ ಎಲ್ಲೆಯೊಳಗಿನ ಎನ್.ಎಸ್.ಎಸ್.ಎಫ್. ಸಂಗ್ರಹದ ಶೇ.100ರಷ್ಟು ಸಾಲ ನೀಡಲಾಗುತ್ತಿದ್ದರೆ, ದೆಹಲಿ, ಕೇರಳ ಮತ್ತು ಮಧ್ಯಪ್ರದೇಶಗಳಿಗೆ ಸಂಗ್ರಹಣೆಯ ಶೇ.50ರಷ್ಟು ಒದಗಿಸಲಾಗುತ್ತದೆ.
b) ಎಫ್.ಸಿ.ಐ.ಗೆ ಆಯವ್ಯಯದಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ ಮೂಲಕ ನೀಡಲಾದ ಸಾಲಕ್ಕೆ ಬಡ್ಡಿ ಮತ್ತು ಅಸಲು ಒದಗಿಸುವುದು. ಎನ್.ಎಸ್.ಎಸ್.ಎಫ್. ಸಾಲವನ್ನು ಎಫ್.ಸಿ.ಐ. ಮರು ಪಾವತಿ ಜವಾಬ್ದಾರಿಯನ್ನು ಭಾರತೀಯ ಆಹಾರ ನಿಗಮಕ್ಕೆ ನೀಡಲಾದ ಆಹಾರ ಸಬ್ಸಿಡಿಯ ಮೊದಲ ಶುಲ್ಕ ಎಂದು ಪರಿಗಣಿಸಲಾಗುವುದು. ಜೊತೆಗೆ ಎಫ್.ಸಿ.ಐ. ಬ್ಯಾಂಕ್ ಒಕ್ಕೂಟಗಳಿಂದ ಪಡೆವ ತನ್ನ ಪ್ರಸಕ್ತ ನಗದು ಸಾಲದ ಮಿತಿಯನ್ನು ಎನ್.ಎಸ್.ಎಸ್.ಎಫ್. ಸಾಲದ ಮೊತ್ತಕ್ಕೆ ಅನುಗುಣವಾಗಿ ಇಳಿಕೆ ಮಾಡುವುದು
c) ಎನ್.ಎಸ್.ಎಸ್.ಎಫ್ ಭವಿಷ್ಯದಲ್ಲಿ, ಹಣಕಾಸು ಸಚಿವರ ಅನುಮೋದನೆಯೊಂದಿಗೆ ಪದಾರ್ಥಗಳ ಮೇಲೆ ಹೂಡಿಕೆ ಮಾಡುತ್ತದೆ ಮತ್ತು ಇದರ ವೆಚ್ಚವನ್ನು ಅಂತಿಮವಾಗಿ ಭಾರತ ಸರ್ಕಾರ ಭರಿಸುತ್ತದೆ ಹಾಗೂ ಅಸಲು ಮತ್ತು ಬಡ್ಡಿಯನ್ನು ಕೂಡ ಕೇಂದ್ ಬಜೆಟ್ ಮೂಲಕ ಭರಿಸಲಾಗುವುದು.
ಅರುಣಾಚಲ ಪ್ರದೇಶ, ದೆಹಲಿ, ಕೇರಳ ಮತ್ತು ಮಧ್ಯಪ್ರದೇಶ ಹೊರತುಪಡಿಸಿ ರಾಜ್ಯಗಳನ್ನು ಎನ್.ಎಸ್.ಎಸ್.ಎಫ್. ಹೂಡಿಕೆಯಿಂದ 1.4.2016 ರಿಂದ ಕೈಬಿಡಲಾಗಿದೆ. 2ರಿಂದ5 ವರ್ಷಗಳಲ್ಲಿ ಎಫ್.ಸಿ.ಐ. ಸಾಲ ಸಾಧ್ಯಗವಾಗುವಂತೆ ಮರು ವಿನ್ಯಾಸಗೊಳಿಸಲು ಮತ್ತು ಅಸಲು ಹಾಗೂ ಬಡ್ಡಿ ಮರು ಪಾವತಿಸುವ ವಿವಿಧ ವಿಧಾನಗಳಿಗಾಗಿ ಕಾನೂನಾತ್ಮಕ ಬದ್ಧತೆಯ ಒಪ್ಪಂದಕ್ಕೆ ಎಫ್.ಸಿ.ಐ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮತ್ತು ಎನ್.ಎಸ್.ಎಸ್.ಎಫ್. ಪರವಾಗಿ ಹಣಕಾಸು ಸಚಿವಾಲಯದ ನಡುವೆ ಅಂಕಿತ ಹಾಕಲಾಗುತ್ತದೆ.
ಎನ್.ಎಸ್.ಎಸ್.ಎಫ್. ಹೂಡಿಕೆಯಿಂದ ಒಮ್ಮೆ ರಾಜ್ಯಗಳನ್ನು ಕೈಬಿಟ್ಟ ಬಳಿಕ, ಹೂಡಿಕೆ ಮಾಡಬಹುದಾದ ಭಾರತ ಸರ್ಕಾರದೊಂದಿಗಿನ ಎನ್.ಎಸ್.ಎಸ್.ಎಫ್. ನಿಧಿ ಏರಿಕೆ ಆಗುತ್ತದೆ. ಭಾರತ ಸರ್ಕಾರಕ್ಕೆ ಎನ್.ಎಸ್.ಎಸ್.ಎಫ್. ನ ಹೆಚ್ಚಿನ ಸಾಲ ಲಭ್ಯತೆಯು ಮಾರುಕಟ್ಟೆಯಿಂದ ಹಣ ಪಡೆಯುವುದನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ ರಾಜ್ಯಗಳು ಮಾರುಕಟ್ಟೆಯಿಂದ ಸಾಲ ಪಡೆಯುವುದು ಹೆಚ್ಚಳವಾಗುವುದನ್ನು ಕಾಣುತ್ತವೆ. ಕೇಂದ್ರ ಮತ್ತು ರಾಜ್ಯ ಸಮ್ಮಿಲಿತವಾದ ಮಾರುಕಟ್ಟೆಯಲ್ಲಿ ಸಾಲ ನೀಡಬಹುದಾದ ನಿಧಿಗೆ ಹೆಚ್ಚಿನ ಬೇಡಿಕೆಯಿಂದ ಆಗುವ ಯಾವುದೇ ಉತ್ಪತ್ತಿಯಲ್ಲಿನ ಹೆಚ್ಚಳವು ಅತ್ಯಲ್ಪವಾಗಿರುತ್ತದೆ. ಎಫ್.ಸಿ.ಐ.ನ ಸಾಲ ಪಡೆಯುವ ವೆಚ್ಚದ ಕಡಿತವು ಬಡ್ಡಿಯ ವ್ಯತ್ಯಾಸಕ್ಕೆ ಸಮನಾಗಿರುತ್ತದೆ, ಇದು ಆಹಾರ ಸಬ್ಸಿಡಿ ಮಸೂದೆ ಕುರಿತ ಭಾರತ ಸರ್ಕಾರದ ಉಳಿತಾಯದಲ್ಲಿ ಇದು ಪ್ರತಿಫಲಿಸುತ್ತದೆ.
ಎನ್.ಎಸ್.ಎಸ್.ಎಫ್. ಹೂಡಿಕೆಯಿಂದ ರಾಜ್ಯಗಳನ್ನು ಹೊರಗಿಡುವ ನಿರ್ಧಾರದ ಜಾರಿ ಮತ್ತು ಸಾಲ ನೀಡಿಕೆಯಿಂದ ಯಾವುದೇ ಹೆಚ್ಚುವರಿ ವೆಚ್ಚದ ಹೊರೆ ಬೀಳುವುದಿಲ್ಲ. ಬದಲಾಗಿ ಆಹಾರ ಸಬ್ಸಿಡಿ ಕಡಿತಕ್ಕೆ ಮಸೂದೆಯನ್ನು ಭಾರತ ಸರ್ಕಾರದಿಂದ ನಿರೀಕ್ಷಿಸುತ್ತದೆ.
ಅರುಣಾಚಲ ಪ್ರದೇಶ, ದೆಹಲಿ, ಕೇರಳ ಮತ್ತು ಮಧ್ಯಪ್ರದೇಶಗಳು ಎನ್.ಎಸ್.ಎಸ್.ಎಫ್.ನಿಂದ ಸಾಲ ಪಡೆಯುವುದನ್ನು ಮುಂದುವರಿಸುತ್ತವೆ. ಮಾರುಕಟ್ಟೆಯಿಂದ ಹಣ ಪಡೆಯಲು ಅರ್ಹವಾದ ಉಳಿದ 26 ರಾಜ್ಯಗಳು ಮತ್ತು ಪಾಂಡಿಚೇರಿಗಳು, ಎನ್.ಎಸ್.ಎಸ್.ಎಫ್.ನಿಂದ ಸಾಲ ಪಡೆಯುವುದನ್ನು ನಿಲ್ಲಿಸುವುದಕ್ಕೆ ಆದ್ಯತೆ ನೀಡುತ್ತದೆ.
ಹಿನ್ನೆಲೆ:
ಎನ್.ಎಸ್.ಎಸ್.ಎಫ್. ಹೂಡಿಕೆ ನಿರ್ವಹಣೆಯಿಂದ ರಾಜ್ಯ ಸರ್ಕಾರಗಳನ್ನು ಹೊರಗಿಡಬೇಕು ಎಂದು ಹದಿನಾಲ್ಕನೇ ಹಣಕಾಸು ಆಯೋಗ (ಎಫ್.ಎಫ್.ಸಿ.) ಶಿಫಾರಸು ಮಾಡಿದೆ. ಮಾರುಕಟ್ಟೆಯಲ್ಲಿನ ಸಾಲದ ದರ ಗಣನೀಯವಾಗಿ ಕಡಿಮೆ ಇರುವುದರಿಂದ ಎನ್.ಎಸ್.ಎಸ್.ಎಫ್. ಸಾಲವು ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ವೆಚ್ಚದಲ್ಲಿ ಬರುತ್ತಿದೆ. 2015ರ ಫೆಬ್ರವರಿ 22ರಂದು ನಡೆದ ತನ್ನ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ವಿವಿಧ ಬಾಧ್ಯಸ್ಥರೊಂದಿಗೆ ಸಮಾಲೋಚಿಸಿ ಮುಂದಿನ ದಿನಗಳಲ್ಲಿ ಈ ಶಿಫಾರಸುಗಳನ್ನು ಪರಿಶೀಲಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಅರುಣಾಚಲ ಪ್ರದೇಶ, ದೆಹಲಿ, ಕೇರಳ ಮತ್ತು ಮಧ್ಯಪ್ರದೇಶ ಬಿಟ್ಟು, ಇತರ ರಾಜ್ಯ ಸರ್ಕಾರಗಲು/ಕೇಂದ್ರಾಡಳಿತ ಪ್ರದೇಶಗಳು ಎನ್.ಎಸ್.ಎಸ್.ಎಫ್. ಹೂಡಿಕೆಯಿಂದ ಹೊರಕೆ ಉಳಿಯುವ ಇಚ್ಛೆ ವ್ಯಕ್ತಪಡಿಸಿದ್ದವು. 1.4.2016ರಿಂದ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿ ಕಾರ್ಯಾಚರಣೆಯಿಂದ ಹೊರಗುಳಿದ ರಾಜ್ಯಗಳ ಪಾಲ್ಗೊಳ್ಳುವಿಕೆಯು ಕೇವಲ ಎನ್.ಎಸ್.ಸ್.ಎಫ್. ಸಾಲದ ಹೊಣೆಗಾರಿಕೆಯನ್ನು 31.3.2016ರವರೆಗೆ ನಿಭಾಯಿಸಲು ಮಾತ್ರ ಸೀಮಿತವಾಗಿರುತ್ತದೆ (ಎಫ್ಎಫ್.ಸಿ. ಶಿಫಾರಸಿನಂತೆ). ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯಿಂದ 31.3.2016ರವರೆಗೆ ರಾಜ್ಯಗಳು ಒಪ್ಪಂದ ಮಾಡಿಕೊಂಡ ಸಾಲವನ್ನು 2038-39ರ ಆರ್ಥಿಕ ವರ್ಷದೊಳಗೆ ಪೂರ್ತಿಯಾಗಿ ಮರು ಪಾವತಿ ಮಾಡಬೇಕಿರುತ್ತದೆ.
ಎನ್.ಎಸ್.ಎಸ್.ಎಫ್. ತನ್ನ ಸಂಗ್ರಹದ ಒಂದು ಭಾಗವನ್ನು ಭಾರತೀಯ ಆಹಾರ ನಿಗಮ (ಎಫ್.ಸಿ.ಐ.)ಗೆ ಆಹಾರ ಸಬ್ಸಡಿ ಅಗತ್ಯದ ಪೂರೈಕೆಗಾಗಿ ನೀಡುತ್ತದೆ. ಇದು ಎಫ್.ಸಿ.ಐ.ಗೆ ಬಡ್ಡಿಯ ವೆಚ್ಚ ತಗ್ಗಿಸಿಕೊಳ್ಳಲು ನೆರವಾಗುತ್ತದೆ. ಎಫ್.ಸಿ.ಐ. ಪ್ರಸ್ತುತ ಕಾರ್ಯನಿರ್ವಹಣಾ ಬಂಡವಾಳದ ಸಾಲವನ್ನು ಕ್ಯಾಷ್ ಕ್ರೆಡಿಟ್ ಲಿಮಿಟ್ (ಸಿಸಿಎಲ್) ಮೂಲಕ ಶೇ.10.01ರ ಬಡ್ಡಿ ದರದಲ್ಲಿ ಪಡೆದುಕೊಳ್ಳುತ್ತಿದೆ ಮತ್ತು ಅಲ್ಪಾವಧಿ ಸಾಲ (ಎಸ್.ಟಿ.ಎಲ್.)ವನ್ನು ವೈಟೆಡ್ ಸರಾಸರಿ ಬಡ್ಡಿ ದರವಾದ ಶೇ.9.40ಯಲ್ಲಿ ಪಡೆಯುತ್ತಿದೆ, ಆದರೆ ಎನ್.ಎಸ್.ಎಸ್.ಎಫ್. ತನ್ನ ಸಾಲದ ಮೇಲೆ ಪ್ರಸ್ತುತ ಶೇ.8.8ರ ವಾರ್ಷಿಕ ಬಡ್ಡಿಯನ್ನು ವಿಧಿಸುತ್ತಿದೆ. ಈ ಬಡ್ಡಿ ದರದ ಉಳಿತಾಯದ ಫಲವು ಭಾರತ ಸರ್ಕಾರದ ಆಹಾರ ಸಬ್ಸಿಡಿ ಹೊರೆಯನ್ನು ತಗ್ಗಿಸುತ್ತದೆ.
AKT/VBA/SH 157439