Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎನ್.ಸಿ.ಸಿ. ರಾಲಿ ಉದ್ದೇಶಿಸಿ ಪ್ರಧಾನಿ ಭಾಷಣ

ಎನ್.ಸಿ.ಸಿ. ರಾಲಿ ಉದ್ದೇಶಿಸಿ ಪ್ರಧಾನಿ ಭಾಷಣ

ಎನ್.ಸಿ.ಸಿ. ರಾಲಿ ಉದ್ದೇಶಿಸಿ ಪ್ರಧಾನಿ ಭಾಷಣ

ಎನ್.ಸಿ.ಸಿ. ರಾಲಿ ಉದ್ದೇಶಿಸಿ ಪ್ರಧಾನಿ ಭಾಷಣ


ಸಮವಸ್ತ್ರ, ಪರೇಡ್ ಮತ್ತು ಶಿಬಿರಗಳ ಆಚೆಗೂ ಎನ್.ಸಿ.ಸಿ. ಕೆಡೆಟ್ ನ ಜೀವನವಿರುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದ್ದಾರೆ; ಎನ್.ಸಿ.ಸಿ. ಅನುಭವವು ಅಭಿಯಾನದ ಭಾವನೆಯನ್ನು ಪ್ರದಾನ ಮಾಡುತ್ತದೆ ಎಂದೂ ಹೇಳಿದ್ದಾರೆ. ನವದೆಹಲಿಯಲ್ಲಿಂದು ಅವರು ಎನ್.ಸಿ.ಸಿ. ರಾಲಿ ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.

ಎನ್.ಸಿ.ಸಿ.ಯ ಅನುಭವವು ಭಾರತದ ಸಂಪಕ್ಷಿಪ್ತ ನೋಟವನ್ನು, ಅದರ ಬಲ ಮತ್ತು ವೈವಿಧ್ಯತೆಯನ್ನು ತೋರಿಸುತ್ತದೆ ಎಂದು ಹೇಳಿದರು. ಚಕ್ರವರ್ತಿಗಳು, ಆಡಳಿತಗಾರರು,ಸರ್ಕಾರಗಳು ದೇಶವನ್ನು ಮಾಡುವುದಿಲ್ಲ, ಆದರೆ ನಾಗರಿಕರು, ಯುವಕರು, ರೈತರು,ವಿದ್ವಾಂಸರು, ವಿಜ್ಞಾನಿಗಳು, ಕಾರ್ಯಪಡೆ ಮತ್ತು ಸಂತರು ದೇಶವನ್ನು ರೂಪಿಸುತ್ತಾರೆ ಎಂದರು. ಎನ್.ಸಿ.ಸಿ. ಕೆಡೆಟ್ ಗಳು ಭಾರತದ ಭವಿಷ್ಯದ ವಿಶ್ವಾಸಕ್ಕೆ ಸ್ಪೂರ್ತಿ ತುಂಬುತ್ತಾರೆ ಮತ್ತು ನಮ್ಮ ಯುವಜನರ ಶಕ್ತಿಯ ಬಗ್ಗೆ ಹೆಮ್ಮೆ ಮೂಡುಸುತ್ತದೆ ಎಂದರು.

ಸ್ವಚ್ಛತೆಯ ಉದ್ದೇಶವನ್ನು ಮುಂದುವರಿಸುವಲ್ಲಿ ಎನ್.ಸಿ.ಸಿ.ಯ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದರು. ಡಿಜಿಟಲ್ ವಹಿವಾಟಿನೆಡೆಗಿನ ಚಲನೆಯನ್ನು ಮುಂದುವರಿಸುವಂತೆಯೂ ಅವರು ಕರೆ ನೀಡಿದರು.

****