ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹಸಿರು ಮನೆ ಅನಿಲ(ಸಿಎಚ್ ಜಿಗಳು) ಹೊರಸೂಸುವಿಕೆ ಒಳಗೊಂಡ ಕ್ಯೋಟೋ ಶಿಷ್ಟಾಚಾರದ ಎರಡನೇ ಬದ್ಧತೆ ಅವಧಿಯ ಸ್ಥಿರೀಕರಣಕ್ಕೆ ತನ್ನ ಅನುಮೋದನೆ ನೀಡಿದೆ. ಕ್ಯೋಟೋ ಶಿಷ್ಟಾಚಾರದ ಎರಡನೇ ಬದ್ಧತೆಯ ಅವಧಿಯನ್ನು 2012ರನ್ನು ಅಂಗೀಕರಿಸಲಾಗಿತ್ತು. ಈವರೆಗೆ 65 ರಾಷ್ಟ್ರಗಳು ಎರಡನೇ ಬದ್ಧತೆಯ ಅವಧಿಯನ್ನು ಸ್ಥಿರೀಕರಿಸಿವೆ.
ಹವಾಮಾನ ಬದಲಾವಣೆ ವಿಚಾರಗಳಲ್ಲಿ ಅಂತಾರಾಷ್ಟ್ರೀಯ ಒಮ್ಮತ ಮೂಡಿಸುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಿರುವ ನಿಟ್ಟಿನಲ್ಲಿ, ಈ ನಿರ್ಧಾರವು ಹವಾಮಾನ ನ್ಯಾಯ ಮತ್ತು ಪರಿಸರ ಸಂರಕ್ಷಣೆಯ ಜಾಗತಿಕ ಉದ್ದೇಶಕ್ಕಾಗಿ ಬದ್ಧವಾಗಿರುವ ದೇಶಗಳಲ್ಲಿ ಭಾರತದ ನಾಯಕತ್ವವನ್ನು ಒತ್ತಿ ಹೇಳುತ್ತದೆ. ಭಾರತದಿಂದ ಕ್ಯೋಟೋ ಶಿಷ್ಟಾಚಾರದ ಸ್ಥಿರೀಕರಣವು, ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಈ ಕಸರತ್ತು ನಡೆಸಲು ಉತ್ತೇಜನ ನೀಡುತ್ತದೆ. ಈ ಬದ್ಧತೆಯ ಅವಧಿಯಲ್ಲಿ ಶುದ್ಧ ಅಭಿವೃದ್ಧಿ ವ್ಯವಸ್ಥೆ (ಸಿಡಬ್ಯ್ಲುಎಂ) ಯೋಜನೆಗಳ ಜಾರಿಯು ಸುಸ್ಥಿರ ಅಭಿವೃದ್ಧಿಯ ಆದ್ಯತೆಗಳಿಗೆ ಅನುಗುಣವಾಗಿದ್ದು, ಭಾರತದಲ್ಲಿ ಕೆಲವು ಹೂಡಿಕೆಯನ್ನೂ ಆಕರ್ಷಿಸಲಿದೆ.
ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟಿನ ಒಪ್ಪಂದ (ಯು.ಎನ್.ಎಫ್.ಸಿಸಿ) ವು ಹವಾಮಾನ ವ್ಯವಸ್ಥೆಯಲ್ಲಿ ಹೆಚ್ಚಿನ ಅಡ್ಡಿಯಾಗದ ರೀತಿ ವಾತಾವರಣದಲ್ಲಿ ಹಸಿರು ಮನೆ ಅನಿಲ ಸಾಂದ್ರತೆಯನ್ನು ಒಂದು ಮಟ್ಟದಲ್ಲಿ ಸ್ಥಿರವಾಗಿಡುವುದನ್ನು ಬಯಸುತ್ತದೆ. ಪ್ರಸ್ತುತ ವಾತಾವರಣದಲ್ಲಿರುವ ಅತಿ ಹೆಚ್ಚಿನ ಮಟ್ಟದ ಹಸಿರುಮನೆ ಅನಿಲ (ಜಿಎಚ್ಜಿಗಳು)ಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ತಾತ್ವಿಕವಾಗಿ ಜವಾಬ್ದಾರಿ ಎಂಬುದನ್ನು ಗುರುತಿಸಿ, ಕ್ಯೋಟೋ ಶಿಷ್ಟಾಚಾರವು ಅಭಿವೃದ್ಧಿಹೊಂದಿದ ರಾಷ್ಟ್ರಗಳು ಗುರಿಯನ್ನು ತಗ್ಗಿಸಲು ಕ್ರಮವಹಿಸುವುದು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಸಂಪನ್ಮೂಲ ಮತ್ತು ತಂತ್ರಜ್ಞಾನ ವರ್ಗಾವಣೆ ಮಾಡುವ ಬದ್ಧತೆಯನ್ನು ನೀಡುತ್ತದೆ. ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಯಾವುದೇ ಕಡ್ಡಾಯವಾದ ತಗ್ಗಿಸುವಿಕೆಯ ಹೊಣೆಯಿಲ್ಲ ಅಥವಾ ಕ್ಯೋಟೋ ಶಿಷ್ಟಾಚಾರದಡಿ ಯಾವುದೇ ಗುರಿ ಇರುವುದಿಲ್ಲ.
ಹಿನ್ನೆಲೆ
ಕ್ಯೋಟೋ ಶಿಷ್ಟಾಚಾರವನ್ನು 1997ರಲ್ಲಿ ಅಂಗೀಕರಿಸಲಾಯಿತು ಮತ್ತು ಮೊದಲ ಬದ್ಧತೆಯ ಅವಧಿಯು 2008-2012 ಆಗಿತ್ತು. 2012ರಲ್ಲಿ ದೋಹಾದಲ್ಲಿ 2013-2020ರವರೆಗಿನ ಕ್ಯೋಟೋ ಶಿಷ್ಟಾಚಾರದ 2ನೇ ಬದ್ಧತೆಯ ಅವಧಿಗೆ (ದೋಹಾ ತಿದ್ದುಪಡಿ) ತಿದ್ದುಪಡಿಗಳನ್ನು ಯಶಸ್ವಿಯಾಗಿ ಅಂಗೀಕರಿಸಲಾಯಿತು. ಅಭಿವೃದ್ಧಿಹೊಂದಿದ ರಾಷ್ಟ್ರಗಳು ಈಗಾಗಲೇ ದೋಹಾ ತಿದ್ದುಪಡಿಯ ಆಪ್ಟ್ ಇನ್ ನಿಬಂಧನೆಗಳ ಅಡಿಯಲ್ಲಿ ಅನುಷ್ಠಾನ ಆರಂಭಿಸಿವೆ.
2020ಕ್ಕೆ ಮುಂಚಿನ ಅವಧಿಯಲ್ಲಿ ಪಾಲುದಾರರಾದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಾಮಾನದ ಕ್ರಮಗಳನ್ನು ಕೈಗೊಳ್ಳಬೇಕಾದ ಮಹತ್ವವನ್ನು ಭಾರತವು ಸದಾ ಪ್ರತಿಪಾದಿಸುತ್ತಲೇ ಬಂದಿದೆ. ಜೊತೆಗೆ, ಸಮಾನತೆಯ ಮತ್ತು ಸಮಾನ ಆದರೆ ವಿಭಿನ್ನ ಹೊಣೆಗಾರಿಕೆ ಹಾಗೂ ಸಂಬಂಧಿತ ಸಾಮರ್ಥ್ಯ (ಸಿಬಿಡಿಆರ್ ಮತ್ತು ಆರ್.ಸಿ)ಯಂತೆ ಒಪ್ಪಂದದ ನಿಬಂಧನೆಗಳು ಮತ್ತು ನೀತಿಗಳ ಆಧಾರದ ಮೇಲೆ ಹವಾಮಾನ ಕ್ರಮವನ್ನು ಪ್ರತಿಪಾದಿಸಿದೆ.
AKT/VB/SH