Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವರಿಷ್ಠ ಪಿಂಚಣಿ ಬಿಮಾ ಯೋಜನೆ -2017


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ವರಿಷ್ಠ ಪಿಂಚಣಿ ಬಿಮಾ ಯೋಜನೆ 2017(ವಿಪಿಬಿವೈ 2017)ರ ಆರಂಭಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಇದು ಸರ್ಕಾರದ ಸಾಮಾಜಿಕ ಭದ್ರತೆ ಮತ್ತು ಹಣಕಾಸು ಪೂರಣ ಬದ್ಧತೆಯ ಭಾಗವಾಗಿದೆ.

ಮಾರುಕಟ್ಟೆಯ ಅನಿಶ್ಚಿತ ಪರಿಸ್ಥಿತಿಯ ಕಾರಣದಿಂದ ಬಡ್ಡಿ ಆದಾಯ ಭವಿಷ್ಯದಲ್ಲಿ ಕಡಿಮೆ ಆಗುವುದರಿಂದ 60 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರ ರಕ್ಷಣೆಗಾಗಿ ಮತ್ತು ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆ ಒದಗಿಸಲು ಈ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ (ಎಲ್.ಐ.ಸಿ.) ಮೂಲಕ ಜಾರಿ ಮಾಡಲಾಗುತ್ತದೆ. ಈ ಯೋಜನೆಯು ಮಾಸಿಕ/ತ್ರೈಮಾಸಿಕ/ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಪಿಂಚಣಿ ಆಯ್ಕೆ ಮಾಡಿಕೊಳ್ಳುವ ಸೌಲಭ್ಯದೊಂದಿಗೆ 10 ವರ್ಷಗಳವರೆಗೆ ಖಚಿತ ವಾರ್ಷಿಕ ಶೇ.8ರ ದರದ ಬಡ್ಡಿ ಆಧಾರಿತ ಪಿಂಚಣಿ ಆಧಾರಿತ ಖಾತ್ರಿ ಒದಗಿಸುತ್ತದೆ. ಈ ಮರಳಿ ನೀಡಿಕೆ ಮೊತ್ತದ ವ್ಯತ್ಯಾಸ ಅಂದರೆ ಎಲ್.ಐ.ಸಿ. ಮರಳಿಸುವ ಮೊತ್ತಕ್ಕೆ ಒದಗಿಸುವ ಖಾತ್ರಿ ಮತ್ತು ಶೇಕಡ 8ರ ವಾರ್ಷಿಕ ಖಾತ್ರಿ ದರದ ನಡುವಿನ ವ್ಯತ್ಯಾಸವನ್ನು ಭಾರತ ಸರ್ಕಾರ ವಾರ್ಷಿಕ ಸಬ್ಸಡಿ ಆಧಾರದಲ್ಲಿ ಭರಿಸಲಿದೆ.

ವಿಪಿಬಿವೈ-2017 ಆರಂಭಗೊಳ್ಳುವ ದಿನದಿಂದ ಒಂದು ವರ್ಷದ ಅವಧಿಗೆ ಚಂದಾ ಸ್ವೀಕೃತಿಗೆ ಮುಕ್ತವಾಗಿರುವ ಪ್ರಸ್ತಾವನೆ ಮಾಡಲಾಗಿದೆ.

****

AKT/VBA/SH