ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತವು, ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ (ಐ.ವಿ.ಐ.) ಆಡಳಿತ ಮಂಡಳಿಯಲ್ಲಿ ಪೂರ್ಣ ಸದಸ್ಯತ್ವ ಪಡೆಯುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಈ ನಡೆಯು ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿನ ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆಗೆ ವಾರ್ಷಿಕ 5,00,000 ಅಮೆರಿನ್ ಡಾಲರ್ ಕೊಡುಗೆ ಪಾವತಿಯನ್ನೂ ಒಳಗೊಂಡಿದೆ.
ಹಿನ್ನೆಲೆ
ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ (ಐ.ವಿ.ಐ.), ಸಿಯೋಲ್, ದಕ್ಷಿಣ ಕೊರಿಯಾ, ಇದು ಮಾರಣಾಂತಿಕವಾದ ಸೋಂಕಿನಿಂದ ಜನರನ್ನು ಅದರಲ್ಲೂ ಮಕ್ಕಳನ್ನು ರಕ್ಷಿಸಲು ಸುಧಾರಿತ ಮತ್ತು ಹೊಸ ಲಸಿಕೆ ಅಭಿವೃದ್ಧಿಪಡಿಸಿ ಪರಿಚಯಿಸುವ ಉದ್ದೇಶದಿಂದ ಯು.ಎನ್.ಡಿ.ಪಿ. ಉಪಕ್ರಮದ ಫಲವಾಗಿ 1997ರಲ್ಲಿ ಸ್ಥಾಪನೆ ಆಯಿತು. 2007ರಲ್ಲಿ, ಭಾರತವು ಸಂಪುಟದ ಅನುಮೋದನೆಯೊಂದಿಗೆ ಐ.ವಿ.ಐ.ಗೆ ಸೇರ್ಪಡೆಯಾಯಿತು. ಭಾರತವು ಐ.ವಿ.ಐ.ನ ದೀರ್ಘ ಕಾಲೀನ ಸಹಯೋಗಿ ಮತ್ತು ಪಾಲುದಾರ. 2012ರ ಡಿಸೆಂಬರ್ ನಲ್ಲಿ ಐವಿಐನ ಟ್ರಸ್ಟಿಗಳ ಮಂಡಳಿಯು (ಬಿ.ಓ.ಟಿ.), ಹೊಸ ಆಡಳಿತ ಸ್ವರೂಪದ ರಚನೆಗೆ ಅನುಮೋದನೆ ನೀಡಿತ್ತು. ಐ.ವಿ.ಐ.ನ ಹೊಸ ಆಡಳಿತ ಸ್ವರೂಪದಂತೆ ಸದಸ್ಯ ರಾಷ್ಟ್ರವು ಐ.ವಿ.ಐ.ಗೆ. ಅದರ ಒಟ್ಟು ಬಜೆಟ್ ನ ಭಾಗವನ್ನು ಪಾವತಿ ಮಾಡಬೇಕಾಗುತ್ತದೆ. ಭಾರತವು ಗ್ರೂಪ್ 1ರಲ್ಲಿ ವರ್ಗೀಕರಣವಾಗಿದ್ದು, ಅದು ವಾರ್ಷಿಕ 50,000 ಅಮೆರಿಕನ್ ಡಾಲರ್ ಪಾವತಿ ಮಾಡಬೇಕಾಗಿದೆ.
AKT/VBA/SH