ರಾಜ್ಯಸಭಾ ಸಂಸದರಾದ ತಿರು ಇಳಯರಾಜ ಅವರು ನವದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಇತ್ತೀಚೆಗೆ ಲಂಡನ್ನಲ್ಲಿ ಪ್ರತಿಷ್ಠಿತ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಜೊತೆ ಪ್ರದರ್ಶನಗೊಂಡ ಇಳಯರಾಜ ಅವರ ಮೊದಲ ಪಾಶ್ಚಿಮಾತ್ಯ ಶಾಸ್ತ್ರೀಯ ಸುದೀರ್ಘ ಸಂಗೀತ ಸಂಯೋಜನೆ (ಸಿಂಫನಿ) ವೇಲಿಯಂಟ್ ಅನ್ನು ಶ್ರೀ ಮೋದಿ ಅವರು ಶ್ಲಾಘಿಸಿದ್ದಾರೆ. ಭಾರತೀಯ ಮತ್ತು ಜಾಗತಿಕ ಸಂಗೀತದ ಮೇಲೆ ಈ ಸಂಗೀತ ಮಾಂತ್ರಿಕರ ಅಗಾಧ ಪ್ರಭಾವವನ್ನು ಗುರುತಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಳಯರಾಜ ಅವರನ್ನು “ಸಂಗೀತ ದಿಗ್ಗಜ ಮತ್ತು ಮಾರ್ಗದರ್ಶಕ” ಎಂದು ಬಣ್ಣಿಸಿದ್ದಾರೆ. ಅವರ ಸಂಗೀತ ಸೇವೆಯು ಜಾಗತಿಕ ಮಟ್ಟದಲ್ಲಿ ಶ್ರೇಷ್ಠತೆಯನ್ನು ಮರು ವ್ಯಾಖ್ಯಾನಿಸುತ್ತಲೇ ಇರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ಮೋದಿ ಅವರ ಎಕ್ಸ್ ಪೋಸ್ಟ್ ಹೀಗಿದೆ:
“ನಮ್ಮ ಸಂಗೀತ ಮತ್ತು ಸಂಸ್ಕೃತಿಯ ಮೇಲೆ ಅಗಾಧ ಪ್ರಭಾವ ಬೀರಿರುವ ಸಂಗೀತ ದಿಗ್ಗಜ, ರಾಜ್ಯಸಭಾ ಸದಸ್ಯರಾದ ಶ್ರೀ ಇಳಯರಾಜ ಅವರನ್ನು ಭೇಟಿಯಾಗಲು ಸಂತೋಷವಾಯಿತು.
ಅವರು ಪ್ರತಿಯೊಂದು ಅರ್ಥದಲ್ಲೂ ಹೊಸ ಪ್ರತಿಭೆ, ಕೆಲವು ದಿನಗಳ ಹಿಂದೆ ಲಂಡನ್ನಲ್ಲಿ ತಮ್ಮ ಮೊದಲ ಪಾಶ್ಚಾತ್ಯ ಶಾಸ್ತ್ರೀಯ ಸಿಂಫನಿ ವೇಲಿಯಂಟ್ ಅನ್ನು ಪ್ರಸ್ತುತಪಡಿಸುವ ಮೂಲಕ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ. ಈ ಪ್ರದರ್ಶನವು ವಿಶ್ವಪ್ರಸಿದ್ಧ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದೊಂದಿಗೆ ನಡೆಯಿತು. ಈ ಮಹತ್ವದ ಸಾಧನೆಯು ಅವರ ಅನನ್ಯ ಸಂಗೀತ ಪಯಣದಲ್ಲಿ ಮತ್ತೊಂದು ಅಧ್ಯಾಯವನ್ನು ಗುರುತಿಸಿದೆ – ಇದು ಜಾಗತಿಕ ಮಟ್ಟದಲ್ಲಿ ಶ್ರೇಷ್ಠತೆಯನ್ನು ಮರು ವ್ಯಾಖ್ಯಾನಿಸುವುದನ್ನು ಮುಂದುವರೆಸಿದೆ.
@ilaiyaraaja”
“நாடாளுமன்ற மாநிலங்களவை உறுப்பினர் திரு இளையராஜா அவர்களை சந்தித்ததில் மகிழ்ச்சி அடைகிறேன். இசைஞானியான அவரது மேதைமை நமது இசை மற்றும் கலாச்சாரத்தில் மகத்தான தாக்கத்தை ஏற்படுத்தியுள்ளது. எல்லா வகையிலும் முன்னோடியாக இருக்கும் அவர், சில நாட்களுக்கு முன் லண்டனில் தனது முதலாவது மேற்கத்திய செவ்வியல் சிம்பொனியான வேலியண்ட்டை வழங்கியதன் மூலம் மீண்டும் வரலாறு படைத்துள்ளார். இந்த நிகழ்ச்சி, உலகப் புகழ்பெற்ற ராயல் பில்ஹார்மோனிக் இசைக்குழுவுடன் இணைந்து நடத்தப்பட்டது. இந்த முக்கியமான சாதனை, அவரது இணையற்ற இசைப் பயணத்தில் மற்றொரு அத்தியாயத்தைக் குறிக்கிறது – உலக அளவில் தொடர்ந்து மேன்மையுடன் விளங்குவதை இது எடுத்துக்காட்டுகிறது.
*****
Delighted to meet Rajya Sabha MP Thiru Ilaiyaraaja Ji, a musical titan whose genius has a monumental impact on our music and culture.
— Narendra Modi (@narendramodi) March 18, 2025
He is a trailblazer in every sense and he made history yet again by presenting his first-ever Western classical symphony, Valiant, in London a… pic.twitter.com/u2WARcbrQD
நாடாளுமன்ற மாநிலங்களவை உறுப்பினர் திரு இளையராஜா அவர்களை சந்தித்ததில் மகிழ்ச்சி அடைகிறேன். இசைஞானியான அவரது மேதைமை நமது இசை மற்றும் கலாச்சாரத்தில் மகத்தான தாக்கத்தை ஏற்படுத்தியுள்ளது.
— Narendra Modi (@narendramodi) March 18, 2025
எல்லா வகையிலும் முன்னோடியாக இருக்கும் அவர், சில நாட்களுக்கு முன் லண்டனில் தனது முதலாவது… pic.twitter.com/WAsqFzEzpL