Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಿಐಎಸ್‌ಎಫ್‌ ಸಂಸ್ಥಾಪನಾ ದಿನದ ಅಂಗವಾಗಿ ಸಿಬ್ಬಂದಿಗೆ ಪ್ರಧಾನಮಂತ್ರಿ ಶುಭಾಶಯ 


ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಐಎಸ್ಎಫ್‌ ನ ಎಲ್ಲಾ ಸಿಬ್ಬಂದಿಗೆ ಶುಭ ಕೋರಿದ್ದಾರೆ. ಸಿಐಎಸ್ಎಫ್ ಪಡೆ ಅದರ ವೃತ್ತಿಪರತೆ, ಸಮರ್ಪಣೆ ಮತ್ತು ಶೌರ್ಯಕ್ಕಾಗಿ ಪ್ರಶಂಸಿಸಲ್ಪಟ್ಟಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. “ಅಗತ್ಯ ಮೂಲಸೌಕರ್ಯಗಳನ್ನು ರಕ್ಷಿಸುವ ಮೂಲಕ ಮತ್ತು ಪ್ರತಿದಿನ ಅಸಂಖ್ಯಾತ ಜನರ ಸುರಕ್ಷತೆಯನ್ನು ಖಾತರಿಪಡಿಸುವ ಮೂಲಕ ಅವರು ನಮ್ಮ ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಕರ್ತವ್ಯಕ್ಕೆ ಅವರ ಅಚಲ ಬದ್ಧತೆ ನಿಜವಾಗಿಯೂ ಶ್ಲಾಘನೀಯ” ಎಂದು ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಪ್ರಧಾನಮಂತ್ರಿಗಳ ಎಕ್ಸ್‌ ಪೋಸ್ಟ್‌ ಹೀಗಿದೆ:

“ಸಿಐಎಸ್‌ಎಫ್‌ನ ಎಲ್ಲಾ ಸಿಬ್ಬಂದಿಗೆ ಸಂಸ್ಥಾಪನಾ ದಿನದ ಶುಭಾಶಯಗಳು! ಈ ಪಡೆಯು ಅದರ ವೃತ್ತಿಪರತೆ, ಸಮರ್ಪಣೆ ಮತ್ತು ಶೌರ್ಯಕ್ಕೆ ಮೆಚ್ಚುಗೆ ಪಡೆದಿದೆ. ಅಗತ್ಯ ಮೂಲಸೌಕರ್ಯಗಳನ್ನು ರಕ್ಷಿಸುತ್ತಾ ಮತ್ತು ಪ್ರತಿದಿನ ಅಸಂಖ್ಯಾತ ಜನರ ಸುರಕ್ಷತೆಯನ್ನು ಖಾತರಿಪಡಿಸುತ್ತಾ ಈ ಪಡೆ ನಮ್ಮ ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.  ಕರ್ತವ್ಯಕ್ಕೆ ಅವರ ಅಚಲ ಬದ್ಧತೆ ನಿಜವಾಗಿಯೂ ಶ್ಲಾಘನೀಯ.”

@CISFHQrs

 

 

*****