Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ವನ್ಯಜೀವಿ ದಿನವಾದ ಇಂದು ಬೆಳಿಗ್ಗೆ ನಾನು ಗಿರ್‌ನಲ್ಲಿ ಸಫಾರಿ ಹೋಗಿದ್ದೆ, ಅದು ನಿಮಗೆಲ್ಲರಿಗೂ ತಿಳಿದಿರುವಂತೆ ಭವ್ಯವಾದ ಏಷ್ಯಾದ ಸಿಂಹಗಳ ನೆಲೆವೀಡಾಗಿದೆ; ಗಿರ್‌ಗೆ ಬರುವುದರಿಂದ ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ನಾವು ಸಾಮೂಹಿಕವಾಗಿ ಮಾಡಿದ ಕೆಲಸಗಳ ಅನೇಕ ನೆನಪುಗಳು ಮತ್ತೆ ಮರುಕಳಿಸುತ್ತವೆ: ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಏಷ್ಯಾದ ಸಿಂಹಗಳ ನೆಲೆವೀಡಾದ ಗಿರ್‌ ನಲ್ಲಿ ಸಫಾರಿ ಕೈಗೊಂಡಿದ್ದರು. 

ಅವರು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ.

“ವಿಶ್ವವನ್ಯಜೀವಿ ದಿನ#WorldWildlife ವಾದ ಇಂದು ಬೆಳಿಗ್ಗೆ ನಾನು ಗಿರ್ ನಲ್ಲಿ ಸಫಾರಿ ಹೋಗಿದ್ದೆ. ಅದು ನಿಮಗೆಲ್ಲರಿಗೂ ತಿಳಿದಿರುವಂತೆ ಭವ್ಯ ಏಷ್ಯಾದ ಸಿಂಹಗಳ ನೆಲೆಯಾಗಿದೆ. ನಾನು ಗಿರ್ ಗೆ ಬಂದಾಗ, ಗುಜರಾತ್ ಸಿಎಂ ಆಗಿದ್ದಾಗ ನಾವು ಸಾಮೂಹಿಕವಾಗಿ ಮಾಡಿದ ಕೆಲವು ಕಾರ್ಯಗಳು ಮತ್ತೆ ನೆನಪಾಗುತ್ತವೆ. ಕಳೆದ ಹಲವು ವರ್ಷಗಳಲ್ಲಿ, ಸಾಮೂಹಿಕ ಪ್ರಯತ್ನಗಳಿಂದಾಗಿ ಏಷ್ಯಾದ ಸಿಂಹಗಳ ಜನಸಂಖ್ಯೆಯು ಸ್ಥಿರವಾಗಿ ಏರುತ್ತಿದೆ ಎಂಬುದನ್ನು ಖಾತ್ರಿಪಡಿಸಿವೆ. ಏಷ್ಯಾದ ಸಿಂಹದ ಆವಾಸಸ್ಥಾನಗಳನ್ನು ಸಂರಕ್ಷಿಸುವಲ್ಲಿ ಬುಡಕಟ್ಟು ಸಮುದಾಯಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರ ಪಾತ್ರವೂ ಅಷ್ಟೇ ಶ್ಲಾಘನೀಯ.”

“ಗಿರ್ ನ ಇನ್ನೂ ಕೆಲವು ನೋಟ ಇಲ್ಲಿವೆ. ಭವಿಷ್ಯದಲ್ಲಿ ನೀವೆಲ್ಲರೂ ಗಿರ್ ಗೆ ಭೇಟಿ ನೀಡಲು ನಾನು ಒತ್ತಾಯಿಸುತ್ತೇನೆ.”

“ಗಿರ್ ನಲ್ಲಿ ಸಿಂಹಗಳು ಮತ್ತು ಸಿಂಹಿಣಿಗಳು! ಇಂದು ಬೆಳಿಗ್ಗೆ ಛಾಯಾಗ್ರಹಣದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದೆ.”

 

 

*****