ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಯಾಗ್ ರಾಜ್ನಲ್ಲಿ ಮಹಾಕುಂಭ ಮುಕ್ತಾಯದ ನಂತರ ಗುಜರಾತ್ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದರು.
ಎಕ್ಸ್ ಖ್ಯಾತೆಯ ಪ್ರತ್ಯೇಕ ಪೋಸ್ಟ್ಗಳಲ್ಲಿ, ಅವರು ಹೀಗೆ ಬರೆದಿದ್ದಾರೆ:
‘‘ಪ್ರಯಾಗ್ ರಾಜ್ನಲ್ಲಿನಡೆದ ಮಹಾಕುಂಭದ ನಂತರ, ನಾನು 12 ಜ್ಯೋತಿರ್ಲಿಂಗಗಳಲ್ಲಿಮೊದಲನೆಯದಾದ ಸೋಮನಾಥಕ್ಕೆ ಹೋಗಲು ನಿರ್ಧರಿಸಿದ್ದೆ. ಇಂದು, ಸೋಮನಾಥ ಮಂದಿರದಲ್ಲಿ ಪ್ರಾರ್ಥಿಸಲು ನಾನು ಆಶೀರ್ವದಿಸಲ್ಪಟ್ಟಿದ್ದೇನೆ. ಪ್ರತಿಯೊಬ್ಬ ಭಾರತೀಯನ ಸಮೃದ್ಧಿ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸಿದೆ. ಈ ದೇವಾಲಯವು ನಮ್ಮ ಸಂಸ್ಕೃತಿಯ ಕಾಲಾತೀತ ಪರಂಪರೆ ಮತ್ತು ಧೈರ್ಯವನ್ನು ವ್ಯಕ್ತಪಡಿಸುತ್ತದೆ,’’ ಎಂದಿದ್ದಾರೆ.
‘‘ಪ್ರಯಾಗ್ ರಾಜ್ನಲ್ಲಿ ಏಕತೆಯ ಮಹಾಕುಂಭವು ಕೋಟ್ಯಂತರ ದೇಶವಾಸಿಗಳ ಪ್ರಯತ್ನದಿಂದ ಮುಕ್ತಾಯಗೊಂಡಿದೆ. ಮಹಾಕುಂಭದ ನಂತರ, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲ ಜ್ಯೋತಿರ್ಲಿಂಗವಾದ ಶ್ರೀ ಸೋಮನಾಥನನ್ನು ಪೂಜಿಸುತ್ತೇನೆ ಎಂದು ಸೇವಕನಂತೆ ನಾನು ನನ್ನ ಹೃದಯದಲ್ಲಿ ಪ್ರತಿಜ್ಞೆ ಮಾಡಿದ್ದೆ. ಇಂದು, ಸೋಮನಾಥ ಅವರ ಕೃಪೆಯಿಂದ, ಆ ಸಂಕಲ್ಪವು ಈಡೇರಿದೆ. ಎಲ್ಲಾ ದೇಶವಾಸಿಗಳ ಪರವಾಗಿ, ನಾನು ಏಕತೆಯ ಮಹಾಕುಂಭದ ಯಶಸ್ವಿ ಸಾಧನೆಯನ್ನು ಶ್ರೀ ಸೋಮನಾಥ ಭಗವಾನ್ ಅವರ ಪಾದಗಳಲ್ಲಿಸಮರ್ಪಿಸುತ್ತೇನೆ. ಈ ಸಮಯದಲ್ಲಿ, ನಾನು ಪ್ರತಿಯೊಬ್ಬ ದೇಶವಾಸಿಯ ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದೆ,’’ಎಂದಿದ್ದಾರೆ.
*****