ಪ್ರಯಾಗ್ ರಾಜ್ ನಲ್ಲಿ ಮಹಾಕುಂಭ ಮೇಳ ಮುಕ್ತಾಯಗೊಳ್ಳುತ್ತಿದ್ದಂತೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಮ್ಮ ನೆಲದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಅದ್ಭುತವಾಗಿ ಚಿತ್ರಿಸಿರುವ ಈ ಐತಿಹಾಸಿಕ ಸಭಿಕತೆಯ ಬಗ್ಗೆ ಪ್ರತಿಬಿಂಬಿಸಿದರು. ತಾವು ಬರೆದಿರುವ ಬ್ಲಾಗ್ ಅನ್ನು ಓದುವಂತೆ ಪ್ರತಿಯೊಬ್ಬರನ್ನು ಒತ್ತಾಯಿಸಿದ ಶ್ರೀ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ಪ್ರಯಾಗ್ರಾಜ್ ನಲ್ಲಿ ಮಹಾಕುಂಭ ಮುಕ್ತಾಯಗೊಳ್ಳುತ್ತಿದ್ದಂತೆ, ಈ ಹೆಗ್ಗುರುತು ಸಭೆಯ ಬಗ್ಗೆ ಕೆಲವು ಆಲೋಚನೆಗಳನ್ನು ಬರೆದಿದ್ದೇನೆ, ಇದು ನಮ್ಮ ನೆಲದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಅದ್ಭುತವಾಗಿ ಚಿತ್ರಿಸುತ್ತದೆ. ನನ್ನ ಬ್ಲಾಗ್ ಅನ್ನು ಇಂಗ್ಲಿಷ್ ನಲ್ಲಿ ಓದಿ.
*****