Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರಿಂದ ಫ್ರಾನ್ಸ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ


ಉಭಯ ನಾಯಕರ ನಡುವಿನ ವೈಯಕ್ತಿಕ ಬಾಂಧವ್ಯವನ್ನು ಪ್ರತಿಬಿಂಬಿಸುವ ವಿಶೇಷ ಸಂದರ್ಭವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಶ್ರೀ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ನಿನ್ನೆ ಫ್ರಾನ್ಸ್ ಅಧ್ಯಕ್ಷೀಯ ವಿಮಾನದಲ್ಲಿ ಪ್ಯಾರಿಸ್‌ ನಿಂದ ಮಾರ್ಸೆಲ್ಲೆಗೆ ಒಟ್ಟಿಗೆ ಪ್ರಯಾಣಿಸಿದರು. ಅವರು ದ್ವಿಪಕ್ಷೀಯ ಸಂಬಂಧಗಳು ಮತ್ತು ಪ್ರಮುಖ ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ಕುರಿತು ಚರ್ಚಿಸಿದರು. ಇದಾದ ಬಳಿಕ ಮಾರ್ಸೆಲ್ಲೆ ತಲುಪಿದ ಬಳಿಕ ನಿಯೋಗ ಮಟ್ಟದ ಮಾತುಕತೆ ನಡೆಯಿತು. ಕಳೆದ 25 ವರ್ಷಗಳಲ್ಲಿ ಬಹು ಆಯಾಮದ ಸಂಬಂಧವಾಗಿ ವಿಕಸನಗೊಂಡಿರುವ ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಗೆ ತಮ್ಮ ಬಲವಾದ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.

ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯ ಎಲ್ಲಾ ಅಂಶಗಳನ್ನು ಮಾತುಕತೆಯಲ್ಲಿ ಚರ್ಚಿಸಲಾಗಿಯಿತು. ರಕ್ಷಣೆ, ನಾಗರಿಕ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶದ ಕಾರ್ಯತಂತ್ರ ಕ್ಷೇತ್ರಗಳಲ್ಲಿನ ಸಹಕಾರವನ್ನು ಉಭಯ ನಾಯಕರು ಪರಿಶೀಲಿಸಿದರು. ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ಮಾರ್ಗಗಳನ್ನು ಅವರು ಚರ್ಚಿಸಿದರು. ಇತ್ತೀಚೆಗೆ ಮುಕ್ತಾಯಗೊಂಡ ಎಐ ಆಕ್ಷನ್ ಶೃಂಗಸಭೆ ಮತ್ತು 2026 ರಲ್ಲಿ ಮುಂಬರುವ ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷದ ಹಿನ್ನೆಲೆಯಲ್ಲಿ ಪಾಲುದಾರಿಕೆಯ ಈ ಕ್ಷೇತ್ರವು ಇನ್ನಷ್ಟು ಮಹತ್ವದ್ದಾಗಿದೆ. ಉಭಯ ನಾಯಕರು ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಹೆಚ್ಚಿಸಲು ಕರೆ ನೀಡಿದರು ಮತ್ತು ಈ ನಿಟ್ಟಿನಲ್ಲಿ 14 ನೇ ಭಾರತ-ಫ್ರಾನ್ಸ್ ಸಿಇಒ ಫೋರಂನ ವರದಿಯನ್ನು ಸ್ವಾಗತಿಸಿದರು.

ಪ್ರಧಾನಮಂತ್ರಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಅವರು ಆರೋಗ್ಯ, ಸಂಸ್ಕೃತಿ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಜನರ ನಡುವಿನ ಸಂಬಂಧಗಳ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಹಕಾರದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಅವರು ಇಂಡೋ-ಪೆಸಿಫಿಕ್ ಮತ್ತು ಜಾಗತಿಕ ವೇದಿಕೆಗಳು ಮತ್ತು ಉಪಕ್ರಮಗಳನ್ನು ಮತ್ತಷ್ಟು ಗಾಢವಾಗಿಸಲು ಬದ್ಧತೆ ತೋರಿದರು.

ಮಾತುಕತೆಯ ನಂತರ, ಭಾರತ-ಫ್ರಾನ್ಸ್ ಸಂಬಂಧಗಳ ಭವಿಷ್ಯವನ್ನು ವಿವರಿಸುವ ಜಂಟಿ ಹೇಳಿಕೆಯನ್ನು ಅಂಗೀಕರಿಸಲಾಯಿತು. ತಂತ್ರಜ್ಞಾನ ಮತ್ತು ನಾವೀನ್ಯತೆ, ನಾಗರಿಕ ಪರಮಾಣು ಶಕ್ತಿ, ತ್ರಿಕೋನ ಸಹಕಾರ, ಪರಿಸರ, ಸಂಸ್ಕೃತಿ ಮತ್ತು ಜನರು-ಜನರ ನಡುವಿನ ಸಂಬಂಧಗಳ ಕ್ಷೇತ್ರಗಳಲ್ಲಿನ ಹತ್ತು ಫಲಿತಾಂಶಗಳನ್ನು ಸಹ ಅಂತಿಮಗೊಳಿಸಲಾಯಿತು (ಪಟ್ಟಿ ಲಗತ್ತಿಸಲಾಗಿದೆ).

ಅಧ್ಯಕ್ಷ ಮ್ಯಾಕ್ರನ್ ಅವರು ಮಾರ್ಸೆಲ್ಲೆ ಬಳಿಯ ಕರಾವಳಿ ಪಟ್ಟಣವಾದ ಕ್ಯಾಸಿಸ್‌ ನಲ್ಲಿ ಪ್ರಧಾನ ಮಂತ್ರಿಯವರ ಗೌರವಾರ್ಥ ಔತಣಕೂಟವನ್ನು ಆಯೋಜಿಸಿದರು. ಭಾರತಕ್ಕೆ ಭೇಟಿ ನೀಡುವಂತೆ ಅಧ್ಯಕ್ಷ ಮ್ಯಾಕ್ರನ್‌ ಅವರಿಗೆ ಪ್ರಧಾನಿ ಆಹ್ವಾನ ನೀಡಿದರು.

ಫಲಿತಾಂಶಗಳ ಪಟ್ಟಿ: ಫ್ರಾನ್ಸ್‌ ಗೆ ಪ್ರಧಾನ ಮಂತ್ರಿಯವರ ಭೇಟಿ (10-12 ಫೆಬ್ರವರಿ 2025)

ಕೃತಕ ಬುದ್ಧಿಮತ್ತೆ (ಎಐ) ಕುರಿತು ಭಾರತ ಫ್ರಾನ್ಸ್ ಘೋಷಣೆ

ತಂತ್ರಜ್ಞಾನ ಮತ್ತು ನಾವೀನ್ಯತೆ, ಎಸ್&ಟಿ

ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ 2026ರ  ಲೋಗೋ ಬಿಡುಗಡೆ

ತಂತ್ರಜ್ಞಾನ ಮತ್ತು ನಾವೀನ್ಯತೆ, ಎಸ್&ಟಿ

ಇಂಡೋ-ಫ್ರೆಂಚ್ ಸೆಂಟರ್ ಫಾರ್ ದಿ ಡಿಜಿಟಲ್ ಸೈನ್ಸಸ್ ಅನ್ನು ಸ್ಥಾಪಿಸಲು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ ಎಸ್‌ ಟಿ), ಮತ್ತು ಫ್ರಾನ್ಸ್ ನ ಇನ್‌ಸ್ಟಿಟ್ಯೂಟ್ ನ್ಯಾಷನಲ್ ಡಿ ರೆಚೆರ್ಚೆ ಎನ್ ಇನ್‌ಫಾರ್ಮ್ಯಾಟಿಕ್ ಎಟ್ ಎನ್ ಆಟೋಮ್ಯಾಟಿಕ್ (INRIA) ನಡುವಿನ ಉದ್ದೇಶ ಪತ್ರ

ತಂತ್ರಜ್ಞಾನ ಮತ್ತು ನಾವೀನ್ಯತೆ, ಎಸ್&ಟಿ

ಫ್ರೆಂಚ್ ಸ್ಟಾರ್ಟ್-ಅಪ್ ಇನ್ಕ್ಯುಬೇಟರ್ ಸ್ಟೇಷನ್ ಎಫ್‌ನಲ್ಲಿ 10 ಭಾರತೀಯ ಸ್ಟಾರ್ಟ್‌ಅಪ್‌ ಗಳನ್ನು ಹೋಸ್ಟ್ ಮಾಡುವ ಒಪ್ಪಂದ

ತಂತ್ರಜ್ಞಾನ ಮತ್ತು ನಾವೀನ್ಯತೆ, ಎಸ್&ಟಿ

ಸುಧಾರಿತ ಮಾಡ್ಯುಲರ್ ರಿಯಾಕ್ಟರ್‌ ಗಳು ಮತ್ತು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ ಗಳ ಮೇಲೆ ಪಾಲುದಾರಿಕೆ ಸ್ಥಾಪನೆಯ ಉದ್ದೇಶದ ಘೋಷಣೆ

ನಾಗರಿಕ ಪರಮಾಣು ಶಕ್ತಿ

ಪರಮಾಣು ಶಕ್ತಿಯ ಇಲಾಖೆ (ಡಿಎಇ), ಭಾರತ ಮತ್ತು ಕಮಿಷರಿಯಟ್ ಎ ಎಲ್ ಎನರ್ಜಿ ಅಟೊಮಿಕ್ ಎಟ್‌ ಆಕ್ಸ್‌ ಎನರ್ಜೀಸ್‌ ಆಲ್ಟರ್ನೇಟಿವ್ ಫ್ರಾನ್ಸ್ (ಸಿಎಇ) ನಡುವೆ ಗ್ಲೋಬಲ್ ಸೆಂಟರ್ ಫಾರ್ ನ್ಯೂಕ್ಲಿಯರ್ ಎನರ್ಜಿ ಪಾರ್ಟ್‌ನರ್‌ಶಿಪ್ (ಜಿ ಸಿ ಎನ್‌ ಇ ಪಿ) ಸಹಕಾರಕ್ಕೆ ಸಂಬಂಧಿಸಿದಂತೆ ಒಪ್ಪಂದದ ನವೀಕರಣ

ನಾಗರಿಕ ಪರಮಾಣು ಶಕ್ತಿ

ಜಿ ಸಿ ಎನ್‌ ಇ ಪಿ ಇಂಡಿಯಾ ಮತ್ತು ಇನ್‌ಸ್ಟಿಟ್ಯೂಟ್ ಫಾರ್ ನ್ಯೂಕ್ಲಿಯರ್ ಸೈನ್ಸ್ ಅಂಡ್ ಟೆಕ್ನಾಲಜಿ (INSTN) ಫ್ರಾನ್ಸ್ ನಡುವಿನ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತದ ಡಿಎಇ ಮತ್ತು ಫ್ರಾನ್ಸ್‌ನ ಸಿಇಎ ನಡುವಿನ ಒಪ್ಪಂದವನ್ನು ಅನುಷ್ಠಾನಗೊಳಿಸುವುದು

ನಾಗರಿಕ ಪರಮಾಣು ಶಕ್ತಿ

ತ್ರಿಕೋನ ಅಭಿವೃದ್ಧಿ ಸಹಕಾರ ಉದ್ದೇಶದ ಜಂಟಿ ಘೋಷಣೆ

ಇಂಡೋ-ಪೆಸಿಫಿಕ್/ ಸುಸ್ಥಿರ ಅಭಿವೃದ್ಧಿ

ಮಾರ್ಸಿಲ್ಲೆಯಲ್ಲಿ ಭಾರತದ ದೂತಾವಾಸದ ಜಂಟಿ ಉದ್ಘಾಟನೆ

ಸಂಸ್ಕೃತಿ/ಜನರು –ಜನರ ನಡುವಿನ ಸಂಪರ್ಕ

ಪರಿಸರ ಪರಿವರ್ತನೆ, ಜೀವವೈವಿಧ್ಯ, ಅರಣ್ಯ, ಸಾಗರ ವ್ಯವಹಾರಗಳು ಮತ್ತು ಮೀನುಗಾರಿಕೆ ಸಚಿವಾಲಯ ಮತ್ತು ಪರಿಸರ ಕ್ಷೇತ್ರದಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನಡುವಿನ ಉದ್ದೇಶದ ಘೋಷಣೆ.

ಪರಿಸರ

ಕ್ರ.ಸಂ ಎಂಒಯುಗಳು/ ಒಪ್ಪಂದಗಳು/ ತಿದ್ದುಪಡಿಗಳು ಕ್ಷೇತ್ರಗಳು

*****