Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪರೀಕ್ಷಾ ಸಮಯದಲ್ಲಿ ತಂತ್ರಜ್ಞಾನ, ಗ್ಯಾಡ್ಜೆಟ್‌ಗಳ ಪಾತ್ರ ಮತ್ತು ಹೆಚ್ಚಿನ ಸಮಯದ ಮೊಬೈಲ್, ಕಂಪ್ಯೂಟರ್ ಬಳಕೆಯು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಎದುರಿಸುತ್ತಿರುವ ಕೆಲವು ದೊಡ್ಡ ಸಂದಿಗ್ಧತೆಗಳು: ಪ್ರಧಾನಮಂತ್ರಿ


ಪರೀಕ್ಷಾ ಸಮಯದಲ್ಲಿ ತಂತ್ರಜ್ಞಾನ, ಗ್ಯಾಡ್ಜೆಟ್‌ಗಳ ಪಾತ್ರ ಮತ್ತು ಹೆಚ್ಚಿನ ಸಮಯ ಮೊಬೈಲ್, ಕಂಪ್ಯೂಟರ್ ಪರದೆ ವೀಕ್ಷಣೆ ಇವು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಎದುರಿಸುತ್ತಿರುವ ಕೆಲವು ಪ್ರಮುಖ ಸಂದಿಗ್ಧಗಳಾಗಿವೆ ಎಂದು ಹೇಳಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ 3ನೇ ಸಂಚಿಕೆಯನ್ನು ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಎಕ್ಸ್‌ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

“ತಂತ್ರಜ್ಞಾನ….ಪರೀಕ್ಷಾ ಸಮಯದಲ್ಲಿ ಗ್ಯಾಜೆಟ್‌ಗಳ ಪಾತ್ರ…ವಿದ್ಯಾರ್ಥಿಗಳಿಂದ ಹೆಚ್ಚು ಸಮಯ ಮೊಬೈಲ್, ಕಂಪ್ಯೂಟರ್ ಬಳಕೆ (ಸ್ಕ್ರೀನ್ ಟೈಮ್) …

ಇವು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಎದುರಿಸುತ್ತಿರುವ ಕೆಲವು ದೊಡ್ಡ ಸಂದಿಗ್ಧತೆಗಳಾಗಿವೆ. ನಾಳೆ, ಫೆಬ್ರವರಿ 13 ರಂದು @TechnicalGuruji ಮತ್ತು @iRadhikaGupta ಅವರು ನಮ್ಮೊಂದಿಗೆ ಈ ವಿಷಯಗಳ ಕುರಿತು ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಚರ್ಚಿಸಲಿದ್ದಾರೆ. ವೀಕ್ಷಿಸಿ #PPC2025 #ExamWarriors”

 

 

*****