Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂತ ಗುರು ರವಿದಾಸರ ಜಯಂತಿಗೆ ಪ್ರಧಾನಮಂತ್ರಿ ಗೌರವ ನಮನ


ಇಂದು ಸಂತ ಗುರು ರವಿದಾಸರ ಜಯಂತಿಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಸಂತ ಗುರು ರವಿದಾಸರ ಕುರಿತು ತಮ್ಮ ಚಿಂತನೆಗಳ ವೀಡಿಯೊವನ್ನು ಶ್ರೀ ಮೋದಿ ಅವರು ಹಂಚಿಕೊಂಡಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಅವರು,

“ಪೂಜ್ಯ ಸಂತ ಗುರು ರವಿದಾಸ್ ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಸಮಾಜದಿಂದ ತಾರತಮ್ಯವನ್ನು ತೊಡೆದುಹಾಕಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸೇವಾ ಮನೋಭಾವ, ಸಾಮರಸ್ಯ ಮತ್ತು ಸಹೋದರತ್ವದಿಂದ ತುಂಬಿದ ಅವರ ಸಂದೇಶಗಳು ಸಮಾಜದ ದುರ್ಬಲ ಮತ್ತು ಅವಕಾಶ ವಂಚಿತ ವರ್ಗಗಳ ಕಲ್ಯಾಣಕ್ಕೆ ಯಾವಾಗಲೂ ಮಾರ್ಗದರ್ಶಕ ಬೆಳಕಾಗಿ ಉಳಿಯುತ್ತವೆ” ಎಂದು ಬರೆದುಕೊಂಡಿದ್ದಾರೆ.

 

 

*****