ಫಿಟ್ನೆಸ್ ಉತ್ತೇಜನ ಮತ್ತು ಸ್ಥೂಲಕಾಯದ ವಿರುದ್ಧದ ಹೋರಾಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಸ್ಥೂಲಕಾಯವನ್ನು ತೊಡೆದುಹಾಕಿ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಶ್ರೀ ಮೋದಿ ಅವರು ಒತ್ತಿ ಹೇಳಿದ್ದಾರೆ.
ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಫಿಟ್ ಇಂಡಿಯಾಗಾಗಿ ಸಾಮೂಹಿಕ ಪ್ರಯತ್ನಗಳ ಮಹತ್ವದ ಬಗ್ಗೆ ಬರೆದಿರುವ ಲೇಖನಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ನೀರಜ್ ಚೋಪ್ರಾ ಅವರ ಒಳನೋಟವುಳ್ಳ ಮತ್ತು ಪ್ರೇರಣಾದಾಯಕ ಲೇಖನ, ಇದು ಸ್ಥೂಲಕಾಯ ವಿರುದ್ಧ ಹೋರಾಡುವ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಅಗತ್ಯವನ್ನು ಪುನರುಚ್ಚರಿಸುತ್ತದೆ. @Neeraj_chopra1”
*****
An insightful and motivating piece by Neeraj Chopra, which reiterates the need to fight obesity and remain healthy. @Neeraj_chopra1 https://t.co/L89xeCTr26
— Narendra Modi (@narendramodi) February 12, 2025