Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪುಣ್ಯ ತಿಥಿಯಂದು ಪ್ರಧಾನಮಂತ್ರಿಯವರಿಂದ ಗೌರವ ನಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪುಣ್ಯ ತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. “ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ದೂರದೃಷ್ಟಿಯ ಚಿಂತಕರಾಗಿದ್ದು, ಅವರು ಭಾರತದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಸಮಾಜದ ದೀನ ದಲಿತ ವ್ಯಕ್ತಿಯನ್ನು ಮೇಲಕ್ಕೆತ್ತುವ ಅವರ ಪ್ರಯತ್ನಗಳು ಬಲಿಷ್ಠ ರಾಷ್ಟ್ರದೆಡೆಗಿನ ನಮ್ಮ ಪ್ರಯಾಣಕ್ಕೆ ಸ್ಫೂರ್ತಿ ನೀಡುತ್ತವೆ” ಎಂದು ಶ್ರೀ ಮೋದಿಯವರು ಹೇಳಿದ್ದಾರೆ.

ಪ್ರಧಾನಮಂತ್ರಿಯವರು Xನಲ್ಲಿ;

“ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪುಣ್ಯ ತಿಥಿಯಂದು, ಭಾರತದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ದೂರದೃಷ್ಟಿಯ ಚಿಂತಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರಿಗೆ ನಾವು ಹೃತ್ಪೂರ್ವಕ ಗೌರವ ನಮನವನ್ನು ಸಲ್ಲಿಸುತ್ತೇವೆ. ಸಮಾಜದ ದೀನ ದಲಿತ ವ್ಯಕ್ತಿಯನ್ನು ಮೇಲಕ್ಕೆತ್ತುವ ಅವರ ಪ್ರಯತ್ನಗಳು ಬಲಿಷ್ಠ ರಾಷ್ಟ್ರದೆಡೆಗಿನ ನಮ್ಮ ಪ್ರಯಾಣಕ್ಕೆ ಸ್ಫೂರ್ತಿ ನೀಡುತ್ತವೆ. ಪ್ರಗತಿ ಮತ್ತು ಏಕತೆಗಾಗಿ ನಮ್ಮ ಸಾಮೂಹಿಕ ಧ್ಯೇಯದಲ್ಲಿ ಅವರ ತ್ಯಾಗ ಮತ್ತು ಆದರ್ಶಗಳು ಮಾರ್ಗದರ್ಶಕ ಶಕ್ತಿಯಾಗಿ ಉಳಿದಿವೆ” ಎಂದು ಪೋಸ್ಟ್ ಮಾಡಿದ್ದಾರೆ.

 

*****