Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂಡೋನೇಷ್ಯಾ ಅಧ್ಯಕ್ಷರಾದ ಪ್ರಬೋವೊ ಸುಬಿಯಾಂಟೊ ಅವರನ್ನು ಸ್ವಾಗತಿಸಲು ಭಾರತ ಧನ್ಯ: ಪ್ರಧಾನಮಂತ್ರಿ


ಇಂಡೋನೇಷ್ಯಾದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಪ್ರಬೋವೊ ಸುಬಿಯಾಂಟೊ ಅವರನ್ನು ಸ್ವಾಗತಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತ-ಇಂಡೋನೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ವಿವಿಧ ಆಯಾಮಗಳನ್ನು ಚರ್ಚಿಸಲಾಗಿದೆ ಎಂದು ಹೇಳಿದರು. ಇಂಡೋನೇಷ್ಯಾ ನಮ್ಮ ಆಕ್ಟ್ ಈಸ್ಟ್ ನೀತಿಯ ಪ್ರಮುಖ ಭಾಗವಾಗಿದೆ ಮತ್ತು ಇಂಡೋನೇಷ್ಯಾದ ಬ್ರಿಕ್ಸ್ ಸದಸ್ಯತ್ವವನ್ನು ಭಾರತ ಸ್ವಾಗತಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದ್ದಾರೆ. 

ಎಕ್ಸ್‌ ನ ಸರಣಿ ಪೋಸ್ಟ್‌ ಗಳಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:

“ಭಾರತ ಅತ್ಯಂತ ಗೌರವಪೂರ್ವಕವಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರನ್ನು ಸ್ವಾಗತಿಸಿದೆ. 

ನಮ್ಮ ಮೊದಲ ಗಣರಾಜ್ಯೋತ್ಸವವನ್ನು ಆಚರಿಸಿದಾಗ, ಇಂಡೋನೇಷ್ಯಾ ಅತಿಥಿ ರಾಷ್ಟ್ರವಾಗಿತ್ತು ಮತ್ತು ಈಗ, ಭಾರತವು ಗಣರಾಜ್ಯವಾಗಿ 75 ವರ್ಷಗಳನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅಧ್ಯಕ್ಷ ಸುಬಿಯಾಂಟೊ ಅವರು ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಭಾರತ-ಇಂಡೋನೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ವಿವಿಧ ಆಯಾಮಗಳನ್ನು ನಾವು ಚರ್ಚಿಸಿದೆವು. 
@prabowo”

“ಭದ್ರತೆ, ರಕ್ಷಣಾ ಉತ್ಪಾದನೆ, ವ್ಯಾಪಾರ, ಫಿನ್ ಟೆಕ್, ಕೃತಕ ಬುದ್ಧಿಮತ್ತೆ (ಎಐ) ಮೊದಲಾದ ವಲಯಗಳಲ್ಲಿ  ಭಾರತ-ಇಂಡೋನೇಷ್ಯಾ ಬಾಂಧವ್ಯವನ್ನು ಗಾಢವಾಗಿಸುವ ಮಾರ್ಗಗಳ ಬಗ್ಗೆ ನಾವು ಚರ್ಚಿಸಿದೆವು.  ಆಹಾರ ಭದ್ರತೆ, ಇಂಧನ ಮತ್ತು ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಸಹ ನಿಕಟವಾಗಿ ಕಾರ್ಯ ನಿರ್ವಹಿಸಲು ನಾವು ಎದುರು ನೋಡುತ್ತಿದ್ದೇವೆ.”

“ಭಾರತ ಮತ್ತು ಇಂಡೋನೇಷ್ಯಾ ವಿವಿಧ ಬಹುಪಕ್ಷೀಯ ವೇದಿಕೆಗಳಲ್ಲಿ ನಿಕಟವಾಗಿ ಸಹಕರಿಸುತ್ತಿವೆ. ಇಂಡೋನೇಷ್ಯಾ ನಮ್ಮ ಆಕ್ಟ್ ಈಸ್ಟ್ ನೀತಿಯ ಪ್ರಮುಖ ರಾಷ್ಟ್ರವಾಗಿದೆ ಮತ್ತು ನಾವು ಇಂಡೋನೇಷ್ಯಾದ ಬ್ರಿಕ್ಸ್ ಸದಸ್ಯತ್ವವನ್ನು ಸ್ವಾಗತಿಸುತ್ತೇವೆ.”
 

 

*****