Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಮೃದ್ಧಿ ಮತ್ತು ಯುವ ಸಬಲೀಕರಣದೆಡೆಗಿನ ನಮ್ಮ ಪ್ರಯಾಣದಲ್ಲಿ ಕ್ಯೂಎಸ್ ವರ್ಲ್ಡ್ ಫ್ಯೂಚರ್ ಸ್ಕಿಲ್ಸ್ ಇಂಡೆಕ್ಸ್ ನ ಒಳನೋಟಗಳು ಬಹಳ ಮೌಲ್ಯಯುತವಾಗಿವೆ: ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಕ್ಯೂಎಸ್ ವರ್ಲ್ಡ್ ಫ್ಯೂಚರ್ ಸ್ಕಿಲ್ಸ್ ಇಂಡೆಕ್ಸ್ ಡಿಜಿಟಲ್ ಕೌಶಲದಲ್ಲಿ ಭಾರತವು ಕೆನಡಾ ಮತ್ತು ಜರ್ಮನಿಯನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. “ಇದು ನೋಡಲು ಹೃದಯಸ್ಪರ್ಶಿಯಾಗಿದೆ! ಕಳೆದ ದಶಕದಲ್ಲಿ, ನಮ್ಮ ಸರ್ಕಾರವು ನಮ್ಮ ಯುವಕರನ್ನು ಸ್ವಾವಲಂಬಿಗಳಾಗಿ, ಸಂಪತ್ತನ್ನು ಸೃಷ್ಟಿಸಲು ಅನುವು ಮಾಡಿಕೊಡುವ ಕೌಶಲ್ಯಗಳೊಂದಿಗೆ ಅವರನ್ನು ಬಲಪಡಿಸುವ ಕೆಲಸ ಮಾಡಿದೆ” ಎಂದು ಶ್ರೀ ಮೋದಿಯವರು ಹೇಳಿದ್ದಾರೆ. ಸಮೃದ್ಧಿ ಮತ್ತು ಯುವ ಸಬಲೀಕರಣದೆಡೆಗಿನ ಈ ನಮ್ಮ ಪ್ರಯಾಣದಲ್ಲಿ ಕ್ಯೂಎಸ್ ವರ್ಲ್ಡ್ ಫ್ಯೂಚರ್ ಸ್ಕಿಲ್ಸ್ ಇಂಡೆಕ್ಸ್ ಒಳನೋಟಗಳು ಮೌಲ್ಯಯುತವಾಗಿವೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿಯವರು ಹೇಳಿದ್ದಾರೆ.

Xನಲ್ಲಿ ಕ್ಯೂಎಸ್ ಕ್ವಾಕ್ವೆರೆಲ್ಲಿ ಸೈಮಂಡ್ಸ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ನಂಜಿಯೊ ಕ್ವಾಕ್ವೆರೆಲ್ಲಿ ಅವರಿಗೆ ಉತ್ತರವಾಗಿ ಪ್ರಧಾನಮಂತ್ರಿಯವರು,:

“ಇದು ಹೃದಯಸ್ಪರ್ಶಿಯಾಗಿದೆ!

ಕಳೆದ ದಶಕದಲ್ಲಿ, ನಮ್ಮ ಸರ್ಕಾರವು ನಮ್ಮ ಯುವಕರನ್ನು ಸ್ವಾವಲಂಬಿಗಳಾಗಿ ಸಂಪತ್ತನ್ನು ಸೃಷ್ಟಿಸಲು ಅನುವು ಮಾಡಿಕೊಡುವ ಕೌಶಲ್ಯಗಳೊಂದಿಗೆ ಅವರನ್ನು ಬಲಪಡಿಸುವ ಕೆಲಸ ಮಾಡಿದೆ. ಭಾರತವನ್ನು ನಾವೀನ್ಯತೆ ಮತ್ತು ಉದ್ಯಮದ ಪ್ರಮುಖ ಕೇಂದ್ರವನ್ನಾಗಿ ಮಾಡಲು ನಾವು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಂಡಿದ್ದೇವೆ.

ಸಮೃದ್ಧಿ ಮತ್ತು ಯುವ ಸಬಲೀಕರಣದ ಈ ಪ್ರಯಾಣದಲ್ಲಿ ನಾವು ಮುಂದೆ ಸಾಗುತ್ತಿರುವಾಗ ಕ್ಯೂಎಸ್ ವರ್ಲ್ಡ್ ಫ್ಯೂಚರ್ ಸ್ಕಿಲ್ಸ್ ಇಂಡೆಕ್ಸ್ ನ ಒಳನೋಟಗಳು ಬಹಳ ಪ್ರಾಮುಖ್ಯವಾಗಿವೆ” ಎಂದು ಪೋಸ್ಟ್ ಮಾಡಿದ್ದಾರೆ.

 

 

*****