Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಳೆದ ಒಂಬತ್ತು ವರ್ಷಗಳಲ್ಲಿ, ಸ್ಟಾರ್ಟ್ಅಪ್ ಇಂಡಿಯಾದ ಪರಿವರ್ತನಾ ಕಾರ್ಯಕ್ರಮವು ಅಸಂಖ್ಯಾತ ಯುವಕರನ್ನು ಸಬಲೀಕರಣಗೊಳಿಸಿದೆ, ಅವರ ನವೀನ ಆಲೋಚನೆಗಳನ್ನು ಯಶಸ್ವಿ ಸ್ಟಾರ್ಟ್ ಅಪ್ ಗಳಾಗಿ ಪರಿವರ್ತಿಸಿದೆ: ಪ್ರಧಾನಮಂತ್ರಿ


“ಸ್ಟಾರ್ಟ್ ಅಪ್ ಇಂಡಿಯಾದ ಈ ಯಶಸ್ಸು ಇಂದು ಒಂಬತ್ತು ವರ್ಷಗಳ ಸಂತಸವನ್ನು ಆಚರಿಸುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ, ಈ ಪರಿವರ್ತನಾ ಕಾರ್ಯಕ್ರಮವು ಅಸಂಖ್ಯಾತ ಯುವಕರನ್ನು ಸಬಲೀಕರಣಗೊಳಿಸಿದೆ. ಅವರ ನವೀನ ಹಾಗೂ ವೈವಿದ್ಯಮಯ ಆಲೋಚನೆಗಳನ್ನು ಯಶಸ್ವಿ ಸ್ಟಾರ್ಟ್ ಅಪ್ ಗಳಾಗಿ ಪರಿವರ್ತಿಸಿದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. “ಸರ್ಕಾರದ ಮಟ್ಟಿಗೆ ಹೇಳುವುದಾದರೆ, ಸ್ಟಾರ್ಟ್ ಅಪ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ನಾವು ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುನರುಚ್ಚರಿಸಿದರು. “ಸ್ಟಾರ್ಟ್ಅಪ್ ಇಂಡಿಯಾದ ಈ ಯಶಸ್ಸು, ಇಂದಿನ ಭಾರತವು ಕ್ರಿಯಾತ್ಮಕ, ಆತ್ಮವಿಶ್ವಾಸ ಮತ್ತು ಭವಿಷ್ಯಕ್ಕೆ ಸಿದ್ಧವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ “ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಈ ಸಂದರ್ಭದಲ್ಲಿ ವಿವರಿಸಿ ಹೇಳಿದರು. “ಸ್ಟಾರ್ಟ್ಅಪ್ ಕ್ಷೇತ್ರದ ಪ್ರತಿಯೊಬ್ಬ ಯುವಕರನ್ನು ನಾನು ಅಭಿನಂದಿಸುತ್ತೇನೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇದನ್ನು ಅನುಸರಿಸಬೇಕೆಂದು ಒತ್ತಾಯಿಸುತ್ತೇನೆ. ನೀವು ನಿರಾಶೆಗೊಳ್ಳುವುದಿಲ್ಲ ಎಂಬುದು ನನ್ನ ವಿಶ್ವಾಸ ಹಾಗೂ ಭರವಸೆಯಾಗಿದೆ!” ಎಂದು ಶ್ರೀ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ  ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ:

“ಇಂದು, ನಾವು #9YearsOfStartupIndia ಅನ್ನು ಆಚರಿಸುತ್ತಿದ್ದೇವೆ. ಇದು ನಾವೀನ್ಯತೆ, ಉದ್ಯಮಶೀಲತೆ ಮತ್ತು ಬೆಳವಣಿಗೆಯನ್ನು ಮರು ವ್ಯಾಖ್ಯಾನಿಸಿದ ಒಂದು ಹೆಗ್ಗುರುತು ಹಾಗೂ ಮಹತ್ವಪೂರ್ಣ ಉಪಕ್ರಮವಾಗಿದೆ. ಇದು ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಕಾರ್ಯಕ್ರಮವಾಗಿದೆ. ಏಕೆಂದರೆ, ಇದು ಯುವ ಸಬಲೀಕರಣವನ್ನು ಹೆಚ್ಚಿಸುವ ಪ್ರಬಲ ಮಾರ್ಗವಾಗಿ ಹೊರಹೊಮ್ಮಿದೆ. ಕಳೆದ ಒಂಬತ್ತು ವರ್ಷಗಳಲ್ಲಿ, ಈ ಪರಿವರ್ತನಾಶೀಲ ಕಾರ್ಯಕ್ರಮವು ಅಸಂಖ್ಯಾತ ಯುವಕರನ್ನು ಸಬಲೀಕರಣಗೊಳಿಸಿದೆ. ಅವರ ನವೀನ ಮತ್ತು ವೈವಿದ್ಯಮಯ ಆಲೋಚನೆಗಳನ್ನು ಯಶಸ್ವಿ ಸ್ಟಾರ್ಟ್ಅಪ್ ಗಳಾಗಿ ಪರಿವರ್ತಿಸಿದೆ.”

“ಸರ್ಕಾರದ ಮಟ್ಟಿಗೆ ಹೇಳುವುದಾದರೆ, ಸ್ಟಾರ್ಟ್ಅಪ್ ಗಳ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ನಾವು ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ. ನಮ್ಮ ನೀತಿಗಳು ‘ಸುಲಭ ವ್ಯವಹಾರ’ ಸಂಪನ್ಮೂಲಗಳಿಗೆ ಹೆಚ್ಚಿನ ಪ್ರವೇಶ ಅವಕಾಶವನ್ನು ಮತ್ತು, ಮುಖ್ಯವಾಗಿ, ಪ್ರತಿ ಹಂತದಲ್ಲಿ ಅವುಗಳನ್ನು ಬೆಂಬಲಿಸುವತ್ತ ಗಮನಹರಿಸಿವೆ. ನಮ್ಮ ಯುವಕರು ಅಪಾಯವನ್ನು ಎದುರಿಸುವ, ಅದನ್ನು ತೆಗೆದುಕೊಳ್ಳುವವರಾಗಲು ನಾವು ನಾವೀನ್ಯತೆ ಮತ್ತು ಇನ್ಕ್ಯುಬೇಶನ್ ಕೇಂದ್ರಗಳನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದ್ದೇವೆ. ನಾನು ವೈಯಕ್ತಿಕವಾಗಿ ಈ ಹಿಂದಿನ ಮತ್ತು ಮುಂಬರುವ ಸ್ಟಾರ್ಟ್ ಅಪ್ ಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದೇನೆ.” ಸರ್ಕಾರದ ಮಟ್ಟಿಗೆ ಹೇಳುವುದಾದರೆ, ಸ್ಟಾರ್ಟ್ಅಪ್ ಗಳ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ನಾವು ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ. ನಮ್ಮ ನೀತಿಗಳು ‘ಸುಲಭ ವ್ಯವಹಾರ’ ಸಂಪನ್ಮೂಲಗಳಿಗೆ ಹೆಚ್ಚಿನ ಪ್ರವೇಶವನ್ನು ಮತ್ತು, ಮುಖ್ಯವಾಗಿ, ಪ್ರತಿ ಹಂತದಲ್ಲಿ ಅವುಗಳನ್ನು ಬೆಂಬಲಿಸುವತ್ತ ಗಮನಹರಿಸಿವೆ. ನಾವು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದೇವೆ…

“ಸ್ಟಾರ್ಟ್ಅಪ್ ಇಂಡಿಯಾದ ಈ ಯಶಸ್ಸು ಇಂದಿನ ಭಾರತವು ಕ್ರಿಯಾತ್ಮಕ, ಆತ್ಮವಿಶ್ವಾಸ ಮತ್ತು ಭವಿಷ್ಯಕ್ಕೆ ಸಿದ್ಧವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಈ ಪ್ರಯಾಣವನ್ನು ನಾವು ಆಚರಿಸುತ್ತಿರುವಾಗ, ಪ್ರತಿಯೊಂದು ಕನಸನ್ನು ಉನ್ನತೀಕರಿಸುವ ಮತ್ತು ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡುವ ಉದ್ಯಮಶೀಲ ಪರಿಸರ ವ್ಯವಸ್ಥೆಯನ್ನು ಬೆಳೆಸುವುದನ್ನು ಮುಂದುವರಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ಸ್ಟಾರ್ಟ್ಅಪ್ ಜಗತ್ತಿನ ಪ್ರತಿಯೊಬ್ಬ ಯುವಕನನ್ನು ನಾನು ಅಭಿನಂದಿಸುತ್ತೇನೆ ಮತ್ತು ಹೆಚ್ಚಿನ ಯುವಕರು ಇದನ್ನು ಮುಂದುವರಿಸಲು ಒತ್ತಾಯಿಸುತ್ತೇನೆ. ನೀವು ನಿರಾಶೆಗೊಳ್ಳುವುದಿಲ್ಲ ಎಂಬುದು ನನ್ನ ವಿಶ್ವಾಸ ಮತ್ತು ಭರವಸೆಯಾಗಿದೆ!” ಸ್ಟಾರ್ಟ್ಅಪ್ ಇಂಡಿಯಾದ ಈ ಯಶಸ್ಸು ಇಂದಿನ ಭಾರತವು ಕ್ರಿಯಾತ್ಮಕ, ಆತ್ಮವಿಶ್ವಾಸ ಮತ್ತು ಭವಿಷ್ಯಕ್ಕೆ ಸಿದ್ಧವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ನಾವು ಈ ಪ್ರಯಾಣವನ್ನು ಗುರುತಿಸುತ್ತಿರುವಾಗ, ಪ್ರತಿಯೊಂದು ಕನಸನ್ನು ಉನ್ನತೀಕರಿಸುವ ಮತ್ತು ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡುವ ಉದ್ಯಮಶೀಲ ಪರಿಸರ ವ್ಯವಸ್ಥೆಯನ್ನು ಬೆಳೆಸುವುದನ್ನು ಮುಂದುವರಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ನಾನು ನಿಮ್ಮಲ್ಲರನ್ನು ಅಭಿನಂದಿಸುತ್ತೇನೆ…”

 

 

*****