Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಅರಿಶಿನ ಮಂಡಳಿಯ ಸ್ಥಾಪನೆಯು ಅಪಾರ ಸಂತೋಷದ ವಿಷಯವಾಗಿದೆ, ವಿಶೇಷವಾಗಿ ಭಾರತದಾದ್ಯಂತ ನಮ್ಮ ಶ್ರಮಜೀವಿ ಅರಿಶಿನ ಉತ್ಪಾದಕ ರೈತರಿಗೆ ಪ್ರಯೋಜನವಾಗಲಿದೆ : ಪ್ರಧಾನಮಂತ್ರಿ


ರಾಷ್ಟ್ರೀಯ ಅರಿಶಿನ ಮಂಡಳಿಯ ಸ್ಥಾಪನೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈ ಮೂಲಕ ಅರಿಶಿನ ಉತ್ಪಾದನೆಯಲ್ಲಿ ನಾವೀನ್ಯತೆ, ಜಾಗತಿಕ ಪ್ರಚಾರ ಮತ್ತು ಮೌಲ್ಯವರ್ಧನೆಗೆ ಉತ್ತಮ ಅವಕಾಶಗಳನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.

ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಎಕ್ಸ್ ತಾಣದಲ್ಲಿ ಮಾಡಿದ ಸಂದೇಶಕ್ಕೆ  ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಮ್ಮ ಸಂದೇಶದಲ್ಲಿ ಈ ರೀತಿ ಹೇಳಿದರು:

“ರಾಷ್ಟ್ರೀಯ ಅರಿಶಿನ ಮಂಡಳಿಯ ಸ್ಥಾಪನೆಯು ಅಪಾರ ಸಂತೋಷದ ವಿಷಯವಾಗಿದೆ, ವಿಶೇಷವಾಗಿ ಭಾರತದಾದ್ಯಂತ ನಮ್ಮ ಶ್ರಮಜೀವಿ ಅರಿಶಿನ ಉತ್ಪಾದಕ ರೈತರಿಗೆ! 

ಇದು ಅರಿಶಿನ ಉತ್ಪಾದನೆಯಲ್ಲಿ ನಾವೀನ್ಯತೆ, ಜಾಗತಿಕ ಪ್ರಚಾರ ಮತ್ತು ಮೌಲ್ಯವರ್ಧನೆಗೆ ಉತ್ತಮ ಅವಕಾಶಗಳನ್ನು ಖಚಿತಪಡಿಸುತ್ತದೆ. ಇದು ಪೂರೈಕೆ ಸರಪಳಿಯನ್ನು ಬಲಪಡಿಸುತ್ತದೆ, ರೈತರಿಗೆ ಮತ್ತು ಗ್ರಾಹಕರಿಗೆ ಸಮಾನವಾಗಿ ಪ್ರಯೋಜನವನ್ನು ನೀಡುತ್ತದೆ.

 

*****