ನಮ್ಮ ರಾಷ್ಟ್ರವನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಧೈರ್ಯಶಾಲಿ ಮಹಿಳೆಯರು ಮತ್ತು ಪುರುಷರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿಯವರು, ಇಂದು ಸಶಸ್ತ್ರ ಪಡೆಗಳ ವೆಟರನ್ಸ್ ದಿನದ ಸಂದರ್ಭದಲ್ಲಿ, ನಮ್ಮ ವೆಟರನ್ ವೀರರು ದೇಶಭಕ್ತಿಯ ಶಾಶ್ವತ ಸಂಕೇತವಾಗಿದ್ದಾರೆ ಎಂದು ಹೇಳಿದ್ದಾರೆ.
Xನ ಪೋಸ್ಟ್ ನಲ್ಲಿ, ಅವರು:
“ಸಶಸ್ತ್ರ ಪಡೆಗಳ ವೆಟರನ್ಸ್ ದಿನದಂದು, ನಮ್ಮ ರಾಷ್ಟ್ರವನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಧೈರ್ಯಶಾಲಿ ಮಹಿಳೆಯರು ಮತ್ತು ಪುರುಷರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಅವರ ತ್ಯಾಗ, ಧೈರ್ಯ ಮತ್ತು ಕರ್ತವ್ಯದ ಬಗ್ಗೆ ಅಚಲ ಬದ್ಧತೆ ಅನುಕರಣೀಯ. ನಮ್ಮ ವೆಟರನ್ಸ್ ವೀರರು ದೇಶಭಕ್ತಿಯ ಶಾಶ್ವತ ಸಂಕೇತವಾಗಿದ್ದಾರೆ. ನಮ್ಮ ಸರ್ಕಾರ ಯಾವಾಗಲೂ ನಿವೃತ್ತ ಯೋಧರ ಕಲ್ಯಾಣಕ್ಕಾಗಿ ಕೆಲಸ ಮಾಡಿದ ಸರ್ಕಾರ ಮತ್ತು ಮುಂದಿನ ದಿನಗಳಲ್ಲಿ ನಾವು ಅದನ್ನು ಮುಂದುವರಿಸುತ್ತೇವೆ” ಎಂದು ಹೇಳಿದ್ದಾರೆ.
*****
On Armed Forces Veterans Day, we express gratitude to the brave women and men who dedicated their lives to safeguarding our nation. Their sacrifices, courage and unwavering commitment to duty are exemplary. Our Veterans are heroes and enduring symbols of patriotism. Ours is a…
— Narendra Modi (@narendramodi) January 14, 2025