Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಖ್ಯಾತ ಹಿನ್ನೆಲೆ ಗಾಯಕರಾದ ಶ್ರೀ ಪಿ. ಜಯಚಂದ್ರನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ 


ಖ್ಯಾತ ಹಿನ್ನೆಲೆ ಗಾಯಕರಾದ ಶ್ರೀ ಪಿ. ಜಯಚಂದ್ರನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ವಿವಿಧ ಭಾಷೆಗಳಲ್ಲಿ ಅವರ ಭಾವಪೂರ್ಣ ಗಾಯನಗಳು ಮುಂದಿನ ಪೀಳಿಗೆಗೂ ಹೃದಯಸ್ಪರ್ಶಿಯಾಗಿರಲಿವೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

“ಶ್ರೀ ಪಿ. ಜಯಚಂದ್ರನ್ ಅವರು ವೈವಿಧ್ಯಮಯ ಭಾವನೆಗಳನ್ನು ವ್ಯಕ್ತಪಡಿಸುವ ವಿಶಿಷ್ಟ ಧ್ವನಿಯನ್ನು ಹೊಂದಿದ್ದರು. ವಿವಿಧ ಭಾಷೆಗಳಲ್ಲಿ ಅವರ ಭಾವಪೂರ್ಣ ಗಾಯನವು ಮುಂಬರುವ ಪೀಳಿಗೆಗಳಿಗೂ ಹೃದಯಸ್ಪರ್ಶಿಯಾಗಿ ಮುಂದುವರಿಯಲಿವೆ. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬದವರು ಮತ್ತು ಪ್ರೀತಿಪಾತ್ರರಿಗೆ ಈ ದುಃಖದ ಸಮಯದಲ್ಲಿ ನನ್ನ ಸಂತಾಪಗಳು”.

 

 

*****