Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫ್ರಾನ್ಸ್ ನ ಮಯೋಟ್ಟೆಯಲ್ಲಿ ಚಿಡೋ ಚಂಡಮಾರುತದಿಂದಾದ ಅಪಾರ ನಾಶ ತೀವ್ರ ದುಃಖಕರ : ಪ್ರಧಾನಮಂತ್ರಿ


ಫ್ರಾನ್ಸ್‌ ನ  ಮಯೋಟ್ಟೆಯಲ್ಲಿ ಚಿಡೋ ಚಂಡಮಾರುತದಿಂದ ಉಂಟಾಗಿರುವ ವಿನಾಶದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಫ್ರಾನ್ಸ್ ಗೆ ಭಾರತ ಬೆಂಬಲವಾಗಿ ನಿಂತಿದೆ ಮತ್ತು ಎಲ್ಲ ಸಾಧ್ಯ ನೆರವು ನೀಡಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ನಾಯಕತ್ವದಲ್ಲಿ, ಫ್ರಾನ್ಸ್ ಈ ದುರಂತವನ್ನು ಸ್ಥಿತಿಸ್ಥಾಪಕತ್ವ ಮತ್ತು ಸಂಕಲ್ಪದೊಂದಿಗೆ ಎದುರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರು ಎಕ್ಸ್‌ ಪೋಸ್ಟ್‌ ನಲ್ಲಿ ಹೀಗೆ ಬರೆದಿದ್ದಾರೆ:

“ಮಯೋಟ್ಟೆಯಲ್ಲಿ ಚಿಡೋ ಚಂಡಮಾರುತದಿಂದ ಉಂಟಾಗಿರುವ ಅಪಾರ ಹಾನಿಯಿಂದ ತೀವ್ರ ದುಃಖವಾಗಿದೆ. ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು. ಅಧ್ಯಕ್ಷ @EmmanuelMacron ಅವರ ನಾಯಕತ್ವದಲ್ಲಿ ಫ್ರಾನ್ಸ್ ಈ ದುರಂತದಿಂದ ಶೀಘ್ರ ಚೇತರಿಸಿಕೊಳ್ಳಲಿದೆ ಮತ್ತು ದೃಢ ನಿರ್ಧಾರದೊಂದಿಗೆ ಪರಿಹಾರ ಕಂಡುಕೊಳ್ಳಲಿದೆ ಎಂದು ನನಗೆ ವಿಶ್ವಾಸವಿದೆ. ಭಾರತವು ಫ್ರಾನ್ಸ್ ಗೆ ಬೆಂಬಲವಾಗಿ ನಿಂತಿದೆ ಮತ್ತು ಸಾಧ್ಯವಿರುವ ಎಲ್ಲಾ ನೆರವನ್ನು ನೀಡಲು ಸಿದ್ಧವಾಗಿದೆ.”

 

 

*****