Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾನ್ ದಿಗ್ಗಜ ರಾಜ್ ಕಪೂರ್ ಅವರ 100ನೇ ಜನ್ಮ ವಾರ್ಷಿಕೋತ್ಸವದಂದು ಪ್ರಧಾನಮಂತ್ರಿಯವರು ಅವರಿಗೆ ಗೌರವ ನಮನ ಸಲ್ಲಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚಲನಚಿತ್ರ ಲೋಕದ ಮಹಾನ್ ದಿಗ್ಗಜ ಶ್ರೀ ರಾಜ್ ಕಪೂರ್ ಅವರ 100 ನೇ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಅವರನ್ನು ದೂರದೃಷ್ಟಿಯ ಚಲನಚಿತ್ರ ನಿರ್ಮಾಪಕ, ನಟ ಮತ್ತು ಚಿರ ನಿರಂತರ ಶೋಮ್ಯಾನ್ ಎಂದು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.  ಶ್ರೀ ರಾಜ್ ಕಪೂರ್ ಅವರು ಕೇವಲ ಚಲನಚಿತ್ರ ನಿರ್ಮಾಪಕರಲ್ಲ ಬದಲಾಗಿ ಭಾರತೀಯ ಸಿನಿಮಾವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರು, ಚಲನಚಿತ್ರ ನಿರ್ಮಾಪಕರು ಮತ್ತು ನಟರ ಹಲವು ತಲೆಮಾರುಗಳು ಅವರಿಂದ ಬಹಳಷ್ಟು ಕಲಿಯಬಹುದಾಗಿದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದರು.

ಎಕ್ಸ್ ತಾಣದ ಸರಣಿ ಸಂದೇಶದಲ್ಲಿ ಶ್ರೀ ಮೋದಿಯವರು ಹೀಗೆ ಬರೆದಿದ್ದಾರೆ:

“ಇಂದು, ನಾವು ದೂರದೃಷ್ಟಿಯ ಚಲನಚಿತ್ರ ನಿರ್ಮಾಪಕ, ನಟ ಮತ್ತು ಚಿರ ನಿರಂತರ ಶೋಮ್ಯಾನ್ ಮಹಾನ್ ದಿಗ್ಗಜ ಶ್ರೀ ರಾಜ್ ಕಪೂರ್ ಅವರ 100ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ!  ಅವರ ಪ್ರತಿಭೆಯು ತಲೆಮಾರುಗಳನ್ನು ಮೀರಿದೆ, ಭಾರತೀಯ ಮತ್ತು ಜಾಗತಿಕ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ.”

“ಶ್ರೀ ರಾಜ್ ಕಪೂರ್ ಅವರ ಸಿನಿಮಾದೆಡೆಗಿನ ಆಸಕ್ತಿ , ಉತ್ಸಾಹವು ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಯಿತು ಮತ್ತು ಉದಯೋನ್ಮುಖ ಕಥೆಗಾರರಾಗಿ ಹೊರಹೊಮ್ಮಲು ಶ್ರಮಿಸಿದರು. ಅವರ ಚಲನಚಿತ್ರಗಳು ಕಲಾತ್ಮಕತೆ, ಭಾವನೆಗಳು ಮತ್ತು ಸಾಮಾಜಿಕ ವ್ಯಾಖ್ಯಾನದ ಸಂಮಿಶ್ರಣವಾಗಿದೆ.  ಅವು ಸಾಮಾನ್ಯ ನಾಗರಿಕರ ಆಕಾಂಕ್ಷೆಗಳು ಮತ್ತು ಜೀವಿತ ಹೋರಾಟಗಳನ್ನು ಪ್ರತಿಬಿಂಬಿಸುತ್ತವೆ.

“ರಾಜ್ ಕಪೂರ್ ಅವರ ಚಲನಚಿತ್ರಗಳ ಸಾಂಪ್ರದಾಯಿಕ ಪಾತ್ರಗಳು ಮತ್ತು ಮರೆಯಲಾಗದ ಮಧುರಗಳು ಕ್ಷಣಗಳು ವಿಶ್ವಾದ್ಯಂತ ಪ್ರೇಕ್ಷಕರೊಂದಿಗೆ ಅನುರಣಿಸುತ್ತಲೇ ಇವೆ.  ಅವರ ಕೃತಿಗಳು ವಿವಿಧ ವಿಷಯಗಳನ್ನು ಸುಲಭವಾಗಿ ಮತ್ತು ಉತ್ಕೃಷ್ಟತೆಯಿಂದ ಹೇಗೆ ಮಹತ್ವಪೂರ್ಣ ಮಾಡುತ್ತವೆ ಎಂಬುದನ್ನು ಜನರು ಇಷ್ಟಪಟ್ಟು ಸದಾ ಮೆಚ್ಚುತ್ತಾರೆ.  ಅವರ ಚಲನಚಿತ್ರಗಳ ಸಂಗೀತವೂ ಅತ್ಯಂತ ಜನಪ್ರಿಯವಾಗಿದೆ.”

“ಶ್ರೀ ರಾಜ್ ಕಪೂರ್ ಅವರು ಕೇವಲ ಚಲನಚಿತ್ರ ನಿರ್ಮಾಪಕರಲ್ಲ ಬದಲಾಗಿ ಭಾರತೀಯ ಚಿತ್ರರಂಗವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಸಮಕಾಲೀನ ಚಿತ್ರ ನಿರ್ಮಾಪಕರು ಮತ್ತು ನಟರ ಹಲವು ತಲೆಮಾರುಗಳು ಅವರಿಂದ ತುಂಬಾ ಕಲಿಯಬಹುದಾಗಿದೆ.  ನಾನು ಮತ್ತೊಮ್ಮೆ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ ಮತ್ತು ಸೃಜನಶೀಲ ಜಗತ್ತಿಗೆ ಅವರು ನೀಡಿದ ಕೊಡುಗೆಯನ್ನು ನೆನಪಿಸಿಕೊಳ್ಳುತ್ತೇನೆ.

 

 

*****