Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶಸ್ತ್ರಚಿಕಿತ್ಸೆಯ ನಂತರ ಬ್ರೆಜಿಲ್ ಅಧ್ಯಕ್ಷರು ಉತ್ತಮ ಆರೋಗ್ಯವನ್ನು ಹೊಂದಿ ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಮಂತ್ರಿಯವರಿಂದ ಹಾರೈಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಬ್ರೆಜಿಲ್ ಅಧ್ಯಕ್ಷರಾದ ಲುಲಾ ಡಾ ಸಿಲ್ವಾ ಅವರು ಶಸ್ತ್ರಚಿಕಿತ್ಸೆಯ ನಂತರ ಉತ್ತಮ ಆರೋಗ್ಯವನ್ನು ಹೊಂದಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. 

Xನಲ್ಲಿ ಬ್ರೆಜಿಲ್ ಅಧ್ಯಕ್ಷರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು:

“ಅಧ್ಯಕ್ಷರಾದ @LulaOficial ಅವರ ಶಸ್ತ್ರಚಿಕಿತ್ಸೆ ಉತ್ತಮವಾಗಿ ನಡೆದು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಅವರಿಗೆ ನಿರಂತರ ಶಕ್ತಿ ಮತ್ತು ಉತ್ತಮ ಆರೋಗ್ಯವನ್ನು ಭಗವಂತ ನೀಡಲಿ ಹಾರೈಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

 

 

*****