ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುವೈತ್‌ನ ವಿದೇಶಾಂಗ ಸಚಿವ ಗೌರವಾನ್ವಿತ ಅಬ್ದುಲ್ಲಾ ಅಲಿ ಅಲ್-ಯಹ್ಯಾ ಅವರನ್ನು ಇಂದು ಸ್ವಾಗತಿಸಿದರು.
ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಕುವೈತ್‌ನ ವಿದೇಶಾಂಗ ಸಚಿವ ಗೌರವಾನ್ವಿತ ಅಬ್ದುಲ್ಲಾ ಅಲಿ ಅಲ್-ಯಹ್ಯಾ ಅವರನ್ನು ಸ್ವಾಗತಸಲು ಸಂತಸವಾಗುತ್ತಿದೆ. ಭಾರತೀಯ ಪ್ರಜೆಗಳ ಕಲ್ಯಾಣಕ್ಕಾಗಿ ಕುವೈತ್ ನಾಯಕತ್ವಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮ್ಮ ಜನರು ಮತ್ತು ಪ್ರದೇಶದ ಅನುಕೂಲಕ್ಕಾಗಿ ನಮ್ಮ ಆಳವಾಗಿ ಬೇರೂರಿರುವ ಮತ್ತು ಐತಿಹಾಸಿಕ ಸಂಬಂಧಗಳನ್ನು ಮುನ್ನಡೆಸಲು ಭಾರತ ಬದ್ಧವಾಗಿದೆ’’.
*****
Glad to receive Foreign Minister of Kuwait H.E. Abdullah Ali Al-Yahya. I thank the Kuwaiti leadership for the welfare of the Indian nationals. India is committed to advance our deep-rooted and historical ties for the benefit of our people and the region. pic.twitter.com/hR5URxPyt5
— Narendra Modi (@narendramodi) December 4, 2024