ಇಂದು ಸ್ಟೇಟ್ ಹೌಸ್ ನಲ್ಲಿ ನಡೆದ ಸಮಾರಂಭದಲ್ಲಿ, ಗಯಾನಾ ಸಹಕಾರ ಗಣರಾಜ್ಯದ ಅಧ್ಯಕ್ಷರಾದ ಡಾ. ಮೊಹಮ್ಮದ್ ಇರ್ಫಾನ್ ಅಲಿಯವರು, ‘ದೂರದೃಷ್ಟಿಯ ರಾಜನೀತಿಜ್ಞತೆ, ಜಾಗತಿಕ ವೇದಿಕೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಹಕ್ಕುಗಳ ಪ್ರಾಮುಖ್ಯತೆ, ಜಾಗತಿಕ ಸಮುದಾಯದ ಅಸಾಧಾರಣ ಸೇವೆ ಮತ್ತು ಭಾರತ-ಗಯಾನಾ ಸಂಬಂಧಗಳನ್ನು ಬಲಪಡಿಸುವ ಬದ್ಧತೆಗಾಗಿ’ ಗಯಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ‘ದಿ ಆರ್ಡರ್ ಆಫ್ ಎಕ್ಸಲೆನ್ಸ್’ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಪ್ರದಾನ ಮಾಡಿದರು.
ಪ್ರಶಸ್ತಿಯನ್ನು ಸ್ವೀಕರಿಸಿದ ಪ್ರಧಾನಮಂತ್ರಿಯವರು ಈ ಗೌರವವನ್ನು ಭಾರತದ ಜನತೆ ಮತ್ತು ಉಭಯ ದೇಶಗಳ ಜನರ ನಡುವೆ ಆಳವಾಗಿ ಬೇರೂರಿರುವ ಐತಿಹಾಸಿಕ ಸಂಬಂಧಗಳಿಗೆ ಅರ್ಪಿಸಿದರು. ತಮ್ಮ ಅಧಿಕೃತ ಭೇಟಿಯು ಭಾರತ-ಗಯಾನಾ ಸ್ನೇಹವನ್ನು ಆಳಗೊಳಿಸುವ ಭಾರತದ ನಿರಂತರ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ಒತ್ತಿ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಗಯಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ನಾಲ್ಕನೇ ವಿದೇಶಿ ನಾಯಕರಾಗಿದ್ದಾರೆ.
*****
Sincerely thank President Dr. Irfaan Ali, for conferring upon me Guyana's highest honour, 'The Order of Excellence.' This is a recognition of the 140 crore people of India. https://t.co/SVzw5zqk1r
— Narendra Modi (@narendramodi) November 21, 2024