Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೈಜೀರಿಯಾ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅಧಿಕೃತ ಮಾತುಕತೆ 

ನೈಜೀರಿಯಾ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅಧಿಕೃತ ಮಾತುಕತೆ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 17-18 ನವೆಂಬರ್ 2024 ರಿಂದ ನೈಜೀರಿಯಾಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ನೈಜೀರಿಯಾದ ಅಧ್ಯಕ್ಷ ಶ್ರೀ ಬೋಲಾ ಅಹ್ಮದ್ ಟಿನುಬು ಅವರೊಂದಿಗೆ ಅವರೊಂದಿಗೆ ಅಧಿಕೃತ ಮಾತುಕತೆ ನಡೆಸಿದರು. ಇಂದು ಅಬುಜಾದಲ್ಲಿ ರಾಜ್ಯ ಭವನಕ್ಕೆ ಆಗಮಿಸಿದ ಪ್ರಧಾನಿಯವರಿಗೆ 21 ಗನ್ ಸೆಲ್ಯೂಟ್‌ನೊಂದಿಗೆ ವಿಧ್ಯುಕ್ತ ಸ್ವಾಗತ ನೀಡಲಾಯಿತು.

ನಿಯೋಗ ಮಟ್ಟದ ಮಾತುಕತೆಯ ನಂತರ ಉಭಯ ನಾಯಕರು ಚರ್ಚೆ ನಡೆಸಿದರು. ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಅಧ್ಯಕ್ಷ ಟಿನುಬು ಅವರೊಂದಿಗಿನ ಆತ್ಮೀಯ ಭೇಟಿಯನ್ನು ಪ್ರಧಾನಮಂತ್ರಿ ಸ್ಮರಿಸಿದರು. ಸಾಮಾನ್ಯ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಬಲವಾದ ಜನರ-ಜನರ ಸಂಬಂಧಗಳಿಂದ ವ್ಯಾಖ್ಯಾನಿಸಲಾದ ವಿಶೇಷ ಸ್ನೇಹ ಬಂಧಗಳನ್ನು ಉಭಯ ದೇಶಗಳು ಆನಂದಿಸುತ್ತವೆ ಎಂದು ಅವರು ಗಮನ ಸೆಳೆದರು. ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಉಂಟಾದ ವಿನಾಶಕ್ಕಾಗಿ ಪ್ರಧಾನ ಮಂತ್ರಿಗಳು ಅಧ್ಯಕ್ಷ ಟಿನುಬು ಅವರಿಗೆ ಸಹಾನುಭೂತಿಗಳನ್ನು ತಿಳಿಸಿದರು. ಪರಿಹಾರ ಸಾಮಗ್ರಿಗಳು ಮತ್ತು ಔಷಧಿಗಳೊಂದಿಗೆ ಸಕಾಲಿಕ ನೆರವಿಗಾಗಿ ಪ್ರಧಾನ ಮಂತ್ರಿಯವರಿಗೆ ಅಧ್ಯಕ್ಷ ಟಿನುಬು ಅವರು ಧನ್ಯವಾದ ಅರ್ಪಿಸಿದರು.

ದ್ವಿಪಕ್ಷೀಯ ಸಹಕಾರಯ ಕುರಿತು ಉಭಯ ನಾಯಕರು ನಡೆಯುತ್ತಿರುವ  ಪರಿಶೀಲಿಸಿದರು. ಭಾರತ-ನೈಜೀರಿಯಾ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದರು. ಬಾಂಧವ್ಯಗಳ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ವ್ಯಾಪಾರ, ಹೂಡಿಕೆ, ಶಿಕ್ಷಣ, ಇಂಧನ, ಆರೋಗ್ಯ, ಸಂಸ್ಕೃತಿ ಮತ್ತು ಜನರಿಂದ ಜನರ ಸಂಬಂಧಗಳ ಕ್ಷೇತ್ರಗಳಲ್ಲಿ ಸಹಯೋಗಕ್ಕೆ ಅಪಾರ ಸಾಮರ್ಥ್ಯವಿದೆ ಎಂದು ತಿಳಿಸಿದರು. 

ನೈಜೀರಿಯಾಕ್ಕೆ ಕೃಷಿ, ಸಾರಿಗೆ, ಕೈಗೆಟುಕುವ ಔಷಧಿ, ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲ್ ರೂಪಾಂತರ ಕುರಿತು ಪ್ರಧಾನಮಂತ್ರಿ ವಿವರಿಸಿದರು. 

ಭಾರತವು ನೀಡುವ ಅಭಿವೃದ್ಧಿ ಸಹಕಾರ ಪಾಲುದಾರಿಕೆ ಮತ್ತು ಸ್ಥಳೀಯ ಸಾಮರ್ಥ್ಯಗಳು, ಕೌಶಲ್ಯಗಳು ಮತ್ತು ವೃತ್ತಿಪರ ಪರಿಣತಿಯನ್ನು ರಚಿಸುವಲ್ಲಿ ಅದರ ಅರ್ಥಪೂರ್ಣ ಪ್ರಭಾವವನ್ನು ಅಧ್ಯಕ್ಷ ಟಿನುಬು ಶ್ಲಾಘಿಸಿದರು. ಉಭಯ ನಾಯಕರು ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚಿಸಿದರು. ಭಯೋತ್ಪಾದನೆ, ಕಡಲ್ಗಳ್ಳತನ ಮತ್ತು ಮೂಲಭೂತವಾದದ ವಿರುದ್ಧ ಜಂಟಿಯಾಗಿ ಹೋರಾಡುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಉಭಯ ನಾಯಕರು ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆಯೂ ಚರ್ಚಿಸಿದರು. ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಶೃಂಗಸಭೆಯ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳ ಕಳವಳವನ್ನು ವರ್ಧಿಸಲು ಭಾರತದ ಪ್ರಯತ್ನಗಳನ್ನು ಅಧ್ಯಕ್ಷ ಟಿನುಬು ಶ್ಲಾಘಿಸಿದರು. ಗ್ಲೋಬಲ್ ಸೌತ್‌ನ ಅಭಿವೃದ್ಧಿ ಆಕಾಂಕ್ಷೆಗಳನ್ನು ಪೂರೈಸಲು ಒಟ್ಟಿಗೆ ಕೆಲಸ ಮಾಡಲು ಉಭಯ ನಾಯಕರು ಒಪ್ಪಿಕೊಂಡರು. ECOWAS ನ ಅಧ್ಯಕ್ಷತೆ ಬಗ್ಗೆ ನೈಜೀರಿಯಾ ವಹಿಸಿದ ಪಾತ್ರ ಮತ್ತು ಬಹುಪಕ್ಷೀಯ ಮತ್ತು ಇತರೆ ಕೊಡುಗೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ ಮತ್ತು ಇಂಟರ್‌ ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್‌ನ ನೈಜೀರಿಯಾದ ಸದಸ್ಯತ್ವವನ್ನು ಪ್ರಸ್ತಾಪಿಸಿದ ಪ್ರಧಾನಿ, ಭಾರತವು ಪ್ರಾರಂಭಿಸಿದ ಹಸಿರು ಉಪಕ್ರಮಗಳಿಗೆ ಸೇರಲು ಇದೇ ಸಂದರ್ಭದಲ್ಲಿ ಆಹ್ವಾನಿಸಲಾಯಿತು.

ಮೂರು ತಿಳುವಳಿಕೆ ಜ್ಞಾಪಕ ಪತ್ರಗಳು – ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಕಸ್ಟಮ್ಸ್ ಸಹಕಾರ ಮತ್ತು ಸರ್ವೇ ಸಹಕಾರ – ಸಹಿ ಹಾಕಲಾಯಿತು. ಇದಾದ ನಂತರ ಪ್ರಧಾನಮಂತ್ರಿಯವರ ಗೌರವಾರ್ಥ ರಾಜ್ಯ ಔತಣಕೂಟ ಏರ್ಪಡಿಸಲಾಗಿತ್ತು.

 

*****