Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾ ದೇಶಗಳಿಗೆ ಐದು ದಿನಗಳ ಭೇಟಿಗೆ ತೆರಳುವ ಮುನ್ನಾ ಹೇಳಿಕೆ ನೀಡಿದ ಪ್ರಧಾನಮಂತ್ರಿ


ನಾನು ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾ ದೇಶಗಳಿಗೆ ಐದು ದಿನಗಳ ಭೇಟಿಯನ್ನು ಕೈಗೊಳ್ಳುತ್ತಿದ್ದೇನೆ.

ಪಶ್ಚಿಮ ಆಫ್ರಿಕಾದಲ್ಲಿರುವ  ನಮ್ಮ ದೇಶದ ನಿಕಟ ಪಾಲುದಾರರಾಗಿರುವ ನೈಜೀರಿಯಾಕ್ಕೆ, ಘನತೆವೆತ್ತ ಅಧ್ಯಕ್ಷ ಶ್ರೀ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ ಭೇಟಿ ನೀಡುತ್ತಿದ್ದೇನೆ.  ಇದು ಆ ದೇಶಕ್ಕೆ ನನ್ನ ಮೊದಲ ಭೇಟಿಯಾಗಿದೆ. ನನ್ನ ಭೇಟಿಯು ಪ್ರಜಾಪ್ರಭುತ್ವ ಮತ್ತು ಬಹುತ್ವದಲ್ಲಿ ಹಂಚಿಕೊಂಡ ನಂಬಿಕೆಯನ್ನು ಆಧರಿಸಿದ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನೂ ಸಧೃಡಗೊಳಿಸಲು ಮತ್ತು ಇನ್ನೂ ಉತ್ತಮವಾಗಿ ನಿರ್ಮಿಸಲು ಒಂದು ಅವಕಾಶವಾಗಿದೆ. 

ಹಿಂದಿಯಲ್ಲಿ ನನಗೆ ಆತ್ಮೀಯ ಸ್ವಾಗತ ಸಂದೇಶಗಳನ್ನು ಕಳುಹಿಸಿದ ನೈಜೀರಿಯಾದ ಭಾರತೀಯ ಸಮುದಾಯ ಮತ್ತು ಸ್ನೇಹಿತರನ್ನು ಕೂಡಾ ಭೇಟಿಯಾಗಲು ನಾನು ಕುತೂಹಲದಿಂದ ಅವಕಾಶವನ್ನು ಎದುರು ನೋಡುತ್ತಿದ್ದೇನೆ. ಬ್ರೆಜಿಲ್ ನಲ್ಲಿ, ನಾನು 19ನೇ ಜಿ-20 ಶೃಂಗಸಭೆಯಲ್ಲಿ ತ್ರಿದೇಶ ಒಕ್ಕೂಟ ಸದಸ್ಯನಾಗಿ ಪಾಲ್ಗೊಳ್ಳುತ್ತೇನೆ. ಕಳೆದ ವರ್ಷ, ಭಾರತದ ಯಶಸ್ವಿ ಅಧ್ಯಕ್ಷೀಯತೆಯ ಜಿ-20 ಅನ್ನು ಜನರ ಜಿ-20 ಎಂಬ ಮನ್ನಣೆ ಹಾಗೂ ಪ್ರಶಂಸೆಗಳ ಮಟ್ಟಕ್ಕೆ  ಏರಿಸಿತು ಮತ್ತು ಜಾಗತಿಕ ದಕ್ಷಿಣದೇಶಗಳ ಆದ್ಯತೆಗಳನ್ನು ತನ್ನ ಕಾರ್ಯಸೂಚಿಯಲ್ಲಿ ಮುಖ್ಯವಾಹಿನಿಗೆ ತಂದಿತು. ಈ ವರ್ಷ, ಬ್ರೆಜಿಲ್ ಭಾರತದ ಪರಂಪರೆಯನ್ನು ಮುಂದುವರಿಸುತ್ತಿದೆ.

ಈ ಬಾರಿಯೂ , “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ” ಎಂಬ ನಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಅರ್ಥಪೂರ್ಣ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ಹಲವಾರು ಇತರ ನಾಯಕರೊಂದಿಗೆ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ನಾನು ಸಿಗುವ ಎಲ್ಲಾ ಅವಕಾಶವನ್ನು ಬಳಸುತ್ತೇನೆ.

ಗಯಾನಾಕ್ಕೆ ನನ್ನ ಭೇಟಿ, ಘನತೆವೆತ್ತ ಅಧ್ಯಕ್ಷ ಶ್ರೀ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ   ಅವರ ಆಹ್ವಾನದ ಮೇರೆಗೆ ಹಮ್ಮಿಕೊಳ್ಳಲಾಗಿದೆ. ಅವರ ದೇಶದಲ್ಲಿ 50 ವರ್ಷಗಳ ನಂತರ, ಭಾರತದ ಪ್ರಧಾನಮಂತ್ರಿಯನ್ನು ಅವರು ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ. ಪರಸ್ಪರ ಹಂಚಿಕೆಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಆಧರಿಸಿದ ನಮ್ಮ ಅನನ್ಯ ಸಂಬಂಧಕ್ಕೆ ಕಾರ್ಯತಂತ್ರದ ನಿರ್ದೇಶನವನ್ನು ನೀಡುವ ಕುರಿತು ನಾವು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಸುಮಾರು 185 ವರ್ಷಗಳ ಹಿಂದೆ ಆ ದೇಶಕ್ಕೆ ಭಾರತೀಯ ಸಮುದಾಯಗಳು ವಲಸೆ ಬಂದಿವೆ. ಈ ಅತ್ಯಂತ ಹಳೆಯ ಭಾರತೀಯ ಸಮುದಾಯಗಳು ನನಗೆ ಹಿಂದಿ ಭಾಷೆಯಲ್ಲಿ ಕಳುಹಿಸಿಕೊಟ್ಟ ಸಂದೇಶಕ್ಕೆ ನಾನು ಗೌರವವನ್ನು ಸಲ್ಲಿಸುತ್ತೇನೆ ಹಾಗೂ, ನಮ್ಮ ಸಹ ಪ್ರಜಾಪ್ರಭುತ್ವ ದೇಶವಾದ ಅವರ ದೇಶದ ಸಂಸತ್ತಿನಲ್ಲಿ ನಾನು ಭಾಷಣ ಮಾಡಲಿದ್ದೇನೆ.

ಈ ಭೇಟಿಯ ಸಮಯದಲ್ಲಿ, 2ನೇ ಭಾರತ-ಕಾರಿಕೊಮ್ ಶೃಂಗಸಭೆಗಾಗಿ ಕೆರಿಬಿಯನ್ ಪಾಲುದಾರ ರಾಷ್ಟ್ರಗಳ ನಾಯಕರನ್ನು ಸಹ ನಾನು ಭೇಟಿಯಾಗಲಿದ್ದೇನೆ. ಎಲ್ಲಾ ವಿಧದಲ್ಲೂ ಸಹಮತದ ಮೂಲಕ ಕೆರಿಬಿಯನ್ ಪಾಲುದಾರ ರಾಷ್ಟ್ರಗಳ ಹಾಗೂ ನಾವು ಒಟ್ಟಿಗೆ ನಿಂತಿದ್ದೇವೆ. ಶೃಂಗಸಭೆಯು ಐತಿಹಾಸಿಕ ಸಂಬಂಧಗಳನ್ನು ನವೀಕರಿಸಲು ಮತ್ತು ಹೊಸ ಕ್ಷೇತ್ರಗಳ ಅವಕಾಶಗಳಿಗೆ ನಮ್ಮ ಸಹಕಾರವನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ.

 

*****