Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾಮೂಹಿಕ ಪ್ರಯತ್ನಗಳು ಸ್ವಚ್ಛತೆ ಮತ್ತು ಆರ್ಥಿಕ ವಿವೇಕ ಎರಡನ್ನೂ ಉತ್ತೇಜಿಸುವ ಜೊತೆಗೆ ಸುಸ್ಥಿರ ಫಲಿತಾಂಶ ನೀಡಬಲ್ಲದು: ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶೇಷ ಅಭಿಯಾನ 4.0 ಅನ್ನು ಇಂದು ಶ್ಲಾಘಿಸಿದ್ದಾರೆ. ಇದು ಭಾರತದ ಅತ್ಯಂತ ದೊಡ್ಡ ಅಭಿಯಾನವಾಗಿದ್ದು, ಇದರಡಿ ಬಳಸದ ವಸ್ತು (ಸ್ಕ್ರ್ಯಾಪ್) ಅನ್ನು ವಿಲೇವಾರಿ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ (2021 ರಿಂದ) ರೂ 2,364 ಕೋಟಿ ಸೇರಿದಂತೆ ಗಣನೀಯ ಫಲಿತಾಂಶಗಳನ್ನು ಸಾಧಿಸಲಾಗಿದೆ. ಸಾಮೂಹಿಕ ಪ್ರಯತ್ನಗಳು ಸ್ವಚ್ಛತೆ ಮತ್ತು ಆರ್ಥಿಕ ವಿವೇಕ ಎರಡನ್ನೂ ಉತ್ತೇಜಿಸುವುದಲ್ಲದೇ ಸುಸ್ಥಿರ ಫಲಿತಾಂಶ ನೀಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಕ್ಸ್ ನಲ್ಲಿ ಕೇಂದ್ರ ಸಚಿವರಾದ ಶ್ರೀ ಜಿತೇಂದ್ರ ಸಿಂಗ್ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿಗಳು ಹೀಗೆ ಬರೆದಿದ್ದಾರೆ:

“ಶ್ಲಾಘನೀಯ!

ಸಮರ್ಥ ನಿರ್ವಹಣೆ ಮತ್ತು ಸಕ್ರಿಯ ಕ್ರಮಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಈ ಪ್ರಯತ್ನವು ಉತ್ತಮ ಫಲಿತಾಂಶಗಳನ್ನು ಸಾಧ್ಯವಾಗಿಸಿದೆ. ಸ್ವಚ್ಛತೆ ಮತ್ತು ಆರ್ಥಿಕ ತಿಳುವಳಿಕೆ ಎರಡನ್ನೂ ಉತ್ತೇಜಿಸುತ್ತಾ ಸಾಮೂಹಿಕ ಪ್ರಯತ್ನಗಳು ಸುಸ್ಥಿರ ಫಲಿತಾಂಶಗಳೆಡೆಗೆ ಹೇಗೆ ಕೊಂಡೊಯ್ಯಬಹುದು ಎಂಬುದಕ್ಕೆ ಇದು ನಿದರ್ಶನವಾಗಿದೆ.”
 

 

*****