Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮುಂಬೈ ಮೆಟ್ರೋ ಲೈನ್ 3ರ ಆರೆ ಜೆವಿಎಲ್ ಆರ್ ನಿಂದ ಬಿಕೆಸಿ ವಿಭಾಗ ಉದ್ಘಾಟಣೆಯಾದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮುಂಬೈ ಜನತೆಗೆ ಅಭಿನಂದನೆ ಸಲ್ಲಿಸಿದರು

ಮುಂಬೈ ಮೆಟ್ರೋ ಲೈನ್ 3ರ ಆರೆ ಜೆವಿಎಲ್ ಆರ್ ನಿಂದ ಬಿಕೆಸಿ ವಿಭಾಗ ಉದ್ಘಾಟಣೆಯಾದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮುಂಬೈ ಜನತೆಗೆ ಅಭಿನಂದನೆ ಸಲ್ಲಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮುಂಬೈ ಮೆಟ್ರೋ ಲೈನ್ 3ನೇ, ಹಂತ -1ರ ಆರೆ ಜೋಗೇಶ್ವರಿ-ವಿಖ್ರೋಲಿ ಲಿಂಕ್ ರಸ್ತೆಯಿಂದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ವಿಭಾಗ ಉದ್ಘಾಟಣೆಯಾದ ಸಂದರ್ಭದಲ್ಲಿ ಮುಂಬೈ ಜನರನ್ನು ಅಭಿನಂದಿಸಿದರು. ಮುಂಬೈನ ಮೆಟ್ರೋ ಜಾಲ ವಿಸ್ತರಣೆಯಿಂದ ಮುಂಬೈ ಜನರಿಗೆ ‘ಸುಗಮ ಜೀವನವು’ ದೊರೆಯಲಿದೆ ಎಂದು ಅವರು ಹೇಳಿದರು. 

Xನ ಪೋಸ್ಟ್ ನಲ್ಲಿ, ಪ್ರಧಾನಮಂತ್ರಿಯವರು:

“ಮುಂಬೈನ ಮೆಟ್ರೋ ಜಾಲವು ವಿಸ್ತರಿಸಿದೆ, ಇದರಿಂದ ಜನರಿಗೆ ‘ಸುಗಮ ಜೀವನ’ ದೊರಕಲಿದೆ! ಮುಂಬೈ ಮೆಟ್ರೋ ಲೈನ್ 3ನೇ, ಹಂತ -1 ರ ಜೋಗೇಶ್ವರಿ-ವಿಖ್ರೋಲಿ ಲಿಂಕ್ ರಸ್ತೆಯಿಂದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ವಿಭಾಗವನ್ನು ಉದ್ಘಾಟಿಸಿದ್ದಕ್ಕಾಗಿ ಮುಂಬೈ ಜನರಿಗೆ ಅಭಿನಂದನೆಗಳು” ಎಂದು ಬರೆದಿದ್ದಾರೆ.

 

ಶ್ರೀ ಮೋದಿಯವರು ಮೆಟ್ರೋದಲ್ಲಿ ಪ್ರಯಾಣಿಸಿ ವಿದ್ಯಾರ್ಥಿಗಳು, ಯುವಕರು, ಮುಖ್ಯಮಂತ್ರಿ ‘ಮಾಝಿ ಲಡ್ಕಿ ಬಹಿನ್’ ಯೋಜನೆಯ ಫಲಾನುಭವಿಗಳು ಮತ್ತು ಮೆಟ್ರೋವನ್ನು ನಿರ್ಮಿಸಿದ ಶ್ರಮಿಕರೊಂದಿಗೆ ಸಂವಾದ ನಡೆಸಿದರು.

Xನ ಪೋಸ್ಟ್ ನಲ್ಲಿ ಅವರು:

“ವಿದ್ಯಾರ್ಥಿಗಳು, ಯುವಕರು, ಮುಖ್ಯಮಂತ್ರಿ ‘ಮಾಝಿ ಲಡ್ಕಿ ಬಹಿನ್’ ಯೋಜನೆಯ ಫಲಾನುಭವಿಗಳು ಮತ್ತು ಮೆಟ್ರೋ ನಿರ್ಮಿಸಿದ ಶ್ರಮಿಲರೊಂದಿಗೆ ಸಂವಹನ ನಡೆಸಲು ಸಂತೋಷವಾಗಿದೆ” ಎಂದು ಬರೆದಿದ್ದಾರೆ.

 

 

*****