Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ 29 ರಂದು 11,200 ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಿರುವ ಮತ್ತು ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 29 ರಂದು ಅಪರಾಹ್ನ ಸುಮಾರು 12.30 ಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಹಾರಾಷ್ಟ್ರದಲ್ಲಿ 11,200 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳ ಸಮರ್ಪಣೆ, ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಜಿಲ್ಲಾ ನ್ಯಾಯಾಲಯದಿಂದ ಸ್ವರ್ಗತೆ ವರೆಗಿನ ಮೆಟ್ರೋ ವಿಭಾಗವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದು, ಈ ಮೂಲಕ ಪುಣೆ – ಮೆಟ್ರೋ ರೈಲು ಯೋಜನೆ [ಹಂತ -1] ಪೂರ್ಣಗೊಳ್ಳಲಿದೆ. ಜಿಲ್ಲಾ ನ್ಯಾಯಾಲಯದಿಂದ ಸ್ವರ್ಗತೆ ವರೆಗೆ ಸುರಂಗ ಮಾರ್ಗವಿದ್ದು, ಇದರ ಯೋಜನಾ ಮೊತ್ತ 1,810 ಕೋಟಿ ರೂಪಾಯಿ ಆಗಿದೆ.

ಬಳಿಕ ಪ್ರಧಾನಮಂತ್ರಿಯವರು ಪುಣೆ ಹಂತ – 1 ಅಭಿವೃದ್ಧಿ ಯೋಜನೆಯಾದ  ಸ್ವರ್ಗೆ – ಕತ್ರಾ ನಡುವಿನ ವಿಸ್ತರಿತ ಮಾರ್ಗದ 2,955 ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ದಕ್ಷಿಣ ವಲಯದ ವಿಸ್ತರಿತ 5.46 ಕಿಲೋಮೀಟರ್ ಸುರಂಗ ಮಾರ್ಗವನ್ನು ಇದು ಒಳಗೊಂಡಿದ್ದು, ಮಾರ್ಕೆಟ್ ಯಾರ್ಡ್, ಪದ್ಮಾವತಿ ಮತ್ತು ಕತ್ರಾಜ್ ಎಂಬ ಮೂರು ನಿಲ್ದಾಣಗಳನ್ನು ಇದು ಒಳಗೊಂಡಿದೆ. 

ಪ್ರಧಾನಮಂತ್ರಿಯವರು 7,855 ಕೋಟಿ ರೂಪಾಯಿ ಮೊತ್ತದ ಪರಿವರ್ತನೆಯ ಭಾರತ ಸರ್ಕಾರದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಿರುವ ಬಿದ್ಕಿನ್ ಕೈಗಾರಿಕಾ ಪ್ರದೇಶವನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸರ್ಮಪಿಸಲಿದ್ದಾರೆ. ಮಹಾರಾಷ್ಟ್ರದ ಸಂಭಾಜಿನಗರ್ ನ ದಕ್ಷಿಣ ಭಾಗದ 20 ಕಿಲೋಮೀಟರ್ ದೂರದಲ್ಲಿ ಈ ಪ್ರದೇಶವಿದೆ.  ದೆಹಲಿ ಮುಂಬೈ ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಯೋಜನೆಯು ಮರಾಠವಾಡ ಪ್ರದೇಶದಲ್ಲಿ ಉಜ್ವಲ ಆರ್ಥಿಕ ಕೇಂದ್ರವಾಗಿ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಒಟ್ಟಾರೆ 6,400 ಕೋಟಿ ರೂಪಾಯಿ ಯೋಜನಾ ವೆಚ್ಚದ ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 3 ಹಂತಗಳಲ್ಲಿ ಇದನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.  

ಪ್ರಧಾನಮಂತ್ರಿಯವರು ಸೊಲ್ಲಾಪುರ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದು, ಇದು ಗಣನೀಯವಾಗಿ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲಿದೆ. ಇದರಿಂದ ವಿಶೇಷವಾಗಿ ವ್ಯಾಪಾರಿಗಳು, ವ್ಯಾಪಾರ ಪ್ರವಾಸಿಗರು ಮತ್ತು ಹೂಡಿಕೆದಾರರಿಗೆ ಅನುಕೂಲವಾಗಲಿದೆ. ಸೊಲ್ಲಾಪುರದ ಅಸ್ತಿತ್ವದಲ್ಲಿರುವ ಟರ್ಮಿನಲ್ ನಲ್ಲಿ ವಾರ್ಷಿಕವಾಗಿ ಸುಮಾರು 4.1 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುವಂತೆ ಇದನ್ನು ನವೀಕರಿಸಲಾಗಿದೆ.

ಭಿಡೆವಾಡದಲ್ಲಿ ಕ್ರಾಂತಿಜ್ಯೋತಿ ಸಾವಿತ್ರಿಭಾಯಿ ಫುಲೆ ಮೊದಲ ಬಾಲಕಿಯರ ಶಾಲೆಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.

 

*****