ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟವು ಹಣಕಾಸು ವರ್ಷ 2024-25 ರಿಂದ 2028-29ರ ಅವಧಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ – IV (ಪಿ.ಎಂ.ಜಿ.ಎಸ್.ವೈ-IV) ಅನುಷ್ಠಾನಕ್ಕಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ಮಾಡಿದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಅರ್ಹ 25,000 ಸಂಪರ್ಕವಿಲ್ಲದ ವಾಸಸ್ಥಳಗಳಿಗೆ ಹೊಸ ಸಂಪರ್ಕವನ್ನು ಒದಗಿಸಲು ಅಗತ್ಯವಿರುವ 62,500 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಮತ್ತು ಹೊಸ ಸಂಪರ್ಕ ರಸ್ತೆಗಳಲ್ಲಿ ನೂತನ ಸೇತುವೆಗಳ ನಿರ್ಮಾಣ / ಉನ್ನತೀಕರಣಕ್ಕೆ ಬೇಕಾದ ಹಣಕಾಸಿನ ನೆರವು ನೀಡಲಾಗುವುದು. ಈ ಯೋಜನೆಯ ಒಟ್ಟು ವೆಚ್ಚವು ರೂ.70,125 ಕೋಟಿಯಾಗಿರುತ್ತದೆ.
ಯೋಜನೆಯ ವಿವರಗಳು:
ಸಚಿವ ಸಂಪುಟದ ಅನುಮೋದನೆಯ ವಿವರಗಳು ಈ ಕೆಳಗಿನಂತಿವೆ.
i. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ – IV ಅನ್ನು ಆರ್ಥಿಕ ವರ್ಷ 2024-25 ರಿಂದ 2028-29ರ ವರೆಗೆ ಮುಂದುವರಿಸಿ ಯೋಜನೆಯನ್ನು ಪ್ರಾರಂಭಿಸಲಾಗುವುದು. ಈ ಯೋಜನೆಯ ಒಟ್ಟು ವೆಚ್ಚ ರೂ. 70,125 ಕೋಟಿಯಾಗಿರುತ್ತದೆ (ಕೇಂದ್ರ ಪಾಲು ರೂ. 49,087.50 ಕೋಟಿ ಮತ್ತು ರಾಜ್ಯದ ಪಾಲು ರೂ. 21,037.50 ಕೋಟಿ).
ii ಈ ಯೋಜನೆಯಡಿಯಲ್ಲಿ 25,000 ಸಂಪರ್ಕವಿಲ್ಲದ ವಾಸಸ್ಥಳಗಳು ಒಳಗೊಂಡಿರುತ್ತದೆ. ಅವುಗಳಲ್ಲಿ ಬಯಲು ಪ್ರದೇಶದಲ್ಲಿ 500+ ಜನಸಂಖ್ಯೆಯ ವಾಸಸ್ಥಾನಗಳು, ಈಶಾನ್ಯ ಭಾರತದ ಪ್ರದೇಶಗಳು/ ಗುಡ್ಡಗಾಡುಪ್ರದೇಶಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 250+ ಜನಸಂಖ್ಯೆಯ ವಾಸಸ್ಥಾನಗಳು, ವಿಶೇಷ ವರ್ಗದ ಪ್ರದೇಶಗಳು ( ಬುಡಕಟ್ಟು ಪಂಗಡ V, ಮಹತ್ವಾಕಾಂಕ್ಷೆಯ ಜಿಲ್ಲೆಗಳು/ತಾಲೂಕುಗಳು, ಮರುಭೂಮಿ ಪ್ರದೇಶಗಳು) ಮತ್ತು ಎಲ್.ಡಬ್ಲ್ಯೂ.ಇ ಪೀಡಿತ ಜಿಲ್ಲೆಗಳಲ್ಲಿ 100+ ವಾಸಸ್ಥಾನಗಳು (2011ರ ಜನಗಣತಿಯಂತೆ) ಒಳಗೊಂಡಿರುತ್ತದೆ.
iii ಈ ಯೋಜನೆಯಡಿಯಲ್ಲಿ 62,500 ಕಿ.ಮೀ. ಸರ್ವಋತು ರಸ್ತೆಗಳನ್ನು ಈ ಸೂಚಿತ ಸಂಪರ್ಕವಿಲ್ಲದ ವಾಸಸ್ಥಳಗಳಿಗೆ ಒದಗಿಸಲಾಗುವುದು. ಸರ್ವಋತು ರಸ್ತೆಯ ಜೋಡಣೆಯ ಉದ್ದಕ್ಕೂ ಅಗತ್ಯವಿರುವ ನೂತನ ಸೇತುವೆಗಳ ನಿರ್ಮಾಣವನ್ನು ಸಹ ಒದಗಿಸಲಾಗುವುದು.
ಪ್ರಯೋಜನಗಳು:
*****