ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಮಹಿಳೆಯರ 400 ಮೀಟರ್ ಟಿ20 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಅಥ್ಲೀಟ್ ದೀಪ್ತಿ ಜೀವಂಜಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ದೀಪ್ತಿಯವರ ಕೌಶಲ್ಯ ಮತ್ತು ದೃಢತೆ ಶ್ಲಾಘನೀಯ ಎಂದು ಹೊಗಳಿ ಪ್ರಧಾನಿ ಮೋದಿಯವರು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ:
“ಪ್ಯಾರಾಲಿಂಪಿಕ್ಸ್ 2024 ರ ಮಹಿಳೆಯರ 400 ಮೀಟರ್ ಟಿ20 ಪಂದ್ಯದಲ್ಲಿ ಕಂಚಿನ ಪದಕ ಗೆದ್ದಿರುವ ದೀಪ್ತಿ ಜೀವಂಜಿ ಅವರಿಗೆ ಅಭಿನಂದನೆಗಳು! ಅವರು ಅಸಂಖ್ಯಾತ ಜನರಿಗೆ ಸ್ಫೂರ್ತಿಯ ಮೂಲವಾಗಿದ್ದಾರೆ. ಅವರ ಕೌಶಲ್ಯ ಮತ್ತು ದೃಢತೆ ಶ್ಲಾಘನೀಯವಾಗಿದೆ. ” ಎಂದು ಬರೆದಿದ್ದಾರೆ.
*****
Congratulations to Deepthi Jeevanji for her spectacular Bronze medal win in the Women's 400M T20 at #Paralympics2024! She is a source of inspiration for countless people. Her skills and tenacity are commendable. #Cheer4Bharat pic.twitter.com/QqhaERCW0q
— Narendra Modi (@narendramodi) September 3, 2024