Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಕ್ಕಳ ಹುತಾತ್ಮರ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ ಪ್ರಧಾನ ಮಂತ್ರಿ

ಮಕ್ಕಳ ಹುತಾತ್ಮರ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ ಪ್ರಧಾನ ಮಂತ್ರಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೈವ್ ನಲ್ಲಿರುವ ಯುಕ್ರೇನ್ ನ ಇತಿಹಾಸದ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಮಕ್ಕಳ ಹುತಾತ್ಮರ ಮಲ್ಟಿಮೀಡಿಯಾ ಪ್ರದರ್ಶನಕ್ಕೆ ಭೇಟಿ ನೀಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೊಂದಿಗೆ ಯುಕ್ರೇನ್ ಅಧ್ಯಕ್ಷರಾದ ಘನತೆವೆತ್ತ ಶ್ರೀ ವೊಲೊಡಿಮಿರ್ ಜೆಲೆನ್ಸ್ಕಿಯವರೂ ಇದ್ದರು.

ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳ ಸ್ಮರಣಾರ್ಥ ಸ್ಥಾಪಿಸಲಾದ ಹೃದಯಸ್ಪರ್ಶಿ ಪ್ರದರ್ಶನದಿಂದ ಪ್ರಧಾನ ಮಂತ್ರಿಯವರು ತೀವ್ರ ಪ್ರಭಾವಿತರಾದರು. ಚಿಕ್ಕ ಮಕ್ಕಳ ದುರಂತದ ಬಗ್ಗೆ ಅವರು ದುಃಖ ವ್ಯಕ್ತಪಡಿಸಿ, ಅವರ ಗೌರವದ ಸಂಕೇತವಾಗಿ ಅವರ ನೆನಪಿನಲ್ಲಿ ಆಟಿಕೆಯನ್ನು ಇರಿಸಿದರು.

*****