ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೈವಿಧ್ಯಮಯ ನೈರ್ಮಲ್ಯ ಉತ್ಪನ್ನಗಳ ಮುಂಚೂಣಿ ತಯಾರಿಕಾ ಕಂಪೆನಿಯಾದ ಟಿ ಝೆಡ್ ಎಂ ಒ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಅಲಿನಾ ಪೋಸ್ಲೂಷ್ನೆ ಅವರನ್ನು ಭೇಟಿಯಾದರು.
ಭಾರತದಲ್ಲೇ ತಯಾರಿಕೆಗೆ ಉತ್ತೇಜನ ನೀಡುವ “ಮೇಕ್ ಇನ್ ಇಂಡಿಯಾ” ಅಭಿಯಾನ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ ಡಿ ಐ) ನೀತಿಗಳಲ್ಲಿನ ಇತ್ತೀಚಿನ ಉದಾರೀಕರಣ ಮೊದಲಾದ ಭಾರತದ ನೀತಿ ನಿರೂಪಣೆಗಳು ಮತ್ತು ಉಪಕ್ರಮಗಳ ಬಗ್ಗೆ ಪ್ರಧಾನಮಂತ್ರಿಗಳು ಬೆಳಕು ಚೆಲ್ಲಿದರು. ಭಾರತದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆ ಮತ್ತು ಹೂಡಿಕೆ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಟಿ ಝೆಡ್ ಎಂ ಒದ ವಿಸ್ತರಣಾ ಯೋಜನೆಗಳ ಬಗ್ಗೆ ಕೂಡ ಉಭಯರು ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಂಡರು.
ಭಾರತದ ಬೆಂಬಲ ಮತ್ತು ಅವಕಾಶಕ್ಕಾಗಿ ಪೋಸ್ಲೂಷ್ನೆ ಅವರು ಕೃತಜ್ಞತೆ ಸಲ್ಲಿಸಿದರು.
*****
Boosting business ties!
— PMO India (@PMOIndia) August 22, 2024
PM @narendramodi met Ms. Alina Posluszny, MD of TZMO India, a Polish manufacturer of diversified hygiene products and Mr. Gawel Lopinski, CEO of Billenium Pvt. Ltd., a leading Polish IT company. The PM highlighted the economic reforms and policy measures… pic.twitter.com/4AC1up6QkL