ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಕಾಲರ್ ಆಫ್ ದಿ ಆರ್ಡರ್ ಆಫ್ ಟಿಮೋರ್-ಲೆಸ್ಟೆ ನೀಡಿ ಗುರುತಿಸಿರುವ ಬಗ್ಗೆ ಟ್ವೀಟ್ ನಲ್ಲಿ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಪ್ರತಿಷ್ಠಿತ ಗೌರವವು ಭಾರತ ಮತ್ತು ಟಿಮೋರ್-ಲೆಸ್ಟೆ ನಡುವಿನ ಆಳವಾದ ಸಂಬಂಧ ಮತ್ತು ಪರಸ್ಪರ ಗೌರವವನ್ನು ಎತ್ತಿ ತೋರಿಸುತ್ತದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು,
“ರಾಷ್ಟ್ರಪತಿಯವರಿಗೆ ಗ್ರ್ಯಾಂಡ್ ಕಾಲರ್ ಆಫ್ ದಿ ಆರ್ಡರ್ ಆಫ್ ಟಿಮೋರ್-ಲೆಸ್ಟೆ ನೀಡಿ ಗೌರವಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಇದು ನಮ್ಮ ಎರಡೂ ದೇಶಗಳ ನಡುವಿನ ಬಲವಾದ ಬಾಂಧವ್ಯ ಮತ್ತು ಪರಸ್ಪರ ಗೌರವವನ್ನು ಪ್ರತಿಬಿಂಬಿಸುತ್ತದೆ. ಇದು ಹಲವಾರು ವರ್ಷಗಳಿಂದ ಸಾರ್ವಜನಿಕ ಜೀವನಕ್ಕೆ ಅವರು ನೀಡಿದ ಸ್ಮರಣೀಯ ಕೊಡುಗೆಯ ಮಾನ್ಯತೆಯಾಗಿದೆ” ಎಂದು ಹೇಳಿದ್ದಾರೆ.
*****
It is a proud moment for us to see Rashtrapati Ji being honoured with the Grand-Collar of the Order of Timor-Leste, the nation’s highest civilian award.
— Narendra Modi (@narendramodi) August 11, 2024
This reflects the strong ties and mutual respect between our countries. It is also a recognition of her monumental… pic.twitter.com/t7UgmwcEtu