Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

8 ವರ್ಷ ಪೂರ್ಣಗೊಳಿಸಿದ ಸರ್ಕಾರಿ ಇ ಮಾರುಕಟ್ಟೆ(GeM) ವೇದಿಕೆ: ಪ್ರಧಾನಮಂತ್ರಿಯವರು ಮಧ್ಯಸ್ಥಗಾರರನ್ನು ಅಭಿನಂದಿಸಿದ್ದಾರೆ


ಸರ್ಕಾರಿ ಇ ಮಾರುಕಟ್ಟೆ(GeM) ವೇದಿಕೆ 8 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಬಂಧಪಟ್ಟ ಎಲ್ಲರನ್ನೂ ಅಭಿನಂದಿಸಿದ್ದಾರೆ. 

ಈ ವೇದಿಕೆಯು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗ(OBC) ಸಮುದಾಯಗಳಿಗೆ ಅವಕಾಶಗಳನ್ನು ಒದಗಿಸಿದೆ. ಮಹಿಳಾ ಸಬಲೀಕರಣ ಹೆಚ್ಚಿಸುವಲ್ಲಿ ಬಹಳ ದೂರ ಸಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು;

“ಇಂದು ಎಂಟು ವರ್ಷಗಳನ್ನು ಪೂರೈಸಿರುವ ಜಿಇಎಮ್ ವೇದಿಕೆಯ ಎಲ್ಲಾ ಪಾಲುದಾರರಿಗೆ ಅಭಿನಂದನೆಗಳು. ಈ ವೇದಿಕೆ ಮೂಲಕ ಸುಮಾರು 10 ಲಕ್ಷ ಕೋಟಿ ರೂಪಾಯಿಗಳಷ್ಟು ಒಟ್ಟು ಮಾರಾಟವಾಗಿದೆ. ಅದಕ್ಕಿಂತ ಮುಖ್ಯವಾಗಿ, ಇದು ಉದ್ಯಮಿಗಳಿಗೆ, ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು(MSMEs), ಸ್ಟಾರ್ಟ್‌ಅಪ್‌ಗಳು ಮತ್ತು ಎಸ್ ಸಿ, ಎಸ್ ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ಮಹಿಳಾ ಸಬಲೀಕರಣವನ್ನು ಹೆಚ್ಚಿಸುವಲ್ಲಿ ಕೂಡ ಸರ್ಕಾರಿ ಇ ಮಾರುಕಟ್ಟೆ ವೇದಿಕೆ ಬಹಳ ದೂರ ಸಾಗಿದೆ”. 

 

 

*****