Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂವಿಧಾನ ವಿಧಿ 370 ಮತ್ತು 35 (ಎ) ರದ್ದತಿಗೆ ಐದು ವರ್ಷ – ಪ್ರಧಾನಮಂತ್ರಿ ಸ್ಮರಣೆ


ಸಂವಿಧಾನ ವಿಧಿ 370 ಮತ್ತು 35 (ಎ) ರದ್ದು ಮಾಡಿದ ಸಂಸತ್ತಿನ ಐದು ವರ್ಷಗಳ ಹಿಂದಿನ ನಿರ್ಧಾರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ನೆನಪಿಸಿಕೊಂಡು ಅದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನಲ್ಲಿ ಪ್ರಗತಿ ಮತ್ತು ಸಮೃದ್ಧಿಯ ಹೊಸ ಶಕೆಯ ಆರಂಭಕ್ಕೆ ನಾಂದಿಯಾದ ಆನಂದಬಾಷ್ಪದ ಕ್ಷಣ ಎಂದು ಉದ್ಗರಿಸಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

“ಭಾರತದ ಸಂಸತ್ತು ಸಂವಿಧಾನ ವಿಧಿ 370 ಮತ್ತು 35 (ಎ) ರದ್ದು ಮಾಡಿ ಇಂದಿಗೆ ಐದು ವರ್ಷಗಳಾಗಿದ್ದು ಇದು ರಾಷ್ಟ್ರದ ಇತಿಹಾಸದಲ್ಲಿ ಆನಂದಬಾಷ್ಪದ ಕ್ಷಣವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನಲ್ಲಿ ಪ್ರಗತಿ ಮತ್ತು ಸಮೃದ್ಧಿಯ ಹೊಸ ಯುಗದ ಆರಂಭವಾಗಿತ್ತು. ಅಂದರೆ ಈ ಪ್ರದೇಶಗಳಲ್ಲಿ ಭಾರತದ ಸಂವಿಧಾನವನ್ನು ಅದರ ರಚಯಿತ ಮಹನೀಯರ ಆಶಯದಂತೆ ಅನುಷ್ಠಾನಕ್ಕೆ ತರಲಾಯಿತು. ಈ ರದ್ದತಿಯೊಂದಿಗೆ ಅಭಿವೃದ್ಧಿಯ ಫಲಗಳಿಂದ ವಂಚಿತರಾದ ಮಹಿಳೆಯರು, ಯುವಕರು, ಹಿಂದುಳಿದ ವರ್ಗಗಳು, ಬುಡಕಟ್ಟು ಸಮುದಾಯ, ದುರ್ಬಲ ವರ್ಗದವರಿಗೆ ಭದ್ರತೆ, ಗೌರವ ಮತ್ತು ಅವಕಾಶ ಲಭಿಸಿತು. ಅದೇ ವೇಳೆ, ದಶಕಗಳಿಂದ ಜಮ್ಮು ಮತ್ತು ಕಾಶ್ಮೀರವನ್ನು ಬಾಧಿಸುತ್ತಿದ್ದ ಭ್ರಷ್ಟಾಚಾರ ನಿಯಂತ್ರಣವನ್ನು ಖಾತರಿಪಡಿಸಿತು.

ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಜನರ ಅಭ್ಯುದಯಕ್ಕಾಗಿ ಮತ್ತು ಅವರ ಆಶೋತ್ತರಗಳನ್ನು ಈಡೇರಿಸಲು ಕಾರ್ಯ ನಿರ್ವಹಿಸುತ್ತಲಿರಲಿದೆ ಎಂದು ನಾನು ಭರವಸೆ ನೀಡುತ್ತೇನೆ.”
 

 

 

*****