Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಲೆಕ್ಟ್ರಾನಿಕ್ಸ್ ಕ್ಷೇತ್ರದ ರಫ್ತಿನಲ್ಲಿ ಭಾರತದ ಪ್ರಗತಿಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಎಲೆಕ್ಟ್ರಾನಿಕ್ಸ್ ಕ್ಷೇತ್ರದ ರಫ್ತಿನಲ್ಲಿ ಭಾರತವು ಸಾಧಿಸಿದ ಪ್ರಗತಿಯ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತವು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ರಫ್ತಿನಲ್ಲಿ ಜಾಗತಿಕವಾಗಿ ಅಗ್ರ 3ನೇ ಸ್ಥಾನವನ್ನು ತಲುಪಿದೆ. ಶ್ರೀ ಮೋದಿಯವರು ಈ ಶ್ರೇಯಸ್ಸನ್ನು ಯುವ ಶಕ್ತಿಗೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ತೀವ್ರತೆಯನ್ನು ಮುಂದುವರಿಸಲು ಭಾರತವು ಬದ್ಧವಾಗಿದೆ ಎಂದು ಪ್ರಧಾನಿಯವರು ಹೇಳಿದ್ದಾರೆ.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು X  ಪೋಸ್ಟ್ ನಲ್ಲಿ ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಈಗ ಅಗ್ರ 3ನೇ ಸ್ಥಾನ ಪಡೆದಿದೆ ಎಂದು ಮಾಹಿತಿ ನೀಡಿದರು. ಭಾರತದಿಂದ ಆಪಲ್ ಐಫೋನ್ ರಫ್ತಿನ ಹೆಚ್ಚಳದಿಂದಾಗಿ, ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನವು, ರತ್ನಗಳು ಮತ್ತು ಆಭರಣಗಳನ್ನು ಹಿಂದಿಕ್ಕಿ 2024-25ರ ಏಪ್ರಿಲ್-ಜೂನ್ ತ್ರೈಮಾಸಿಕದ ಅಂತ್ಯದ ವೇಳೆಗೆ ಭಾರತದ ಅಗ್ರ 10 ರಫ್ತುಗಳಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅವರು ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯು ಪ್ರಕಟಿಸಿದ ಸುದ್ದಿ ಲೇಖನವನ್ನು X ನಲ್ಲಿ ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವರ X ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು;

“ಇದು ನಿಜಕ್ಕೂ ಅಪಾರವಾಗಿ ಸಂತೋಷ ನೀಡುವ ವಿಷಯವಾಗಿದೆ. ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರತದ ಪರಾಕ್ರಮವು ನಮ್ಮ ನವೀನ ಯುವ ಶಕ್ತಿಯಿಂದ ಪ್ರೇರೇಪಿತವಾಗಿದೆ. ಸುಧಾರಣೆಗಳು ಮತ್ತು @makeinindia ಚಳುವಳಿಗೆ ಒತ್ತು ನೀಡಿರುವುದಕ್ಕೆ ಇದು ಸಾಕ್ಷಿಯಾಗಿದೆ.” 

“ಮುಂಬರುವ ದಿನಗಳಲ್ಲಿ ಈ ವೇಗವನ್ನು ತೀವ್ರಗೊಳಿಸಲು ಭಾರತವು ಬದ್ಧವಾಗಿದೆ” ಎಂದು ಹೇಳಿದ್ದಾರೆ.

 

 

*****